HomeAstroಈ ವಸ್ತುಗಳನ್ನು ಅಪ್ಪಿತಪ್ಪಿಯೂ ಬೇರೆಯವರಿಗೆ ನೀಡಬೇಡಿ

ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಬೇರೆಯವರಿಗೆ ನೀಡಬೇಡಿ

ಸಾಮಾನ್ಯವಾಗಿ ಹಣವನ್ನು ಸಾಲ ಪಡೆಯುತ್ತೇವೆ. ಇದ್ರ ಜೊತೆ ಬೇರೆಯವರ ಕೆಲ ವಸ್ತುಗಳನ್ನು ನಾವು ಬಳಸ್ತೇವೆ. ಶಾಸ್ತ್ರದ ಪ್ರಕಾರ, ಬೇರೆಯವರ ಕೆಲ ವಸ್ತುಗಳನ್ನು ಎಂದೂ ಬಳಸಬಾರದು. ಹಾಗೆ ಬೇರೆಯವರಿಗೆ ಕೆಲ ವಸ್ತುಗಳನ್ನು ನೀಡಬಾರದು. ಅಪ್ಪಿತಪ್ಪಿ ಆ ವಸ್ತುಗಳನ್ನು ಬೇರೆಯವರಿಗೆ ನೀಡಿದ್ರೆ ಅಥವಾ ಪಡೆದ್ರೆ ಸಮಸ್ಯೆ ಎದುರಿಸಬೇಕಾಗುತ್ತದೆ.

ಕೈ ಗಡಿಯಾರ ಸಮಯವನ್ನು ಹೇಳುತ್ತದೆ. ಒಳ್ಳೆ ಸಮಯ ಹಾಗೂ ಕೆಟ್ಟ ಸಮಯವನ್ನು ಪರಿಸ್ಥಿತಿ ನಿರ್ಧರಿಸುತ್ತದೆ. ಬೇರೆ ವ್ಯಕ್ತಿಗೆ ನಿಮ್ಮ ಕೈ ಗಡಿಯಾರವನ್ನು ನೀಡಬೇಡಿ. ಹಾಗೆ ಅವರ ಕೈಗಡಿಯಾರವನ್ನು ನೀವು ಪಡೆಯಬೇಡಿ ಅವ್ರ ನಕಾರಾತ್ಮಕ ಶಕ್ತಿ ನಿಮ್ಮ ಮೇಲೆ ಪ್ರಭಾವ ಬೀರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿಮ್ಮ ಜೀವನದಲ್ಲಿ ಎಂದೂ ಬೇರೆಯವರ ಉಂಗುರವನ್ನು ಧರಿಸಬೇಡಿ. ಬೇರೆಯವರ ಉಂಗುರ ನಿಮ್ಮ ಜೀವನದಲ್ಲಿ ಸಮಸ್ಯೆ ತರುವ ಜೊತೆಗೆ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗುತ್ತದೆ.

ಬೇರೆಯವರ ಬಟ್ಟೆ ಧರಿಸುವುದ್ರಿಂದ ದೌರ್ಭಾಗ್ಯ ನಿಮಗೆ ಅಂಟಿಕೊಳ್ಳುತ್ತದೆ. ಆರೋಗ್ಯಕ್ಕೆ ಕೂಡ ಇದು ಒಳ್ಳೆಯದಲ್ಲ. ಅವ್ರ ಚರ್ಮದಲ್ಲಿರುವ ಸಮಸ್ಯೆಗಳು ನಿಮಗೆ ಅಂಟಿಕೊಳ್ಳುತ್ತವೆ.

ಬೇರೆಯವರ ಬಾಚಣಿಕೆ ಬಳಸುವುದು ಶಾಸ್ತ್ರ ಹಾಗೂ ಆರೋಗ್ಯ ಎರಡಕ್ಕೂ ಒಳ್ಳೆಯದಲ್ಲ. ಬಾಚಣಿಕೆ ಮಾತ್ರವಲ್ಲ, ತೆಲೆಗೆ ಸಂಬಂಧಿಸಿದ ಯಾವುದೇ ವಸ್ತುವನ್ನು ಹಂಚಿಕೊಳ್ಳಬಾರದು. ಇದು ನಿಮ್ಮ ಭಾಗ್ಯದ ಮೇಲೆ ಪ್ರಭಾವ ಬೀರುತ್ತದೆ,

ಬೇರೆಯವರ ಪೆನ್ ಬಳಸಬಾರದು. ಹಾಗೆ ನಿಮ್ಮ ಪೆನ್ ಯಾರಿಗೂ ನೀಡಬಾರದು. ಇದು ಆರ್ಥಿಕ ಸಮಸ್ಯೆಗೆ ಕಾರಣವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular