HomeEntertainmentವರುಣ್ ಧವನ್ ಬರ್ತ್‌ಡೇ ಗಿಫ್ಟ್: ಧೂಳೆಬ್ಬಿಸುತ್ತಿದೆ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಸಿನಿಮಾದ...

ವರುಣ್ ಧವನ್ ಬರ್ತ್‌ಡೇ ಗಿಫ್ಟ್: ಧೂಳೆಬ್ಬಿಸುತ್ತಿದೆ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾದ ಹೊಸ ಹಾಡು

ಬಾಲಿವುಡ್ ಅಂಗಳದ ಚಾಕೊಲೇಟ್ ಬಾಯ್ ವರುಣ್ ಧವನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದಂದೇ ಅವರ ಬಹುನಿರೀಕ್ಷಿತ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರತಂಡ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆಯೊಂದನ್ನು ನೀಡಿದೆ. ಚಿತ್ರದ ಹೈ-ಎನರ್ಜಿ ಪಾರ್ಟಿ ಟ್ರ್ಯಾಕ್ ‘ವಾವ್’ ಹಾಡನ್ನು ಇಂದು ಬಿಡುಗಡೆ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡು ಸಖತ್ ಸದ್ದು ಮಾಡುತ್ತಿದೆ.

ವರುಣ್ ಧವನ್ ಅವರ ಅದ್ಭುತ ಡ್ಯಾನ್ಸ್ ಸ್ಟೆಪ್ಸ್, ಮೃಣಾಲ್ ಠಾಕೂರ್ ಅವರ ಮನಮೋಹಕ ನಗು ಮತ್ತು ಪೂಜಾ ಹೆಗ್ಡೆ ಅವರ ಗ್ಲಾಮರ್ ಈ ಹಾಡಿನ ಹೈಲೈಟ್. ಖ್ಯಾತ ಗಾಯಕ ಹಾರ್ಡಿ ಸಂಧು ಮತ್ತು ಕಿರಣ್ ಬಾಜ್ವಾ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡು ಪ್ರತಿಯೊಬ್ಬರ ಕಾಲುಗಳು ತಾನಾಗಿಯೇ ಹೆಜ್ಜೆ ಹಾಕುವಂತೆ ಮಾಡುವಂತಿದೆ. ತನಿಷ್ಕ್ ಬಾಗ್ಚಿ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು, ರೋನಿ ಮತ್ತು ಗಿಲ್ ಸಾಹಿತ್ಯ ಬರೆದಿದ್ದಾರೆ.

ತಮ್ಮ ಹುಟ್ಟುಹಬ್ಬದಂದು ಹಾಡು ಬಿಡುಗಡೆಯಾಗಿರುವ ಬಗ್ಗೆ ಸಂತಸ ಹಂಚಿಕೊಂಡಿರುವ ವರುಣ್ ಧವನ್, “ನನ್ನ ಹುಟ್ಟುಹಬ್ಬದ ವಿಶೇಷ ಹಾಡು ವಾವ್. ಈ ಹಾಡಿನ ಬಗ್ಗೆ ನನಗೆ ತುಂಬಾ ಕುತೂಹಲವಿತ್ತು, ನನ್ನ ತಂಡಕ್ಕೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ. ಹಿರಿಯ ನಿರ್ದೇಶಕ ಡೇವಿಡ್ ಧವನ್ ನಿರ್ದೇಶನದ ಈ ಚಿತ್ರವು ಪಕ್ಕಾ ಕಾಮಿಡಿ, ರೊಮ್ಯಾನ್ಸ್ ಮತ್ತು ಡ್ರಾಮಾ ಒಳಗೊಂಡಿರುವ ಎಂಟರ್ ಟೈನರ್ ಸಿನಿಮಾವಾಗಿದ್ದು, ಮೇ 22ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಡು ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ವರುಣ್ ಅಭಿಮಾನಿಗಳು ಕಾಮೆಂಟ್ ಬಾಕ್ಸ್ ತುಂಬಿಸುತ್ತಿದ್ದಾರೆ. “ಹಳೆಯ ವರುಣ್ ಧವನ್ ವಾಪಸ್ ಬಂದಿದ್ದಾರೆ”, “ಧವನ್ ಡ್ಯಾನ್ಸ್ ಅಂದ್ರೆ ಅದೊಂದು ಮ್ಯಾಜಿಕ್” ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಸಮ್ಮರ್ ಸೀಸನ್ ಪ್ಲೇಲಿಸ್ಟ್‌ಗಳಲ್ಲಿ ‘ವಾವ್’ ಸಾಂಗ್ ಅಗ್ರಸ್ಥಾನ ಪಡೆಯುವ ಲಕ್ಷಣಗಳು ಕಾಣುತ್ತಿವೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular