HomeKarnatakaಪ್ರಯಾಣಿಕ ಗಾಯಗೊಂಡರೆ ಕೂಡಲೇ ಚಿಕಿತ್ಸೆ ಕಲ್ಪಿಸಿ ಪೊಲೀಸರಿಗೆ ಮಾಹಿತಿ ನೀಡುವುದು ಬಸ್ ಚಾಲಕ, ನಿರ್ವಾಹಕನ ಕರ್ತವ್ಯ:...

ಪ್ರಯಾಣಿಕ ಗಾಯಗೊಂಡರೆ ಕೂಡಲೇ ಚಿಕಿತ್ಸೆ ಕಲ್ಪಿಸಿ ಪೊಲೀಸರಿಗೆ ಮಾಹಿತಿ ನೀಡುವುದು ಬಸ್ ಚಾಲಕ, ನಿರ್ವಾಹಕನ ಕರ್ತವ್ಯ: ಹೈಕೋರ್ಟ್ ಆದೇಶ; ವಿಳಂಬಕ್ಕೆ 17 ಲಕ್ಷ ರೂ. ದಂಡ

ಬೆಂಗಳೂರು: ಬಸ್ ಪ್ರಯಾಣಿಕ ಅಪಘಾತದಲ್ಲಿ ಗಾಯಗೊಂಡರೆ ಕೂಡಲೇ ಆತನಿಗೆ ವೈದ್ಯಕೀಯ ನೆರವು ಕಲ್ಪಿಸುವುದು ಮತ್ತು ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದು ಬಸ್ ಚಾಲಕ ಹಾಗೂ ನಿರ್ವಾಹಕನ ಕರ್ತವ್ಯ ಎಂದು ಹೈಕೋರ್ಟ್ ಹೇಳಿದೆ.

ಬಸ್ ನಿಂದ ಇಳಿಯುವಾಗ ಪ್ರಯಾಣಿಕನೊಬ್ಬ ರಸ್ತೆಗೆ ಬಿದ್ದು ಗಾಯಗೊಂಡು ಸಾವನ್ನಪ್ಪಿದ ಘಟನೆಯ ಕುರಿತಾಗಿ ದೂರು ನೀಡಲು ವಿಳಂಬ ಮಾಡಿದ ಪ್ರಕರಣದಲ್ಲಿ ಚಾಲಕ, ನಿರ್ವಾಹಕ ನಿರ್ಲಕ್ಷ ತೋರಿದ ಹಾಗೂ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಸಾರಿಗೆ ನಿಗಮ ಹಾಗೂ ಚಾಲಕನಿಗೆ 16.95 ಲಕ್ಷ ರೂ ಪರಿಹಾರವನ್ನು ಮೃತನ ಕುಟುಂಬಕ್ಕೆ ನೀಡಬೇಕೆಂದು ಹೈಕೋರ್ಟ್ ಆದೇಶಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ(NWKRTC) ಬಸ್ ನಿಂದ ಪ್ರಯಾಣಿಕ ಕೆಳಗೆ ಇಳಿಯುವಾಗ ಚಾಲಕ ದಿಢೀರ್ ಆಗಿ ಬಸ್ ಮುಂದಕ್ಕೆ ಚಾಲನೆ ಮಾಡಿದ್ದರಿಂದ ಪ್ರಯಾಣಿಕ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು. 2017ರ ಜನವರಿ 31 ರಂದು ಉತ್ತರ ಕನ್ನಡ ಜಿಲ್ಲೆಯ ಮಜಲಿಯಿಂದ ಕಾರವಾರಕ್ಕೆ ತೆರಳಿದ್ದ ಬೀರೇಶ್ವರ ಹಿರೇನ್ ಬಸ್ ನಿಂದ ಕೆಳಗಿಳಿಯುವ ವೇಳೆ ಚಾಲಕ ಧಿಡೀರ್  ಬಸ್ ಮುಂದಕ್ಕೆ ಚಲಾಯಿಸಿದ್ದರಿಂದ ನಿಯಂತ್ರಣ ಕಳೆದುಕೊಂಡ ಬೀರೇಶ್ವರ ಆಯತಪ್ಪಿ ರಸ್ತೆಗೆ ಬದಿಯ ಕಲ್ಲಿನ ಮೇಲೆ ಬಿದ್ದು ಸಾವನ್ನಪ್ಪಿದ್ದರು.

ಪ್ರಕರಣ ಸಂಬಂಧ ದೂರು ನೀಡಲು 4 ದಿನಗಳ ಕಾಲ ವಿಳಂಬ ಮಾಡಿದ ಮತ್ತು ಬಸ್ ಮುಂದೆ ಚಲಾಯಿಸುವಲ್ಲಿ ನಿರ್ಲಕ್ಷ, ಕರ್ತವ್ಯ ಲೋಪ ಪರಿಗಣಿಸಿದ ಹೈಕೋರ್ಟ್ ಈ ಆದೇಶ ನೀಡಿದೆ. ಮೃತ ಪ್ರಯಾಣಿಕನ ಕುಟುಂಬಕ್ಕೆ ಶೇಕಡ 6 ಬಡ್ಡಿ ದರದಲ್ಲಿ 16.95 ಲಕ್ಷ ರೂ. ಪರಿಹಾರ ನೀಡುವಂತೆ NWKRTC ಮತ್ತು ಘಟನೆಗೆ ಕಾರಣವಾದ ಬಸ್ ಚಾಲಕನಿಗೆ ನಿರ್ದೇಶನ ನೀಡಲಾಗಿದೆ. ನ್ಯಾಯಮೂರ್ತಿ ಕೃಷ್ಣಕುಮಾರ್ ಅವರ ಪೀಠ ಈ ಆದೇಶ ನೀಡಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular