HomeKarnatakaBIG NEWS: ರಾಮ ಮಂದಿರದ ಒಂದೇ ಒಂದು ಕಲ್ಲನ್ನು ಅಲುಗಾಡಿಸಲು ಆಗಲ್ಲ; ಬೆದರಿಕೆಯನ್ನು ಹಿಂದೂ ಸಮಾಜ...

BIG NEWS: ರಾಮ ಮಂದಿರದ ಒಂದೇ ಒಂದು ಕಲ್ಲನ್ನು ಅಲುಗಾಡಿಸಲು ಆಗಲ್ಲ; ಬೆದರಿಕೆಯನ್ನು ಹಿಂದೂ ಸಮಾಜ ಸಹಿಸಲ್ಲ; ಮುತಾಲಿಕ್ ಎಚ್ಚರಿಕೆ

ಬೆಳಗಾವಿ: ನಿಪ್ಪಾಣಿ ರಾಮ ಮಂದಿರ ಸ್ಫೋಟಿಸುವುದಾಗಿ ದುಷ್ಕರ್ಮಿಗಳಿಂದ ಬೆದರಿಕೆ ಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದು, ನಿಪ್ಪಾಣಿ ರಾಮ ಮಂದಿರದ ಒಂದೇ ಒಂದು ಕಲ್ಲನ್ನೂ ಅಲುಗಾಡಿಸಲು ಆಗಲ್ಲ. ತಾಕತ್ತಿದ್ದರೆ ಮುಟ್ಟಿ ನೋಡಿ ಎಂದು ಸವಾಲು ಹಾಕಿದ್ದಾರೆ.

ರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಪತ್ರ ಬರೆದಿದ್ದಾರೆ. ಇದು ಖಂಡನೀಯ. ಈ ರೀತಿ ಬೆದರಿಕೆಯನ್ನು ಹಿಂದೂ ಸಮಾಜ ಸಹಿಸಲ್ಲ. ಈಗ ಘಜಿನಿ, ಘೋರಿ ಬಾಬಾ ಇಲ್ಲ. ಇಲ್ಲಿ ಇರೋದು ಭಾರತೀಯ ಮುಸ್ಲಿಂರು ಅನ್ನುವುದು ನೆನಪಿರಲಿ. ಭಾರತದಲ್ಲಿ ಹಿಂದೂ ದೇವಾಲಯಗಳನ್ನು ಪೂಜಿಸಬೇಕು ಅಂತೇನಿಲ್ಲ. ಆದರೆ ಗೌರವಿಸಬೇಕು ಎಂದು ಹೇಳಿದ್ದಾರೆ.

ರಾಮ ಮಂದಿರವನ್ನು ಮುಟ್ಟಿದ್ರೆ ಏನಾಗುತ್ತೆ ಹಿಂದೂ ಸಮಾಜ ಹೇಗೆ ತಿರುಗೇಟು ನೀಡುತ್ತೆ ಎಂಬುದನ್ನು ತೋರಿಸಬೇಕಾಗುತ್ತೆ ಎಂಬುದು ಎಚ್ಚರವಿರಲಿ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ಎಲ್ಲಾ ರಾಮ ಮಂದಿರಗಳಿಗೂ ಸರ್ಕಾರ ಭದ್ರತೆ ಕೊಡಬೇಕು ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular