HomeIndiaBIG NEWS: ಕುಖ್ಯಾತ ಕ್ರಿಮಿನಲ್ ಗಳು ಅಂಡಮಾನ್ ಜೈಲಿಗೆ ಶಿಫ್ಟ್

BIG NEWS: ಕುಖ್ಯಾತ ಕ್ರಿಮಿನಲ್ ಗಳು ಅಂಡಮಾನ್ ಜೈಲಿಗೆ ಶಿಫ್ಟ್

ನವದೆಹಲಿ: ಉತ್ತರ ಭಾರತದ ಕುಖ್ಯಾತ 15 ಕ್ರಿಮಿನಲ್ ಗಳನ್ನು ಅಂಡಮಾನ್ ಜೈಲಿಗೆ ಕಳುಹಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಎನ್ಐಎ ವತಿಯಿಂದ ಕ್ರಿಮಿನಲ್ ಗಳು ಮತ್ತು ಪಾತಕಿಗಳ ಸ್ಥಳಾಂತರಕ್ಕೆ ಮನವಿ ಸಲ್ಲಿಸಿದ್ದು, ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ನೀಡಿದೆ. ಶಿಕ್ಷೆಗೊಳಗಾದ ಕ್ರಿಮಿನಲ್ ಗಳನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಜೈಲಿಗೆ ಕಳುಹಿಸಲು ನಿರ್ಧಾರ ಕೈಗೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕ್ರಿಮಿನಲ್ ಸಿಂಡಿಕೇಟ್‌ ಗಳನ್ನು ಜೈಲುಗಳೊಳಗಿಂದ ನಡೆಸುತ್ತಿರುವ ಶಂಕೆಯ ಮೇರೆಗೆ ಪ್ರಸ್ತುತ ದೆಹಲಿ, ಪಂಜಾಬ್ ಮತ್ತು ಹರಿಯಾಣ ಜೈಲುಗಳಲ್ಲಿ ಬಂಧಿಯಾಗಿರುವ 10-12 ದರೋಡೆಕೋರರನ್ನು ವರ್ಗಾವಣೆ ಮಾಡುವ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಗೃಹ ಸಚಿವಾಲಯಕ್ಕೆ ಮನವಿ ಮಾಡಿತ್ತು.

ಉತ್ತರ ಭಾರತದ ಜೈಲಿನಲ್ಲಿರುವ 25 ದರೋಡೆಕೋರರನ್ನು ದಕ್ಷಿಣ ರಾಜ್ಯಗಳಿಗೆ ವರ್ಗಾಯಿಸುವಂತೆ ಎನ್‌ಐಎ ಈ ಹಿಂದೆ ಗೃಹ ಸಚಿವಾಲಯಕ್ಕೆ ಮನವಿ ಮಾಡಿತ್ತು. ಈಗ ಅಂಡಮಾನ್ ಜೈಲಿಗೆ ಸ್ಥಳಾಂತರಕ್ಕೆ ನಿರ್ಧರಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular