HomeKarnatakaಬಳ್ಳಾರಿ ನಗರಕ್ಕೆ 10 ಹೊಸ ನಗರ ಸಾರಿಗೆ ಬಸ್, ಯಾವ ಮಾರ್ಗದಲ್ಲಿ ಸಂಚಾರ?

ಬಳ್ಳಾರಿ ನಗರಕ್ಕೆ 10 ಹೊಸ ನಗರ ಸಾರಿಗೆ ಬಸ್, ಯಾವ ಮಾರ್ಗದಲ್ಲಿ ಸಂಚಾರ?

ನಗರ ಸಾರಿಗೆ ಸೌಲಭ್ಯವನ್ನು ಒದಗಿಸಲು ಬಳ್ಳಾರಿ ವಿಭಾಗಕ್ಕೆ 10 ನೂತನ ನಗರ ಸಾರಿಗೆ ಬಸ್ ಹಂಚಿಕೆಯಾಗಿದೆ. ನೂತನ 10 ಬಸ್‌ಗಳನ್ನು 7 ಮಾರ್ಗಗಳಲ್ಲಿ 10 ಅನುಸೂಚಿಗಳನ್ನು ಕಾರ್ಯಾಚರಣೆ ಮಾಡಲು ನಿಯೋಜಿಸಲಾಗಿದೆ.

ಈ ಕುರಿತು ಕಕರಸಾ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್ ಬಾನ್ ಮಾಹಿತಿ ನೀಡಿದ್ದು, ಯಾವ-ಯಾವ ಮಾರ್ಗದಲ್ಲಿ ಬಸ್ ಸಂಚಾರ ನಡೆಸಲಿದೆ ಎಂದು ತಿಳಿಸಿದ್ದಾರೆ.

ಹೊಸ ಬಸ್‌ ವೆಚ್ಚ ರೂ. 39 ಲಕ್ಷ ರೂ.ಗಳು. ಪ್ರಯಾಣಿಕರ ಅನುಕೂಲಕ್ಕಾಗಿ ನಿಲುಗಡೆ ಘೋಷಣೆ ಹಾಗೂ ದೊಡ್ಡ ಗಾತ್ರದ ಎಲ್‌ಇಡಿ ಡೆಷ್ಟಿನೇಷನ್ ಬೋರ್ಡ್‌ಗಳನ್ನು ಈ ಬಸ್‌ಗಳಲ್ಲಿ ಅಳವಡಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ವಯಂ ಚಾಲಿತ ಪ್ರಯಾಣಿಕರು ಇಳಿಯುವ ಹಾಗೂ ಹತ್ತುವ ಬಾಗಿಲುಗಳನ್ನು ಅಳವಡಿಸಲಾಗಿದೆ. ಈ ಬಸ್‌ಗಳು 40 ಪ್ರಯಾಣಿಕ ಆಸನಗಳನ್ನು ಹೊಂದಿವೆ. ಎಲ್‌ಇಡಿ ಟ್ಯೂಬ್ ಲೈಟ್ ಅಳವಡಿಕೆ ಮಾಡಿ ಒಳಾಂಗಣವನ್ನು ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ.

ಹೊಸ ನಗರ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆಗಾಗಿ ಒಟ್ಟು 4 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬಸ್‌ಗಳಲ್ಲಿ ಪ್ರಯಾಣಿಸುವ ಸಾರ್ವಜನಿಕ ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಆಧುನಿಕ ತಂತ್ರಜ್ಞಾನ ಹೊಂದಿರುವ ಸ್ವಯಂ ಚಾಲಿತ ಅಗ್ನಿ ನಂದಕ ಉಪಕರಣಗಳು, ರಿವರ್ಸ್ ಪಾರ್ಕಿಂಗ್ ಅಲರಾಮ್ ವ್ಯವಸ್ಥೆ ಹಾಗೂ ಲೋಕೆಶನ್ ಟ್ರಾಕಿಂಗ್, ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಲಾಗಿದೆ.

ಬಸ್‌ಗಳು 187 ಎಚ್.ಪಿ ಸಾಮರ್ಥ್ಯದ ಬಿಎಸ್-6 ಎಂಜಿನ್‌ಗಳನ್ನು ಹೊಂದಿವೆ. ಈ ಬಸ್‌ಗಳನ್ನು ಆಟೋಮೋಟಿವ್ ಇಂಡಸ್ಟ್ರಿ ಸ್ಟಾಂಡರ್ಡ್ AIS-052 ಬಸ್ ಕೋಡ್ ನಂತೆ ನಿರ್ಮಿಸಲಾಗಿದೆ.

