HomeKarnatakaನೇಪಾಳ ಪ್ರವಾಹದಲ್ಲಿ ತುಮಕೂರು ಮೂಲದ ಇಬ್ಬರು ನಾಪತ್ತೆ

ನೇಪಾಳ ಪ್ರವಾಹದಲ್ಲಿ ತುಮಕೂರು ಮೂಲದ ಇಬ್ಬರು ನಾಪತ್ತೆ

ತುಮಕೂರು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಮೃತರ ಸಂಖ್ಯೆ 903ಕ್ಕೆ ಏರಿಕೆಯಾಗಿದೆ. ಈ ನಡುವೆ ನೇಪಾಳ ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ 13 ಜನರು ಇನ್ನೂ ಸಂಪರ್ಕ್ಕೆ ಸಿಗುತ್ತಿಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾಅರ್ ತಿಳಿಸಿದ್ದಾರೆ. ಇದೇ ವೇಳೆ ನೇಪಾಳಕ್ಕೆ ತೆರಳಿದ್ದ ಯು.ಎಸ್ ಪೌರತ್ವ ಹೊಂದಿರುವ ತುಮಕೂರು ಮೂಲದ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ತುಮಕೂರು ನಗರದ ನೃಪತುಂಗನ ಬಡಾವಣೆಯ ರಂಗುಸುಧೀರ್ (53), ಕೀರ್ತಿ ಆಚಾರ್ಯ (50) ನಾಪತ್ತೆಯಾದವರು. ಅವರು ಯು.ಎಸ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರು. ಆಗಸ್ಟ್ 22ರಂದು ಯು.ಎಸ್‌ನಿಂದ 10 ಜನರ ತಂಡ ನೇಪಾಳಕ್ಕೆ ಹೊರಟಿದ್ದರು. 26ರ ಬೆಳಗ್ಗೆ 8:29ರಂದು ಸಂಬಂಧಿ ಗುರುಪ್ರಸಾದ್ ಎನ್ನುವವರಿಗೆ ಕೊನೆ ಕಾಲ್ ಮಾಡಿದ್ದರು. ಅಲ್ಲಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ. ರಂಗುಸುಧೀರ್ ಹಾಗೂ ಕೀರ್ತಿ ಆಚಾರ್ಯ ಇಬ್ಬರ ಕುಟುಂಬ ತುಮಕೂರಿನಲ್ಲಿದ್ದು, ಕುಟುಂಬ ಸದಸ್ಯರಲ್ಲಿ ಆತಂಕ ಎದುರಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಗಾಗಲೇ ರಾಜ್ಯ ಸರ್ಕಾರ ಹಾಗೂ ನೇಪಾಳ ಸರ್ಕಾರವನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದೇವೆ. ಅಣ್ಣ ವಾಪಸ್ ಬಂದೇ ಬರುತ್ತಾನೆ ಎಂಬ ನಂಬಿಕೆಯಿದೆ ಎಂದು ರಂಗುಸುಧೀರ್ ಅವರ ತಂಗಿ ಸರಿತಾ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular