ಕರ್ನಾಟಕ ಪೊಲೀಸ್ ಇಲಾಖೆ ನಿವೃತ್ತ ಅಧಿಕಾರಿ/ ಸಿಬ್ಬಂದಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ನಿವೃತ್ತರಿಗೆ ಗುರುತಿನ ಚೀಟಿಯನ್ನು ವಿತರಣೆ ಮಾಡಲಿದೆ. ಈ ಕುರಿತು ಸುತ್ತೋಲೆಯನ್ನು ಹೊರಡಿಸಲಾಗಿದೆ.
ಈ ಸುತ್ತೋಲೆಯು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುವ ಪೊಲೀಸ್ ಅಧಿಕಾರಿ/ ಲಿಪಿಕ ಅಧಿಕಾರಿ/ ಸಿಬ್ಬಂದಿಯವರುಗಳಿಗೆ ಗುರುತಿನ ಚೀಟಿಯನ್ನು ನೀಡುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.
ಪತ್ರದ ವಿವರ: ಈ ಮೇಲ್ಕಂಡ ವಿಷಯ ಮತ್ತು ಉಲ್ಲೇಖಗಳಿಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರವರ ಘಟಕದಲ್ಲಿ ನಿವೃತ್ತಿ ಹೊಂದಿರುವ ಪೊಲೀಸ್ ಅಧಿಕಾರಿ/ ಲಿಪಿಕ ಅಧಿಕಾರಿ/ ಸಿಬ್ಬಂದಿಯವರುಗಳಿಗೆ ಗುರುತಿನ ಚೀಟಿಯನ್ನು ವಿತರಿಸುವ ಸಂಬಂಧ ಮಾನ್ಯ ಪೊಲೀಸ್ ಪ್ರಧಾನ ಕಛೇರಿಯಿಂದ ಸುತ್ತೋಲೆ ಹೊರಡಿಸಲಾಗಿರುತ್ತದೆ.
ಅದರನ್ವಯ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಘಟಕದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುವ ಅಧಿಕಾರಿ/ ಸಿಬ್ಬಂದಿಗಳಿಗೆ ಪೊಲೀಸ್ ಕಾನ್ಸ್‌ಟೇಬಲ್ ದರ್ಜೆಯಿಂದ ಪೊಲೀಸ್ ಅಧೀಕ್ಷಕರು (ನಾನ್ ಐಪಿಎಸ್) ವೃಂದದ ರಾಜ್ಯ ಸರ್ಕಾರದ ಕಚೇರಿಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ, ಪ್ರಯಾಣದ ಸಂದರ್ಭದಲ್ಲಿ, ಭದ್ರತೆಯ ದೃಷ್ಟಿಯಿಂದ ಹಾಗೂ ನಿವೃತ್ತ ಅಧಿಕಾರಿ/ ಸಿಬ್ಬಂದಿಗಳನ್ನು ಗುರುತಿಸುವ ಸಲುವಾಗಿ ನಿವೃತ್ತ ಅಧಿಕಾರಿಗಳಿಗೆ ಗುರುತಿನ ಚೀಟಿಯನ್ನು ಪೊಲೀಸ್ ಪ್ರಧಾನ ಕಚೇರಿಯಿಂದ ನಿಗದಿಪಡಿಸಲಾದ ಈ ಕೆಳಕಂಡ ಸೂಚನೆಗಳೊಂದಿಗೆ, ಅವಶ್ಯಕ ದಾಖಲೆಗಳನ್ನು ಪಡೆದು ಗುರುತಿನ ಚೀಟಿಯನ್ನು ವಿತರಿಸಲಾಗುವುದು.
* ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಧಿಕಾರಿ/ ಸಿಬ್ಬಂದಿಯವರುಗಳು ತಮ್ಮ ಇತ್ತೀಚಿನ ಎರಡು ಮಪ್ತಿ ಭಾವಚಿತ್ರವನ್ನು ನೀಡುವುದು.
* ಅರ್ಜಿ ನಮೂನೆಯನ್ನು ಭರ್ತಿ ಮಾಡಿ ನಿವೃತ್ತಿ ಹೊಂದಿದ ಠಾಣಿ/ ಕಚೇರಿಯ ಮೇಲಾಧಿಕಾಲಿಯವರಿಂದ ದೃಢೀಕರಿಸಿ ಸಲ್ಲಿಸುವುದು.
* ತಾವು ಸೇವಾವಧಿಯಲ್ಲಿ ಪಡೆದ ಗುರುತಿನ ಚೀಟಿಯನ್ನು, ನಿವೃತ್ತಿ ಹೊಂದಿದ ನಂತರ ಹಿಂದಿರುಗಿಸಿ ಪಡೆದ ಸ್ವೀಕೃತಿ ಪತ್ರದ ನಕಲು ಪ್ರತಿಯನ್ನು ಲಗತ್ತಿಸುವುದು.
* ವಿತರಿಸಿದ ಗುರುತಿನ ಚೀಟಿಯನ್ನು ಯಾವುದೇ ಕಾನೂನು ಬಾಹಿರ ಚಟುವಟಕೆಗಳಿಗೆ ದುರುಪಯೋಗಪಡಿಸಿಕೊಳ್ಳದಿರುವ ಬಗ್ಗೆ ತಿಳುವಳಿಕೆಯನ್ನು ಘಟಕಾಧಿಕಾರಿಗಳು ನೀಡುವುದು. ತಪ್ಪಿದ್ದಲ್ಲಿ ಸದರಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಅರ್ಜಿ ನಮೂನೆ ಹೇಗಿದೆ?
- ಹೆಸರು (ಆಧಾರ್ ಕಾರ್ಡ್‌ನಲ್ಲಿರುವಂತೆ)
- ನಿವೃತ್ತಿ ಅವಧಿಯಲ್ಲಿನ ಹುದ್ದೆ
- ನಿವೃತ್ತಿ ಹೊಂದಿದ ಸಮಯದಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ ಸ್ಥಳ
- ರಕ್ತದ ಗುಂಪು
- ಆಧಾರ್ ಸಂಖ್ಯೆ
- ಪಾನ್ ಸಂಖ್ಯೆ
- ಹುಟ್ಟಿದ ದಿನಾಂಕ
- ನಿವೃತ್ತಿ ಹೊಂದಿದ ದಿನಾಂಕ
- ದೂರವಾಣಿ ಸಂಖ್ಯೆ
- ಹಾಲಿ ವಿಳಾಸ
- ಎರಡು ಫೋಟೋ
- ಮಾದರಿ ಸಹಿ
- ಬೆರಳು ಮುದ್ರೆ
- ಸೇವಾವಧಿ ಗುರುತಿನ ಚೀಟಿ ವಾಪಸ್ ನೀಡಿ ಸ್ವೀಕೃತಿ ಪಡೆದ ದಿನಾಂಕ

