ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅಮೆರಿಕದಲ್ಲಿ ಭಾರಿ ಪ್ರತಿಭಟನೆ ನಡೆದಿದೆ. 50ಕ್ಕೂ ಅಧಿಕ ನಗರಗಳಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ವಾಷಿಂಗ್ಟನ್ ಡಿಸಿಯಲ್ಲಿ ಟ್ರಂಪ್ ನಿವಾಸದ ಬಳಿಯೇ ಪ್ರತಿಭಟನೆ ನಡೆಸಲಾಗಿದೆ. ನಮಗೆ ರಾಜ ಬೇಡ(No Kings) ಎಂದು ಟ್ರಂಪ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಡೊನಾಲ್ಡ್ ಟ್ರಂಪ್ ನೀತಿಗಳ ವಿರುದ್ಧ ಅಮೆರಿಕದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.
ನೋ ಕಿಂಗ್ಸ್ ರ್ಯಾಲಿಯಲ್ಲಿ ಟ್ರಂಪ್ ವಿರುದ್ಧ ಪ್ರತಿಭಟಿಸಲು ಅಮೆರಿಕ, ಯುರೋಪ್ನಾದ್ಯಂತ ಲಕ್ಷಾಂತರ ಜನರು ಬೀದಿಗಿಳಿದಿದ್ದಾರೆ. ಅಮೆರಿಕ ಮತ್ತು ಯುರೋಪ್ನಾದ್ಯಂತ “ನೋ ಕಿಂಗ್ಸ್” ರ್ಯಾಲಿಗಳಲ್ಲಿ ಇರಾನ್ ನಲ್ಲಿನ ಯುದ್ಧ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕ್ರಮಗಳ ವಿರುದ್ಧ ದೊಡ್ಡ ಜನಸಮೂಹ ಪ್ರತಿಭಟನೆ ನಡೆಸಿತು. ಟ್ರಂಪ್ ಅವರ ಆಕ್ರಮಣಕಾರಿ ವಲಸೆ ಜಾರಿ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಿದೆ.

