HomeLatest Newsಅಂತರ್ಜಾತಿ ಮದುವೆಯಾದ ಯುವತಿ: ಬಹಿಷ್ಕಾರಕ್ಕೆ ಹೆದರಿ ಶುದ್ಧೀಕರಣಕ್ಕೆ ತಲೆ ಬೋಳಿಸಿಕೊಂಡ ಕುಟುಂಬದವರು

ಅಂತರ್ಜಾತಿ ಮದುವೆಯಾದ ಯುವತಿ: ಬಹಿಷ್ಕಾರಕ್ಕೆ ಹೆದರಿ ಶುದ್ಧೀಕರಣಕ್ಕೆ ತಲೆ ಬೋಳಿಸಿಕೊಂಡ ಕುಟುಂಬದವರು

ಭುವನೇಶ್ವರ: ಯುವತಿ ಅನ್ಯ ಜಾತಿಯ ಯುವಕನನ್ನು ಮದುವೆಯಾಗಿದ್ದರಿಂದ ಆಕೆ ಮನೆಯ 40ಕ್ಕೂ ಅಧಿಕ ಮಂದಿ ತಲೆ ಬೋಳಿಸಿಕೊಂಡ ಘಟನೆ ಒಡಿಶಾದಲ್ಲಿ ನಡೆದಿದೆ.

ರಾಯಗಢ ಜಿಲ್ಲೆಯ ಬೈಗನಗುಡ ಗ್ರಾಮದ ಪರಿಶಿಷ್ಟ ವರ್ಗದ ಯುವತಿ ಪರಿಶಿಷ್ಟ ಜಾತಿಗೆ ಸೇರಿದ ಪಕ್ಕದ ಊರಿನ ಯುವಕನನ್ನು ಮದುವೆಯಾಗಿದ್ದಾಳೆ. ಇದರಿಂದ ಆಕೆಯ ಜಾತಿ ಹಾಳಾಗಿದ್ದು, ಮತ್ತೆ ನೀವು ಜಾತಿ ಸೇರಬೇಕಾದರೆ ತಲೆ ಬೋಳಿಸಿಕೊಂಡು ಪೂಜೆ ಮಾಡಬೇಕು ಎಂದು ಗ್ರಾಮಸ್ಥರ ಸಭೆಯ ತೀರ್ಮಾನಕ್ಕೆ ಮಣಿದ ಕುಟುಂಬದ 40ಕ್ಕೂ ಅಧಿಕ ಮಂದಿ ತಲೆ ಬೋಳಿಸಿಕೊಂಡಿದ್ದಾರೆ.

ಈ ಮದುವೆ ಎರಡೂ ಗ್ರಾಮಗಳ ನಡುವೆ ದ್ವೇಷಕ್ಕೆ ಕಾರಣವಾಗಿದೆ. ಇದಕ್ಕಾಗಿ ಕುಟುಂಬದ ಶುದ್ಧೀಕರಣ ಭಾಗವಾಗಿ ತಲೆ ಬೋಳಿಸುವ ಕಾರ್ಯ ನಡೆಸಲಾಗಿದೆ. ಶುದ್ಧೀಕರಣಕ್ಕೆ ಒಪ್ಪದಿದ್ದರೆ ಇಡೀ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರು. ಹೀಗಾಗಿ ತಲೆ ಬೋಳಿಸಿಕೊಂಡಿದ್ದಾರೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular