HomeIndiaSHOCKING NEWS: ವಿದೇಶದಿಂದ ಮರಳಿದ ಕೆಲವೇ ಗಂಟೆಗಳಲ್ಲಿ ಪತ್ನಿಯನ್ನು ಹತ್ಯೆಗೈದ NRI

SHOCKING NEWS: ವಿದೇಶದಿಂದ ಮರಳಿದ ಕೆಲವೇ ಗಂಟೆಗಳಲ್ಲಿ ಪತ್ನಿಯನ್ನು ಹತ್ಯೆಗೈದ NRI

ಪಂಜಾಬ್: ವಿದೇಶದಿಂದ ಭಾರತಕ್ಕೆ ಮರಳಿದ ಕೆಲವೇ ಗಂಟೆಗಳಲ್ಲಿ ಪತಿಮಹಾಶಯನೊಬ್ಬ ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಘಟನೆ ಪಂಜಾಬ್ ನ ಕಪುರ್ತಲಾದ ಹಳ್ಳಿಯಲ್ಲಿ ನಡೆದಿದೆ.

ಅನಿವಾಸಿ ಭಾರತೀಯ ಸುಖದೇವ್ ಸಿಂಗ್ ಪತ್ನಿಯನ್ನೇ ಕೊಲೆಗೈದ ಆರೋಪಿ. 45 ವರ್ಷದ ಹರ್ ಪ್ರೀತ್ ಕೌರ್ ಮೃತ ಮಹಿಳೆ. ಇಟಲಿಯಿಂದ ಪಂಜಾಬ್ ನ ಸಂಧುಚಾಥಾ ಗ್ರಾಮದ ತನ್ನ ಮನೆಗೆ ಆಗಮಿಸಿದ್ದ ಸುಖದೇವ್, ಪತ್ನಿಯೊಂದಿಗೆ ಜಗಳ ಮಾಡಿದ್ದ. ಪತಿ-ಪತ್ನಿ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪತ್ನಿಯನ್ನು ತನ್ನ ಕೋಣೆಗೆ ಎಳೆದೊಯ್ದ ಪತಿ ಆಕೆಯ ತಲೆಯನ್ನು ಹಿಡಿದು ನೆಲದ ಮೇಲೆ ಪದೇ ಪದೇ ಜಜ್ಜಿ ಸಾಯಿಸಿದ್ದಾನೆ. ಕೃತ್ಯದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ. ಎಂದು ಕಪರ್ತಲಾ ಪೊಲೀಸ್ ವರಿಷ್ಠಾಧಿಕಾರಿ ವತ್ಸಲಾ ಗುಪ್ತಾ ತಿಳಿಸಿದ್ದಾರೆ.

ಪತ್ನಿಯನ್ನು ಬರ್ಬರವಾಗಿ ಹತ್ಯೆಗೈಯ್ಯಲು ನಿಖರ ಕಾರಣ ತಿಳಿದುಬಂದಿಲ್ಲ. ಆರೋಪಿ ಪತಿಗಾಗಿ ಶೋಧ ಕಾರ್ಯ ನಡೆಸಲಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular