ಡಿಜಿಟಲ್ ಪಾವತಿ ಲೋಕದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿರುವ ಫೋನ್ ಪೇ (PhonePe), ಇನ್ಮುಂದೆ ಯುಪಿಐ (UPI) ಪಿನ್ ನಮೂದಿಸುವ ಕಿರಿಕಿರಿ ಇಲ್ಲದೆಯೇ ಹಣ ಪಾವತಿಸುವ ಹೊಸ ಫೀಚರ್ ಅನ್ನು ಪರಿಚಯಿಸಿದೆ.
ಆಧುನಿಕ ಬಯೋಮೆಟ್ರಿಕ್ ತಂತ್ರಜ್ಞಾನದ ಮೂಲಕ ಬಳಕೆದಾರರು ತಮ್ಮ ಬೆರಳಚ್ಚು (Fingerprint) ಅಥವಾ ಮುಖ ಗುರುತಿಸುವಿಕೆ (Face ID) ಮೂಲಕವೇ ಕೇವಲ ಕ್ಷಣಮಾತ್ರದಲ್ಲಿ ಆನ್ಲೈನ್ ಪಾವತಿ ಮಾಡಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಪಿನ್ ನಮೂದಿಸುವಾಗ ಎದುರಾಗುವ ಸುರಕ್ಷತೆಯ ಆತಂಕವನ್ನು ಹೋಗಲಾಡಿಸಲು ಈ ವ್ಯವಸ್ಥೆ ಜಾರಿಗೆ ಬಂದಿದ್ದು, ಗರಿಷ್ಠ 5,000 ರೂಪಾಯಿಗಳವರೆಗಿನ ಪಾವತಿಗಳಿಗೆ ಇದು ಲಭ್ಯವಿರಲಿದೆ.
ಫೋನ್ ಪೇ (PhonePe) ಆನ್ಲೈನ್ ಪಾವತಿಗಳನ್ನು ಮತ್ತಷ್ಟು ಸುಲಭಗೊಳಿಸಲು ಹೊಸ ತಂತ್ರಜ್ಞಾನವನ್ನು ಪರಿಚಯಿಸಿದೆ. ಇನ್ನು ಮುಂದೆ ಬಳಕೆದಾರರು ಯುಪಿಐ (UPI) ಪಿನ್ ನಮೂದಿಸದೆಯೇ ಕೇವಲ ಬೆರಳಚ್ಚು (Fingerprint) ಅಥವಾ ಮುಖ ಗುರುತಿಸುವಿಕೆ (Face ID)
ಫೋನ್ ಪೇ ಹೊಸ ಫೀಚರ್: ಪಿನ್ ನಂಬರ್ ಇಲ್ಲದೆಯೇ ಹಣ ಪಾವತಿ!
• ಬಯೋಮೆಟ್ರಿಕ್ ದೃಢೀಕರಣ: ಫೋನ್ ಪೇ ಇತ್ತೀಚೆಗೆ ಯುಪಿಐ ಪಾವತಿಗಳಿಗಾಗಿ ಬಯೋಮೆಟ್ರಿಕ್ ದೃಢೀಕರಣವನ್ನು ಪ್ರಾರಂಭಿಸಿದೆ. ಬಳಕೆದಾರರು ತಮ್ಮ ಸ್ಮಾರ್ಟ್ಫೋನ್ನಲ್ಲಿರುವ ಫಿಂಗರ್ಪ್ರಿಂಟ್ ಅಥವಾ ಫೇಸ್ ಐಡಿ ಬಳಸಿ ಹಣ ಪಾವತಿಸಬಹುದು.
• ಸುರಕ್ಷತೆ: ರದ್ದಿಯಿರುವ ಪ್ರದೇಶಗಳಲ್ಲಿ ಯುಪಿಐ ಪಿನ್ ನಮೂದಿಸುವಾಗ ಇತರರು ನೋಡುವ ಭಯವಿರುತ್ತದೆ. ಈ ಹೊಸ ವೈಶಿಷ್ಟ್ಯದಿಂದಾಗಿ ಪಿನ್ ನಮೂದಿಸುವ ಅಗತ್ಯವಿಲ್ಲದ ಕಾರಣ ವಂಚನೆ ನಡೆಯುವ ಸಾಧ್ಯತೆ ಕಡಿಮೆಯಾಗುತ್ತದೆ.
• ಪಾವತಿ ಮಿತಿ: ಬೆರಳಚ್ಚು ಅಥವಾ ಮುಖ ಗುರುತಿಸುವಿಕೆ ಮೂಲಕ ಗರಿಷ್ಠ 5,000 ರೂ.ವರೆಗೆ ಮಾತ್ರ ಪಾವತಿಸಲು ಅವಕಾಶವಿದೆ. ಅದಕ್ಕಿಂತ ಹೆಚ್ಚಿನ ಮೊತ್ತದ ವರ್ಗಾವಣೆಗೆ ಯುಪಿಐ ಪಿನ್ ಕಡ್ಡಾಯವಾಗಿರುತ್ತದೆ.
• ಲಭ್ಯತೆ: ಪ್ರಸ್ತುತ ಈ ಫೀಚರ್ ಕೇವಲ ಆಂಡ್ರಾಯ್ಡ್ (Android) ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಶೀಘ್ರದಲ್ಲೇ ಐಒಎಸ್ (iOS) ಬಳಕೆದಾರರಿಗೂ ಸಿಗಲಿದೆ.
ಬಯೋಮೆಟ್ರಿಕ್ ಪಾವತಿ ಸಕ್ರಿಯಗೊಳಿಸುವುದು ಹೇಗೆ?
- ಮೊದಲು ನಿಮ್ಮ ಫೋನ್ನಲ್ಲಿ PhonePe ಆ್ಯಪ್ ಓಪನ್ ಮಾಡಿ.
- ನಿಮ್ಮ ಪ್ರೊಫೈಲ್ ವಿಭಾಗಕ್ಕೆ ಹೋಗಿ, ‘Manage Payments’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನಂತರ ‘Biometric Pay’ ಐಕಾನ್ ಮೇಲೆ ಕ್ಲಿಕ್ ಮಾಡಿ.
- ಬಳಿಕ ‘Biometric Authentication for UPI payments for Bank Account’ ಎಂಬುದನ್ನು ಆರಿಸಿ.
- ಕೊನೆಯದಾಗಿ ನಿಮ್ಮ ಯುಪಿಐ ಪಿನ್ ಮತ್ತು ಬಯೋಮೆಟ್ರಿಕ್ಸ್ ಬಳಸಿ ಒಮ್ಮೆಯ ಸೆಟಪ್ (One-time setup) ಪೂರ್ಣಗೊಳಿಸಿ.
ಈ ಬದಲಾವಣೆಯಿಂದಾಗಿ ಸಣ್ಣಪುಟ್ಟ ಪಾವತಿಗಳಿಗಾಗಿ ಪದೇ ಪದೇ ಪಿನ್ ನೆನಪಿಡುವ ಅಥವಾ ನಮೂದಿಸುವ ಕಿರಿಕಿರಿ ತಪ್ಪಲಿದೆ.

