HomeKarnatakaಪ್ರಯಾಣಿಕನಿಗೆ ಸಮೋಸಾ ಬೇಕಾ ಎಂದು ಕೇಳಿದ ಕ್ಯಾಬ್​ ಚಾಲಕ; ಸುಂದರ ಅನುಭವ ಶೇರ್‌ ಮಾಡಿಕೊಂಡ ವ್ಯಕ್ತಿ

ಪ್ರಯಾಣಿಕನಿಗೆ ಸಮೋಸಾ ಬೇಕಾ ಎಂದು ಕೇಳಿದ ಕ್ಯಾಬ್​ ಚಾಲಕ; ಸುಂದರ ಅನುಭವ ಶೇರ್‌ ಮಾಡಿಕೊಂಡ ವ್ಯಕ್ತಿ

ಗುರುಗ್ರಾಮ: ಕ್ಯಾಬ್-ಬುಕಿಂಗ್ ಸಾಹಸ ಹಲವರನ್ನು ಅಸಹನೆಗೆ ದೂಡಿದ್ದಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ತಾವು ಅನುಭವಿಸಿದ ಸುಂದರ ಅನುಭವವನ್ನು ಶೇರ್​ ಮಾಡಿಕೊಂಡಿದ್ದಾರೆ. ಬೆಂಗಳೂರಿನ ವ್ಯಕ್ತಿ ಇದನ್ನು ಶೇರ್​ ಮಾಡಿಕೊಂಡಿದ್ದು, ಬೆಂಗಳೂರಿನಲ್ಲಿ ಖಂಡಿತವಾಗಿಯೂ ಇಂಥ ಸುಂದರ ಅನುಭವ ಸಿಗಲು ಸಾಧ್ಯವೇ ಇಲ್ಲ ಎಂದಿದ್ದಾರೆ.

ಟ್ವಿಟ್ಟರ್ ಬಳಕೆದಾರ ಮೊನಾರ್ಕ್ ಮೂಲಚಂದಾನಿ ತಮ್ಮ ಟ್ವಿಟರ್​ನಲ್ಲಿ ಈ ವಿಷಯ ಶೇರ್​ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಗುರುಗ್ರಾಮಕ್ಕೆ ಹೋದಾಗ ಆದ ಅನುಭವ ಇದು. ಕ್ಯಾಬ್ ಬುಕ್ ಮಾಡುವ ಬಗ್ಗೆ ಸಂತೋಷಕರ ಅನುಭವ ತಮಗಾಗಿದೆ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕ್ಯಾಬ್​ ಬುಕ್​ ಮಾಡಿದಾಗ ಡ್ರೈವರ್​ಗೆ ನಾನು ಕರೆ ಮಾಡಿದೆ. ಆಗ ಆತ ಐದು ನಿಮಿಷ ಸರ್​, ದಯವಿಟ್ಟು ಕಾಯಿರಿ. ಹಸಿವೆ ಆಗುತ್ತಿತ್ತು. ಸಮೋಸಾ ತಿನ್ನುತ್ತಿದ್ದೇನೆ ಎಂದ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆತ ನಿಮಗಾಗಿ ಒಂದು ಸಮೋಸಾ ತರಲೇ ಸರ್​, ಇಲ್ಲಿ ತುಂಬಾ ಚೆನ್ನಾಗಿ ಸಿಗುತ್ತದೆ ಎಂದ. ಇದನ್ನು ಕೇಳಿ ನನಗೆ ತುಂಬಾ ಅಚ್ಚರಿಯಾಯಿತು. ಬೆಂಗಳೂರಿನಲ್ಲಿ ಇಂಥದ್ದೊಂದನ್ನು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ ಕ್ಯಾಬ್​ ಬುಕ್ಕಿಂಗ್​ ಸಮಯದಲ್ಲಿ ತಮಗಾಗಿರುವ ಕಹಿ ಅನುಭವಗಳನ್ನು ಹಲವರು ಇದೇ ವೇಳೆ ಶೇರ್​ ಮಾಡಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular