HomeLatest NewsOMG : ಆಕಾಶದಲ್ಲಿ ಒಂದಲ್ಲ ಎರಡಲ್ಲ, ಬರೋಬ್ಬರಿ ನಾಲ್ಕು ಚಂದ್ರ : ಅಚ್ಚರಿಯ ವಿಡಿಯೋ ವೈರಲ್...

OMG : ಆಕಾಶದಲ್ಲಿ ಒಂದಲ್ಲ ಎರಡಲ್ಲ, ಬರೋಬ್ಬರಿ ನಾಲ್ಕು ಚಂದ್ರ : ಅಚ್ಚರಿಯ ವಿಡಿಯೋ ವೈರಲ್ |WATCH VIDEO

ಸೋಷಿಯಲ್ ಮೀಡಿಯಾದಲ್ಲಿ ನಾವು ಹಲವು ಅಚ್ಚರಿ ಘಟನೆಗಳ ಬಗ್ಗೆ ಕೇಳುತ್ತೇವೆ, ನೋಡುತ್ತೇವೆ. ಕೆಲವೊಂದನ್ನು ನಂಬುವುದು ಕಷ್ಟವಾಗುತ್ತದೆ. ಈಗ ಅಂತಹದ್ದೇ ಒಂದು ಆಶ್ಚರ್ಯಕರ ಘಟನೆ ನಡೆದಿದೆ.

ಈ ಸುದ್ದಿಯನ್ನು ಕೇಳಿದರೆ ನೀವು ಖಂಡಿತವಾಗಿಯೂ ಬೆರಗಾಗುತ್ತೀರಿ. ಹೌದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಆಕಾಶದಲ್ಲಿ ಒಂದರ ಬದಲಿಗೆ ನಾಲ್ಕು ಚಂದ್ರರು ಏಕಕಾಲದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಅಚ್ಚರಿಯ ಘಟನೆ ನಡೆದಿರುವುದು ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ನಲ್ಲಿ. ಆಕಾಶದಲ್ಲಿ ಏಕಕಾಲಕ್ಕೆ ನಾಲ್ಕು ಚಂದ್ರರು ಗೋಚರಿಸಿದ್ದಾರೆ. ಇದು ಕೇವಲ ಮಾತಲ್ಲ, ಇದಕ್ಕೆ ಸಾಕ್ಷಿಯಾಗಿ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಅದ್ಭುತ ‘ಆಪ್ಟಿಕಲ್ ಇಲ್ಯೂಷನ್’ (Optical Illusion) ಅಥವಾ ದೃಗ್ಭ್ರಮೆಯು ಭೂಮಿಯ ನೈಜ ಉಪಗ್ರಹದ ಎರಡೂ ಬದಿಗಳಲ್ಲಿ ಹಲವು ಚಂದ್ರರು ಇದ್ದಾರೆ ಎಂಬ ಭ್ರಮೆಯನ್ನು ಉಂಟುಮಾಡುತ್ತದೆ. ಈ ದೃಶ್ಯವನ್ನು ಕಂಡು ಸೇಂಟ್ ಜನರು ದಂಗಾಗಿದ್ದಾರೆ.

ಏನಿದು ‘ಪ್ಯಾರಾಸೆಲಿನ್’ (Paraselene)?
ಪ್ಯಾರಾಸೆಲಿನ್ ಅನ್ನು ಸಾಮಾನ್ಯವಾಗಿ ‘ಮೂನ್ ಡಾಗ್’ (Moon Dog) ಅಥವಾ ‘ನಕಲಿ ಚಂದ್ರ’ ಎಂದು ಕರೆಯಲಾಗುತ್ತದೆ. ಆಕಾಶದಲ್ಲಿ ಎತ್ತರದಲ್ಲಿರುವ ‘ಸಿರಸ್’ ಮೋಡಗಳಲ್ಲಿನ ತೆಳುವಾದ, ಷಡ್ಭುಜಾಕೃತಿಯ (Hexagonal) ಮಂಜುಗಡ್ಡೆಯ ಸ್ಫಟಿಕಗಳ ಮೂಲಕ ಚಂದ್ರನ ಬೆಳಕು ಹಾದುಹಂದಾಗ ಇದು ಸಂಭವಿಸುತ್ತದೆ. ಇದು ಒಂದು ವಾತಾವರಣದ ಆಪ್ಟಿಕಲ್ ವಿದ್ಯಮಾನವಾಗಿದ್ದು, ಮೋಡಗಳಲ್ಲಿನ ಐಸ್ ಕ್ರಿಸ್ಟಲ್ಗಳಿಂದ ಬೆಳಕು ವಕ್ರೀಭವನಗೊಂಡು ಚಂದ್ರನ ಪಕ್ಕದಲ್ಲಿ ಹೊಳೆಯುವ ಕಲೆಗಳು ಅಥವಾ ‘ನಕಲಿ ಚಂದ್ರರು’ ಕಾಣಿಸಿಕೊಳ್ಳುವಂತೆ ಮಾಡುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ಯಾರಾಸೆಲಿನ್ ಬಗ್ಗೆ ನಾಸಾ (NASA) ಏನು ಹೇಳುತ್ತದೆ?

ನಾಸಾದ ಪ್ರಕಾರ, ಇವು ಚಂದ್ರನಿಂದ 22 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚಿನ ಕೋನದಲ್ಲಿ ಕಾಣಿಸಿಕೊಳ್ಳುತ್ತವೆ. ಚಂದ್ರನ ನಿಜವಾದ ಬಿಂಬಕ್ಕೆ ಹೋಲಿಸಿದರೆ ಈ ಪ್ಯಾರಾಸೆಲಿನ್ ಅಥವಾ ನಕಲಿ ಚಂದ್ರರು ಸ್ವಲ್ಪ ಮಸುಕಾಗಿರುತ್ತಾರೆ. ಚಂದ್ರನು ಆಕಾಶದಲ್ಲಿ ಕೆಳಮಟ್ಟದಲ್ಲಿದ್ದಾಗ ಇವುಗಳನ್ನು ನೋಡುವುದು ಸುಲಭ. ‘ಸ್ಕೈಬ್ರೇರಿ’ ವರದಿಯ ಪ್ರಕಾರ, ಈ ನಕಲಿ ಚಂದ್ರರು ನಿಜವಾದ ಚಂದ್ರನಿರುವಷ್ಟೇ ಎತ್ತರದಲ್ಲಿ ಗೋಚರಿಸುತ್ತವೆ ಮತ್ತು ಮಂಜುಗಡ್ಡೆಯ ಸ್ಫಟಿಕಗಳ ಚಲನೆಗೆ ಅನುಗುಣವಾಗಿ ಇವುಗಳ ಗಾತ್ರ ಬದಲಾಗುತ್ತದೆ. ವಾತಾವರಣದಲ್ಲಿರುವ ಮಂಜುಗಡ್ಡೆಯ ಸ್ಫಟಿಕಗಳ ಮೂಲಕ ಬೆಳಕು ವಕ್ರೀಭವನಗೊಂಡಾಗ ಆಕಾಶದಲ್ಲಿ ಒಂದಕ್ಕಿಂತ ಹೆಚ್ಚು ಚಂದ್ರ ಅಥವಾ ಸೂರ್ಯರು ಇರುವಂತೆ ಭಾಸವಾಗುತ್ತದೆ. ಇದು ನಿಜವಾದ ಚಂದ್ರರಲ್ಲ, ಬದಲಿಗೆ ಇದೊಂದು ದೃಗ್ಭ್ರಮೆ (Optical Illusion) ಮಾತ್ರ.. ರಷ್ಯಾದಂತಹ ಅತೀ ಶೀತ ಪ್ರದೇಶಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular