HomeBusinessವಾಹನ ಸವಾರರೇ ಗಮನಿಸಿ: ಮರೆಯಾಗಲಿವೆ ಫಾಸ್ಟ್ಯಾಗ್, ಟೋಲ್ ಪ್ಲಾಜಾ: ಜಿಪಿಎಸ್ ಟೋಲ್ ಸಂಗ್ರಹ ವ್ಯವಸ್ಥೆ ಜಾರಿ...

ವಾಹನ ಸವಾರರೇ ಗಮನಿಸಿ: ಮರೆಯಾಗಲಿವೆ ಫಾಸ್ಟ್ಯಾಗ್, ಟೋಲ್ ಪ್ಲಾಜಾ: ಜಿಪಿಎಸ್ ಟೋಲ್ ಸಂಗ್ರಹ ವ್ಯವಸ್ಥೆ ಜಾರಿ ಶೀಘ್ರ

ನವದೆಹಲಿ: ಪ್ರಸ್ತುತ ಇರುವ ಫಾಸ್ಟ್ಯಾಗ್ ಮತ್ತು ಟೋಲ್ ಪ್ಲಾಜಾ ವ್ಯವಸ್ಥೆಗಳು ಇನ್ನೂ ಆರು ತಿಂಗಳಲ್ಲಿ ಇತಿಹಾಸ ಸೇರುತ್ತವೆ. ಪ್ರಸ್ತುತ ಇರುವ ಹೆದ್ದಾರಿ ಟೋಲ್ ಪ್ಲಾಜಾ ವ್ಯವಸ್ಥೆಯನ್ನು ಬದಲಾವಣೆ ಮಾಡಲಿದ್ದು, ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ತರಲಾಗುತ್ತದೆ.

ಉದ್ಯಮ ಸಂಸ್ಥೆ ಸಿಐಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಈ ಬಗ್ಗೆ ಮಾಹಿತಿ ನೀಡಿದ್ದು, ಹೆದ್ದಾರಿಯಲ್ಲಿ ಮತ್ತು ಟೋಲ್ ಪ್ಲಾಜಾಗಳ ಸಮೀಪ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ವಾಹನ ಸವಾರರಿಂದ ಪ್ರಯಾಣಿಸಿದ ನಿಖರ ದೂರಕ್ಕೆ ಮಾತ್ರ ಶುಲ್ಕ ಪಡೆಯುವ ಉದ್ದೇಶದಿಂದ ಹೊಸ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ,

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಸ್ತುತ ಟೋಲ್ ಪ್ಲಾಜಾ ಮೂಲಕ 40,000 ಕೋಟಿ ರೂಪಾಯಿ ಆದಾಯ ಪಡೆಯುತ್ತಿದ್ದು, ಇನ್ನೂ ಎರಡರಿಂದ ಮೂರು ವರ್ಷಗಳಲ್ಲಿ 1.40 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular