HomeIndiaಏಜೆನ್ಸಿ ಹೆಸರಲ್ಲಿ ಪಂಚತಾರಾ ಹೋಟೆಲ್‌ಗೆ ಬುಟ್ಟಾ ಹಾಕಿದ ಖದೀಮರು: 5.74 ಲಕ್ಷ ರೂ. ಬಿಲ್ ನೀಡದೆ...

ಏಜೆನ್ಸಿ ಹೆಸರಲ್ಲಿ ಪಂಚತಾರಾ ಹೋಟೆಲ್‌ಗೆ ಬುಟ್ಟಾ ಹಾಕಿದ ಖದೀಮರು: 5.74 ಲಕ್ಷ ರೂ. ಬಿಲ್ ನೀಡದೆ ಪರಾರಿಯಾದ ಕುಟುಂಬ ವಿರುದ್ಧ ಎಫ್‌ಐಆರ್!

ಉದಯಪುರದ ವಿಶ್ವಪ್ರಸಿದ್ಧ ಒಬೆರಾಯ್ ಉದೈವಿಲಾಸ್ ಐಷಾರಾಮಿ ಹೋಟೆಲ್‌ನಲ್ಲಿ 10 ದಿನಗಳ ಕಾಲ ತಂಗಿದ್ದ ದೆಹಲಿಯ ಕುಟುಂಬವೊಂದು ಬೃಹತ್ ಮೊತ್ತದ ಬಿಲ್ ಪಾವತಿಸದೆ ಜಾರಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ದಂಪತಿ ಹಾಗೂ ಇಬ್ಬರು ಮಕ್ಕಳಿದ್ದ ಈ ಕುಟುಂಬ ಆಗಸ್ಟ್ 14 ರಿಂದ 23 ರವರೆಗೆ ಹೋಟೆಲ್‌ನಲ್ಲಿದ್ದು, ಒಟ್ಟು 5.74 ಲಕ್ಷ ರೂಪಾಯಿ ಬಿಲ್ ಪಾವತಿಸದೇ ಹೊರಟುಹೋಗಿದೆ.

ಹೋಟೆಲ್ ಆಡಳಿತ ಮಂಡಳಿಯ ಪ್ರಕಾರ, ಟ್ರಾವೆಲ್ ಏಜೆನ್ಸಿ ಮೂಲಕ ಈ ಕೊಠಡಿಯನ್ನು ಕಾಯ್ದಿರಿಸಲಾಗಿತ್ತು. ಆದರೆ, ಆಗಸ್ಟ್ 24 ರಂದು ಚೆಕ್-ಔಟ್ ಮಾಡುವಾಗ ಅನುರಾಗ್ ಯಾದವ್ ಎಂಬ ವ್ಯಕ್ತಿ ಬಿಲ್ ಅನ್ನು ಟ್ರಾವೆಲ್ ಏಜೆನ್ಸಿಯವರೇ ಪಾವತಿಸುತ್ತಾರೆ ಎಂದು ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಸಬೂಬನ್ನು ಒಪ್ಪದ ಹೋಟೆಲ್ ಸಿಬ್ಬಂದಿ ನೀಡಿದ ದೂರಿನನ್ವಯ ಅಂಬಾಮತಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ಉದಯಪುರದ ಪಿಚೋಲಾ ಸರೋವರದ ದಂಡೆಯಲ್ಲಿರುವ ಈ ಒಬೆರಾಯ್ ಉದೈವಿಲಾಸ್ ಹೋಟೆಲ್ ಅತ್ಯಂತ ಐಷಾರಾಮಿ ಸೌಲಭ್ಯಗಳಿಗೆ ಹೆಸರಾಗಿದೆ. ‘ಯೇ ಜವಾನಿ ಹೈ ದಿವಾನಿ’ ಸಿನಿಮಾದ ಚಿತ್ರೀಕರಣವೂ ಇಲ್ಲೇ ನಡೆದಿತ್ತು. ಇಲ್ಲಿನ ಸಾಮಾನ್ಯ ಕೊಠಡಿಯೊಂದರ ಒಂದು ದಿನದ ಬಾಡಿಗೆ ಸುಮಾರು 46,500 ರೂಪಾಯಿಯಿಂದ ಆರಂಭವಾಗಿ 67,000 ರೂಪಾಯಿವರೆಗೂ ಇರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular