HomeSportsಆಸಿಸ್ ವಿರುದ್ಧ ನಿಸ್ಸಾಂಕ ಅಬ್ಬರ: ವಿಶ್ವಕಪ್ 2026ರ ಮೊದಲ ಶತಕ ಸಿಡಿಸಿ ಲಂಕಾ ಆಟಗಾರನ ದಾಖಲೆ

ಆಸಿಸ್ ವಿರುದ್ಧ ನಿಸ್ಸಾಂಕ ಅಬ್ಬರ: ವಿಶ್ವಕಪ್ 2026ರ ಮೊದಲ ಶತಕ ಸಿಡಿಸಿ ಲಂಕಾ ಆಟಗಾರನ ದಾಖಲೆ

ಟಿ20 ವಿಶ್ವಕಪ್ 2026ರ ಪಂದ್ಯಾವಳಿಯಲ್ಲಿ ಶ್ರೀಲಂಕಾದ ಆರಂಭಿಕ ಆಟಗಾರ ಪತುಮ್ ನಿಸ್ಸಾಂಕ ಹೊಸ ದಾಖಲೆ ಬರೆದಿದ್ದಾರೆ. ಸೋಮವಾರ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಗ್ರೂಪ್ ಬಿ ಪಂದ್ಯದಲ್ಲಿ ನಿಸ್ಸಾಂಕ ಸ್ಪೋಟಕ ಶತಕ ಸಿಡಿಸುವ ಮೂಲಕ ಈ ಬಾರಿಯ ವಿಶ್ವಕಪ್‌ನಲ್ಲಿ ಸೆಂಚುರಿ ಬಾರಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೇವಲ 52 ಎಸೆತಗಳಲ್ಲಿ 100 ರನ್ ಪೂರೈಸಿದ ಅವರ ಈ ಅಮೋಘ ಆಟದಿಂದಾಗಿ ಶ್ರೀಲಂಕಾ ತಂಡವು ಬಲಿಷ್ಠ ಆಸ್ಟ್ರೇಲಿಯಾ ನೀಡಿದ್ದ 182 ರನ್‌ಗಳ ಬೃಹತ್ ಗುರಿಯನ್ನು ಸುಲಭವಾಗಿ ತಲುಪಿತು.

ನಿಸ್ಸಾಂಕ ಅವರ ಈ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಹಾಗೂ 5 ಆಕರ್ಷಕ ಸಿಕ್ಸರ್‌ಗಳಿದ್ದವು. ಮೊದಲು 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ನಂತರದ 50 ರನ್‌ಗಳನ್ನು ಕೇವಲ 20 ಎಸೆತಗಳಲ್ಲಿ ಚಚ್ಚುವ ಮೂಲಕ ಆಸಿಸ್ ಬೌಲರ್‌ಗಳನ್ನು ಕಂಗಾಲು ಮಾಡಿದರು. ಕುಸಲ್ ಮೆಂಡಿಸ್ ಅವರೊಂದಿಗೆ 97 ರನ್‌ಗಳ ಜೊತೆಯಾಟವಾಡಿದ ನಿಸ್ಸಾಂಕ, ಬಳಿಕ ಪವನ್ ರತ್ನಾಯಕೆ ಅವರೊಂದಿಗೆ ಕೇವಲ 34 ಎಸೆತಗಳಲ್ಲಿ 79 ರನ್ ಕಲೆಹಾಕಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಶ್ರೀಲಂಕಾ ತಂಡವು ಟಿ20 ವಿಶ್ವಕಪ್ ಇತಿಹಾಸದಲ್ಲಿ ತನ್ನ ಗರಿಷ್ಠ ರನ್ ಚೇಸಿಂಗ್ ದಾಖಲೆಯನ್ನು ಉತ್ತಮಪಡಿಸಿಕೊಂಡಿದೆ.

ಈ ಸೋಲಿನಿಂದಾಗಿ ಮಿಚೆಲ್ ಮಾರ್ಷ್ ನೇತೃತ್ವದ ಆಸ್ಟ್ರೇಲಿಯಾ ತಂಡವು ವಿಶ್ವಕಪ್‌ನಿಂದ ಹೊರಬೀಳುವ ಭೀತಿಯಲ್ಲಿದೆ. ಒಂದು ವೇಳೆ ಮುಂದಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡವು ಐರ್ಲೆಂಡ್ ವಿರುದ್ಧ ಜಯಗಳಿಸಿದರೆ ಆಸ್ಟ್ರೇಲಿಯಾ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ. ಮತ್ತೊಂದೆಡೆ ಈ ಗೆಲುವಿನೊಂದಿಗೆ ಶ್ರೀಲಂಕಾ ತಂಡವು ಸೂಪರ್ 8 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ನಿಸ್ಸಾಂಕ ಅವರ ಈ ಶತಕವು ಟಿ20 ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ವಿರುದ್ಧ ದಾಖಲಾದ ಮೊದಲ ಶತಕ ಎಂಬ ದಾಖಲೆಗೂ ಸಾಕ್ಷಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular