HomeLatest Newsನಾನು ಬ್ರಾಹ್ಮಣ ಅನ್ನೋದು ಗೊತ್ತಿಲ್ವಾ?ಮಟನ್‌ ಬದಲು ಗೋಮಾಂಸ ನೀಡಿದ ರೆಸ್ಟೋರೆಂಟ್‌ ವಿರುದ್ಧ ನಟರ ಕಿಡಿ

ನಾನು ಬ್ರಾಹ್ಮಣ ಅನ್ನೋದು ಗೊತ್ತಿಲ್ವಾ?ಮಟನ್‌ ಬದಲು ಗೋಮಾಂಸ ನೀಡಿದ ರೆಸ್ಟೋರೆಂಟ್‌ ವಿರುದ್ಧ ನಟರ ಕಿಡಿ

ಕೋಲ್ಕತ್ತಾ: ಇಲ್ಲಿನ ಪಾರ್ಕ್ ಸ್ಟ್ರೀಟ್‌ನ ಜನಪ್ರಿಯ ‘ಒಲಿ ಪಬ್’ನಲ್ಲಿ ನಡೆದ ಘಟನೆಯೊಂದು ಈಗ ರಾಜಕೀಯ ಮತ್ತು ಸಾಮಾಜಿಕ ಸಂಘರ್ಷಕ್ಕೆ ನಾಂದಿ ಹಾಡಿದೆ. ಮಟನ್ ಬದಲಿಗೆ ಗೋಮಾಂಸ (Beef) ಬಡಿಸಲಾಗಿದೆ ಎಂದು ನಟ ಸಯಕ್ ಚಕ್ರವರ್ತಿ ಮಾಡಿದ ಆರೋಪದ ಬೆನ್ನಲ್ಲೇ, ಪಬ್‌ನ ವೇಟರ್ ಶೇಖ್ ನಸೀರುದ್ದೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಹಿನ್ನೆಲೆ: ಮಟನ್ ಅಂದುಕೊಂಡೇ ತಿಂದಿದ್ದರು
ಸಯಕ್ ಚಕ್ರವರ್ತಿ ಅವರು ತಮ್ಮ ಗೆಳತಿಯೊಂದಿಗೆ ಊಟಕ್ಕೆ ಹೋದಾಗ ‘ಮಟನ್ ಸ್ಟೀಕ್’ ಆರ್ಡರ್ ಮಾಡಿದ್ದರು. ಮೊದಲು ಬಂದ ಸ್ಟೀಕ್ ಅನ್ನು ಮಟನ್ ಎಂದೇ ಭಾವಿಸಿ ಸಯಕ್ ಸ್ವಲ್ಪ ತಿಂದಿದ್ದರು. ಆದರೆ, ಆರ್ಡರ್ ಮಾಡದಿದ್ದರೂ ಎರಡನೇ ಸ್ಟೀಕ್ ಟೇಬಲ್‌ಗೆ ಬಂದಾಗ ಅನುಮಾನಗೊಂಡು ಸಿಬ್ಬಂದಿಯನ್ನು ವಿಚಾರಿಸಿದರು. ಆಗ ವೇಟರ್, “ನೀವು ಒಂದು ಮಟನ್ ಮತ್ತು ಒಂದು ಬೀಫ್ ಸ್ಟೀಕ್ ಆರ್ಡರ್ ಮಾಡಿದ್ದೀರಿ” ಎಂದು ಹೇಳಿದಾಗ ಸಯಕ್ ಬೆಚ್ಚಿಬಿದ್ದಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಈ ಘಟನೆಯನ್ನು ಸಯಕ್ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. “ನಾನು ಬ್ರಾಹ್ಮಣ ಅನ್ನೋದು ನಿಮಗೆ ಗೊತ್ತಾ? ನನಗೆ ಗೊತ್ತಿಲ್ಲದೆ ಗೋಮಾಂಸ ತಿನ್ನುವಂತೆ ಮಾಡಿದ್ದೀರಿ” ಎಂದು ಅವರು ಸಿಬ್ಬಂದಿಯನ್ನು ಪ್ರಶ್ನಿಸುತ್ತಿರುವುದು ವಿಡಿಯೋದಲ್ಲಿದೆ. ಇದಕ್ಕೆ ಹೋಟೆಲ್ ಮ್ಯಾನೇಜರ್ ಮತ್ತು ವೇಟರ್ ಕ್ಷಮೆಯಾಚಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಯಕ್ ವಿರುದ್ಧ ಸೋಶಿಯಲ್ ಮೀಡಿಯಾ ಟ್ರೋಲ್

ಸಯಕ್ ಈ ವಿಡಿಯೋ ಹಂಚಿಕೊಂಡ ಬೆನ್ನಲ್ಲೇ ನೆಟ್ಟಿಗರು ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಕಾಮೆಂಟ್‌ಗಳು ಹೀಗಿವೆ:

ಸಯಕ್ ವಾದ: ನಾನು ಮಟನ್ ಅಂದುಕೊಂಡು ಸ್ವಲ್ಪ ತಿಂದಿದ್ದೆ. ಆಮೇಲೆ ವಿಷಯ ಗೊತ್ತಾದಾಗ ಮಾನಸಿಕವಾಗಿ ತುಂಬಾ ಕುಸಿದುಹೋಗಿದ್ದೇನೆ.”

ಸಾರ್ವಜನಿಕರ ಟೀಕೆ: ಕೆಲವರು ಇವರು ಬಿಜೆಪಿ ಏಜೆಂಟ್ ಎಂದು ಕರೆದರೆ, ಇನ್ನು ಕೆಲವರು ಗಲಭೆ ಎಬ್ಬಿಸಲು ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಟನ ಸ್ಪಷ್ಟೀಕರಣ: ಇದು ರಾಜಕೀಯವಲ್ಲ ವಿವಾದ ಹೆಚ್ಚಾದ ಕಾರಣ ಸಯಕ್ ಮೊದಲ ವಿಡಿಯೋ ಅಳಿಸಿ ಹೊಸದಾಗಿ ಸ್ಪಷ್ಟನೆ ನೀಡಿದ್ದಾರೆ:

ನನಗೆ ಮುಸ್ಲಿಂ ಸ್ನೇಹಿತರಿದ್ದಾರೆ, ಅವರ ಮನೆಯಲ್ಲಿ ಈದ್ ಆಚರಿಸುತ್ತೇನೆ. ಇದು ಹಿಂದೂ-ಮುಸ್ಲಿಂ ಜಗಳವಲ್ಲ.

ನನ್ನ ಅಸಮಾಧಾನ ಇರುವುದು ಹೋಟೆಲ್‌ನ ನಿರ್ಲಕ್ಷ್ಯದ ಮೇಲೆ ಮಾತ್ರ. ಇದೇ ತಪ್ಪು ಒಬ್ಬ ಹಿಂದೂ ವೇಟರ್ ಮಾಡಿದ್ದರೂ ನಾನು ಇದೇ ರೀತಿ ಪ್ರಶ್ನಿಸುತ್ತಿದ್ದೆ.”

ಗದ್ದಲದ ಸಮಯದಲ್ಲಿ ಇಂತಹ ತಪ್ಪುಗಳು ನಡೆದರೆ ಅದನ್ನು ಪ್ರಶ್ನಿಸದೆ ಸುಮ್ಮನಿರಲು ಸಾಧ್ಯವಿಲ್ಲ.

ಬ್ರಾಹ್ಮಣನಾದವನು ಬೀಫ್ ಬಡಿಸುವ ಹೋಟೆಲ್‌ಗೆ ಹೋಗಿದ್ದೇ ತಪ್ಪು. ಅಲ್ಲಿ ಎಲ್ಲವನ್ನೂ ಒಂದೇ ಪಾತ್ರೆಯಲ್ಲಿ ಬೇಯಿಸಿರುತ್ತಾರೆ ಎಂದು ಗೊತ್ತಿಲ್ಲವೇ?

ಒಲಿ ಪಬ್ ಬೀಫ್ ಸ್ಟೀಕ್‌ಗೆ ಫೇಮಸ್; ಅಲ್ಲಿಗೆ ಹೋಗಿ ಮಟನ್ ಕೇಳಿ ಆಮೇಲೆ ಗೋಳಾಡುವುದು ಎಂತಹ ಮೂರ್ಖತನ?

ಕಾನೂನು ಕ್ರಮ
ಸಯಕ್ ನೀಡಿದ ದೂರಿನ ಮೇರೆಗೆ ಕೋಲ್ಕತ್ತಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಶೇಖ್ ನಸೀರುದ್ದೀನ್ ಎಂಬ ಹೋಟೆಲ್ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಹೋಟೆಲ್‌ನ ಆಹಾರದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular