ಎಲ್ಲಾ ಕಡೆ ಆವರಿಸುತ್ತಿರುವ AI (ಕೃತಕ ಬುದ್ಧಿಮತ್ತೆ) ಈಗ ಫುಡ್ ಆರ್ಡರ್ ಮಾಡಲು ಸಹ ಸಹಕಾರಿಯಾಗಲಿದೆ. ಭಾರತದ ಜನಪ್ರಿಯ ಆನ್‌ಲೈನ್ ಪುಲ್ ಡೆಲವರಿ ಅಪ್ಲಿಕೇಶನ್ ಆದ ಸ್ವಿಗ್ಗಿ ಬಹುದೊಡ್ಡ ಘೋಷಣೆಯೊಂದನ್ನು ಮಾಡಿದೆ.
ಭಾರತದಲ್ಲಿನ ಗ್ರಾಹಕರು ಈಗ ಆಹಾರ, ದಿನಸಿ ಪದಾರ್ಥಗಳನ್ನು ಆರ್ಡರ್ ಮಾಡಲು ಎಐ ಬಳಕೆ ಮಾಡಬಹುದು. ಹೌದು ಚಾರ್ಟ್ ಜಿಪಿಡಿ, ಜೆಮಿನಿ, ಕ್ಲೌಡ್ ಇತರ ಎಐ ಚಾಟ್ ಬಾಟ್‌ಗಳನ್ನು ಬಳಸಿಕೊಂಡು ಆಹಾರ ಆರ್ಡರ್ ಮಾಡಬಹುದು, ಹೋಟೆಲ್‌ಗಳ ಟೇಬಲ್ ಕಾಯ್ದಿರಿಸಬಹುದು.
ಸ್ವಿಗ್ಗಿ ಕಂಪನಿಯು ಮಾದರಿ ಕಾಂಟೆಕ್ಸ್ಟ್ ಪ್ರೊಟೊಕಾಲ್ (ಎಂಸಿಪಿ) ಅನ್ನು ಬಳಸಿ ಈ ಸೌಲಭ್ಯವನ್ನು ನೀಡುತ್ತಿದೆ ಎಂದು ಹೇಳಿದೆ. ಇದು ಎಐ ವ್ಯವಸ್ಥೆಗಳು ಮತ್ತು ಚಾಟ್ ಬಾಟ್‌ಗಳಿಗೆ ಪ್ಲಾಟ್‌ಫಾರ್ಮ್ ಡೇಟಾ, ಮೂಲಗಳು ಮತ್ತು ಸೇವೆಗಳಿಗೆ ಪ್ರವೇಶವನ್ನು ಪಡೆಯಲು ಅನುಕೂಲ ಮಾಡಿಕೊಡುವ ಓಪನ್ ಸೋರ್ಸ್ ಫ್ರೇಮ್ ವರ್ಕ್ ಆಗಿದೆ.
ಹೇಗೆ ಕೆಲಸ ಮಾಡುತ್ತದೆ?: ಉದಾಹರಣೆಗೆ ಬಳಕೆದಾರರು ಸರಳವಾಗಿ ಥಾಯ್ ಗ್ರೀನ್ ಕರಿಗೆ ಬೇಕಾಗುವ ಪದಾರ್ಥಗಳನ್ನು ಆರ್ಡರ್ ಮಾಡಿ ಅಥವಾ ತಮಗೆ ಇಷ್ಟವಾಗುವಂತಹ ಹೆಚ್ಚಿನ ದರದ ಬಿರಿಯಾನಿಯನ್ನು ಆರ್ಡರ್ ಮಾಡಿ ಎಂದು ಟೈಪ್ ಮಾಡಬಹುದು.
ನಂತರ ಎಐ ಬಳಕೆದಾರರ ಪರವಾಗಿ ಹುಡುಕುತ್ತದೆ. ಉತ್ಪನ್ನಗಳು ಮತ್ತು ರೆಸ್ಟೋರೆಂಟ್‌ಗಳನ್ನು ಹುಡುಕುತ್ತದೆ. ಆಯ್ಕೆಗಳನ್ನು ಹೋಲಿಕೆ ಮಾಡುತ್ತದೆ. ಕಾರ್ಟ್‌ಗೆ ವಸ್ತುಗಳನ್ನು ಸೇರಿಸುತ್ತದೆ.
ಉತ್ತಮ ಕೊಡುಗೆಗಳು ಮತ್ತು ಕೂಪನ್‌ಗಳನ್ನು ಅನ್ವಯಿಸುತ್ತದೆ. ವಿಳಾಸಗಳನ್ನು ಪಡೆಯುತ್ತದೆ ಮತ್ತು ಆರ್ಡರ್ ಮಾಡುತ್ತದೆ. ಆಹಾರ ವಿತರಣೆಯನ್ನು ಟ್ರ್ಯಾಕ್ ಮಾಡಲಿದೆ. ಇದೆಲ್ಲದಕ್ಕೂ ಜನರು ಕೇವಲ ಒಂದೇ ಪ್ರಾಂಪ್ಟ್ ಅನ್ನು ಬಳಸುತ್ತದೆ.
ಇದಕ್ಕಾಗಿ ನೀವು ನಿಮ್ಮ ಸ್ವಿಗ್ಗಿ ಖಾತೆಯನ್ನು ಚಾರ್ಟ್ ಜಿಪಿಟಿ, ಕ್ಲೌಡ್, ಜೆಮಿನಿ ಮತ್ತು ಇತರ ಎಐಗಳಿಗೆ ಸಂಪರ್ಕಿಸಲು, ನಿಮ್ಮ ಫೋನ್ ಅಪ್ಲಿಕೇಶನ್ ಅನ್ನು ತೆರೆಯಿರಿ ಮತ್ತು ಎಐ ಚಾರ್ಟ್ ಜಿಪಿಟಿ ಸೆಟ್ಟಿಂಗ್‌ಗಳನ್ನು ಬಳಸಿ ಬಳಿಕ ಆರ್ಡರ್‌ಗಳನ್ನು ಮಾಡಿ.
ಕನೆಕ್ಟರ್‌ಗಳ ಅಡಿಯಲ್ಲಿ, ಕಸ್ಟಮ್ ಕನೆಕ್ಟರ್/ ಅಪ್ಲಿಕೇಶನ್ ಅನ್ನು ಸೇರಿಸಿ, ನಂತರ ನೀವು ಸಂಪರ್ಕಿಸಲು ಬಯಸುವ ಸ್ವಿಗ್ಗಿ ಸೇವೆಯ ಎಐ ಅನ್ನು ದಾಖಲಿಸಿ. ಒಂದು ವಿಷಯವೆಂದರೆ, ಚಾರ್ಟ್ ಜಿಪಿಟಿ ಪ್ರಸ್ತುತ ಬಳಕೆದಾರರಿಗೆ ಎಂಸಿಪಿ ಸೇವೆಗಳೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ನೀಡುತ್ತದೆ.
ಆದರೆ ಜೆಮಿನಿ ಮತ್ತು ಇತರ ಎಐ ಚಾಟ್ ಬಾಟ್‌ಗಳು ಹಾಗೆ ಮಾಡುವ ಆಯ್ಕೆ ಇಲ್ಲದಿರಬಹುದು. ಅಲ್ಲದೆ, ಚಾರ್ಟ್ ಜಿಪಿಟಿಗೆ ಸ್ವಿಗ್ಗಿ ಎಂಸಿಪಿಯನ್ನು ಸೇರಿಸುವ ಕಾರ್ಯವಿಧಾನವು ಬಹಳ ವಿಸ್ತೃತವಾಗಿದೆ. ಇದು ನಿಮ್ಮ ಡೇಟಾವನ್ನು ಇತರರಿಗೆ ಬಹಿರಂಗಪಡಿಸಬಹುದು.