ಸದ್ಯ ಬಳ್ಳಾರಿಯಲ್ಲಿ 15 ನಗರ ಸಾರಿಗೆ ಬಸ್ ಸಂಚಾರವನ್ನು ನಡೆಸುತ್ತಿವೆ. ಈಗ ಹೊಸ 10 ನಗರ ಸಾರಿಗೆ ಬಸ್ ಸೇರಿ ಒಟ್ಟು 25 ನಗರ ಸಾರಿಗೆ ಬಸ್ ಬಳ್ಳಾರಿ ನಗರದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕಾರ್ಯಾಚರಣೆ ನಡೆಸಲಿವೆ.

ನಗರ ಸಾರಿಗೆಯಲ್ಲಿ ಸಂಚಾರ ನಡೆಸಲು ರೂ.50ರ ಒಂದು ದಿನದ ಬಸ್ ಪಾಸ್ ಪಡೆದ ಎಷ್ಟು ಬಾರಿ ಬೇಕಾದರೂ ನಗರಾದ್ಯಂತ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ರೂ. 810 ಸಾಮಾನ್ಯ ಪ್ರಯಾಣಿಕರಿಗೆ, ಹಿರಿಯ ನಾಗರಿಕರಿಗೆ ರೂ.725 ಮಾಸಿಕ ಬಸ್ ಪಾಸ್ ಇದೆ. ಬೆಳಗ್ಗೆ 7.15 ರಿಂದ ರಾತ್ರಿ 8.30ರ ತನಕ ನಗರ ಸಾರಿಗೆ ಬಸ್ ಸಂಚಾರ ನಡೆಸುತ್ತದೆ.

ಹೊಸ ಬಸ್ ಮಾರ್ಗಗಳು

  • ಎಸ್.ಪಿ. ಸರ್ಕಲ್-ಅಲ್ಲಿಪುರ(1 ಬಸ್): ದುರ್ಗಮ್ಮ ದೇವಸ್ಥಾನ, ಸಿಬಿಟಿ, ಗಡಗಿ ಚೆನ್ನಪ್ಪ ವೃತ್ತ, ಬಿಎಸ್‌ಎನ್‌ಎಲ್ ನಗರ ಸಾರಿಗೆ ನಿಲುಗಡೆ ಬಿಂದು, ರೈಲ್ವೇ ವೃತ, ಹೆಚ್.ಆರ್.ಜಿ. ವೃತ್ತ, ರಂಗಮಂದಿರ, ವಾಲ್ಮೀಕಿ ಭವನ, ಕೌಲ್ ಬಜಾರ್, ಟಿಬಿ ಸ್ಯಾನಿಟೋರಿಯಂ, ವಿನಾಯಕನಗರ.
  • ಎಸ್.ಪಿ. ಸರ್ಕಲ್- ಟ್ರಾಮ ಕೇರ್ ಸೆಂಟರ್ (1 ಬಸ್): ದುರ್ಗಮ್ಮ ದೇವಸ್ಥಾನ, ಸಿಬಿಟಿ, ಗಡಗಿ ಚೆನ್ನಪ್ಪ ವೃತ್ತ, ಬಿಎಸ್‌ಎನ್‌ಎಲ್ ನಗರ ಸಾರಿಗೆ ನಿಲುಗಡೆ ಬಿಂದು, ರೈಲ್ವೇ ವೃತ, ಹೆಚ್.ಆರ್.ಜಿ. ವೃತ್ತ, ರಂಗಮಂದಿರ, ವಾಲ್ಮೀಕಿ ಭವನ, ಕೌಲ್ ಬಜಾರ್.
  • ಎಸ್.ಪಿ. ಸರ್ಕಲ್-ಬಂಡಿಹಟ್ಟಿ(1 ಬಸ್): ದುರ್ಗಮ್ಮ ದೇವಸ್ಥಾನ, ಸಿಬಿಟಿ, ಗಡಗಿ ಚೆನ್ನಪ್ಪ ವೃತ್ತ, ಬಿಎಸ್‌ಎನ್‌ಎಲ್ ನಗರ ಸಾರಿಗೆ ನಿಲುಗಡೆ ಬಿಂದು, ರೈಲ್ವೇ ವೃತ, ಹೆಚ್.ಆರ್.ಜಿ. ವೃತ್ತ, ರಂಗಮಂದಿರ, ವಾಲ್ಮೀಕಿ ಭವನ, ಕೌಲ್ ಬಜಾರ್, ಖೂನಿಠಾನ ಮಸೀದಿ, ಕೇಂದ್ರೀಯ ವಿದ್ಯಾಲಯ.
  • ಓಪಿಡಿ-ಬಿಸಿಲಹಳ್ಳಿ (2 ಬಸ್): ಓಪಿಡಿ ಕ್ರಾಸ್, ವಾಸವಿ ಶಾಲೆ, ಫೈರ್ ಸ್ಟೇಷನ್, ಮಹಿಳಾ ಪೊಲೀಸ್ ಠಾಣೆ, ಎಸ್.ಪಿ. ಸರ್ಕಲ್, ದುರ್ಗಮ್ಮ ದೇವಸ್ಥಾನ, ಸಿಬಿಟಿ, ಗಡಗಿ ಚೆನ್ನಪ್ಪ ವೃತ್ತ, ಬಿಡಿಎ ಗ್ರೌಂಡ್, ಸಂಗಮ್ ವೃತ್ತ, ನೂತನ ಜಿಲ್ಲಾಡಳಿತ ಭವನ ಬಳ್ಳಾರಿ, ಪಟೇಲ್‌ನಗರ, ತಾರನಾಥ ಆಸ್ಪತ್ರೆ.
  • ಓಪಿಡಿ-ಹುಸೇನ್ ನಗರ (2 ಬಸ್): ಓಪಿಡಿ ಕ್ರಾಸ್, ವಾಸವಿ ಶಾಲೆ, ಫೈರ್ ಸ್ಟೇಷನ್, ಮಹಿಳಾ ಪೊಲೀಸ್ ಠಾಣೆ, ಎಸ್.ಪಿ. ಸರ್ಕಲ್, ದುರ್ಗಮ್ಮ ದೇವಸ್ಥಾನ, ಸಿಬಿಟಿ, ಗಡಗಿ ಚೆನ್ನಪ್ಪ ವೃತ್ತ, ಬಿಡಿಎ ಗ್ರೌಂಡ್, ಸಂಗಮ್ ವೃತ್ತ, ನೂತನ ಜಿಲ್ಲಾಡಳಿತ ಭವನ ಬಳ್ಳಾರಿ, ಪಟೇಲ್‌ನಗರ.
  • ಎಸ್.ಪಿ. ಸರ್ಕಲ್- ಪ್ರಶಾಂತನಗರ (1 ಬಸ್): ದುರ್ಗಮ್ಮ ದೇವಸ್ಥಾನ, ಸಿಬಿಟಿ, ಗಡಗಿ ಚೆನ್ನಪ್ಪ ವೃತ್ತ, ಬಿಎಸ್‌ಎನ್‌ಎಲ್ ನಗರ ಸಾರಿಗೆ ನಿಲುಗಡೆ ಬಿಂದು, ರೈಲ್ವೇ ವೃತ, ಹೆಚ್.ಆರ್.ಜಿ. ವೃತ್ತ, ರಂಗಮಂದಿರ, ವಾಲ್ಮೀಕಿ ಭವನ, ಕೌಲ್ ಬಜಾರ್, ಬೆಳಗಲ್ ಕ್ರಾಸ್.
  • ಹೊಸ ಬಸ್ ನಿಲ್ದಾಣ-ಸಂಗನಕಲ್ಲು(2 ಬಸ್): ಬಂಡಿಮೋಟ್ ಕ್ರಾಸ್, ಕೇಂದ್ರೀಯ ಬಸ್ ನಿಲ್ದಾಣ, ಹೆಚ್.ಆರ್.ಜಿ ವೃತ್ತ, ರೈಲ್ವೇ ವೃತ, ಬಿಎಸ್‌ಎನ್‌ಎಲ್ ನಗರ ಸಾರಿಗೆ ನಿಲುಗಡೆ ಬಿಂದು, ಗಡಗಿ ಚೆನ್ನಪ್ಪ ವೃತ್ತ, ಸಿಬಿಟಿ, ದುರ್ಗಮ್ಮ ದೇವಸ್ಥಾನ, ಗಾಂಧಿನಗರ, ಗಾಂಧಿನಗರ ಮಾರ್ಕೆಟ್, ಕೆ.ಇ.ಬಿ, ಸದ್ಗುರು ಕಾಲೋನಿ, ಎ.ಬಿ. ವಾಜಪೇಯಿ ನಗರ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular