HomeInternationalನೇಪಾಳದ ಪ್ರಧಾನಿ ಅಭ್ಯರ್ಥಿಗೆ ನಮ್ಮ ಬೆಂಗಳೂರು ನಂಟು!

ನೇಪಾಳದ ಪ್ರಧಾನಿ ಅಭ್ಯರ್ಥಿಗೆ ನಮ್ಮ ಬೆಂಗಳೂರು ನಂಟು!

ಭಾರತದ ಪಕ್ಕದ ನೇಪಾಳ 2025ರಲ್ಲಿ ಜೆನ್‌ ಝೀ ಹೋರಾಟಕ್ಕೆ ಸಾಕ್ಷಿಯಾಗಿತ್ತು. 2026ರ ಮಾರ್ಚ್‌ 5ರಂದು ನೇಪಾಳದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಚುನಾವಣೆ ಬಳಿಕ ರಾಷ್ಟ್ರದಲ್ಲಿ ಅಧಿಕಾರಕ್ಕೆ ಬರುವ ಪಕ್ಷ ಭಾರತ ಜೊತೆ ಹೇಗೆ ಸಂಬಂಧ ಕಾಪಾಡಿಕೊಳ್ಳಲಿದೆ? ಎಂದು ಕಾದು ನೋಡಬೇಕಿದೆ.

2026ರ ನೇಪಾಳ ಸಾರ್ವತ್ರಿಕ ಚುನಾವಣೆಗೆ ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್‌ಎಸ್‌ಪಿ) ಪ್ರಧಾನಿ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಜೆನ್‌ ಝೀ ಹೋರಾಟದ ಬಳಿಕ ನೇಪಾಳದಲ್ಲಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಸರ್ಕಾರ ಪತನಗೊಂಡಿತ್ತು. ಈಗ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದೆ.

ಭಾನುವಾರ ಆರ್‌ಎಸ್‌ಪಿ ಪಕ್ಷ ಬಾಲೇಂದ್ರ ಶಾ (ಬಾಲೇನ್‌ ಶಾ) ಅವರನ್ನು ತಮ್ಮ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. 35 ವರ್ಷದ ಬಾಲೇನ್ ಶಾ ಹಾಲಿ ಕಾಠ್ಮಂಡು ನಗರದ ಮೇಯರ್. ಅವರು ಮೊದಲು ರ್‍ಯಾಪರ್ ಆಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರು ನಂಟು: ಹಾಲಿ ಕಾಠ್ಮಂಡು ನಗರದ ಮೇಯರ್ ಮತ್ತು 2026ರ ಚುನಾವಣೆ ಆರ್‌ಎಸ್‌ಪಿ ಪಕ್ಷದ ಪ್ರಧಾನಿ ಅಭ್ಯರ್ಥಿ ಬಾಲೇಂದ್ರ ಶಾ ಬೆಂಗಳೂರು ನಗರದ ನಂಟನ್ನು ಹೊಂದಿದ್ದಾರೆ. ನೇಪಾಳದಲ್ಲಿ ಸಿವಿಲ್ ಇಂಜಿನಿಯರ್ ಓದಿದ ಬಳಿಕ ಅವರು ಕರ್ನಾಟಕಕ್ಕೆ ಆಗಮಿಸಿದ್ದರು.

ಬೆಂಗಳೂರು ನಗರದಲ್ಲಿ ಇದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಡಿಯು)ದಲ್ಲಿ ಬಾಲೇಂದ್ರ ಶಾ ಎಂಟೆಕ್ ವ್ಯಾಸಂಗ ಮಾಡಿದ್ದಾರೆ. ಈಗ ಅವರು ನಮ್ಮ ಪಕ್ಕದ ದೇಶದ ಪ್ರಧಾನಿ ಅಭ್ಯರ್ಥಿಯಾಗಿದ್ದಾರೆ.

ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಸರ್ಕಾರ ಪತನಗೊಂಡ ಬಳಿಕ ಮಧ್ಯಂತರ ಸರ್ಕಾರ ರಚನೆ ಸಂದರ್ಭದಲ್ಲಿಯೂ ಬಾಲೇಂದ್ರ ಶಾ ಹೆಸರು ಮುಂಚೂಣಿಗೆ ಬಂದಿತ್ತು. ಆದರೆ ಕೊನೆ ಕ್ಷಣದಲ್ಲಿ ಅವರ ಹೆಸರು ಕೈ ಬಿಡಲಾಗಿತ್ತು.

ನೇಪಾಳದ ಯುವ ನಾಯಕ ಬಾಲೇಂದ್ರ ಶಾ ಅವರನ್ನು ಪಕ್ಷ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ನೇಮಿಸಿದೆ. ಆದರೆ ರಾಷ್ಟ್ರೀಯ ಸ್ವತಂತ್ರ ಪಕ್ಷದ ಅಧ್ಯಕ್ಷರಾಗಿ ರಬಿ ಲಮಿಚಾನೆ ಮುಂದುವರಿಯಲಿದ್ದಾರೆ.

ಚುನಾವಣಾ ಆಯೋಗವು ಪಕ್ಷಕ್ಕೆ ಈಗಾಗಲೇ ‘ಗಂಟೆ’ ಚಿನ್ಹೆಯನ್ನು ನೀಡಿದೆ.  ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ಯುವ ಪೀಳಿಗೆ ಆರಂಭಿಸಿದ ಚಳುವಳಿಯ ಬಳಿಕ ಮೊದಲ ಬಾರಿಗೆ ನೇಪಾಳದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.

ಕೆ.ಪಿ. ಶರ್ಮಾ ಓಲಿ ನೇತೃತ್ವದ ಸರ್ಕಾರದ ಪತನಕ್ಕೆ ಕಾರಣವಾದ 2025ರ ಸೆಪ್ಟೆಂಬರ್ ಚಳುವಳಿಯನ್ನು ಮುನ್ನಡೆಸಿದ ಉದಯೋನ್ಮುಖ ಯುವ ರಾಜಕೀಯ ಶಕ್ತಿಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಈ ಪ್ರಧಾನಿ ಅಭ್ಯರ್ಥಿ ಘೋಷಣೆ ಮಹತ್ವದ ಹೆಜ್ಜೆಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಜೆನ್‌ ಝೀಗಳು ಪಕ್ಷವನ್ನು ಬೆಂಬಿಸುವ ಸಾಧ್ಯತೆ ಇದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಸಾಮಾಜಿಕ ಜಾಲತಾಣಗಳಿಗೆ ನಿರ್ಬಂಧ ಹೇರಿದ ತೀರ್ಮಾನದ ವಿರುದ್ಧ ಜೆನ್‌ ಝೀಗಳು ಹೋರಾಟ ಆರಂಭಿಸಿದರು. ಬಳಿಕ ಇದು ಸರ್ಕಾರ ಪತನವಾಗಿ ಪ್ರಧಾನಿ ರಾಜೀನಾಮೆ ನೀಡುವ ತನಕ ಸಾಗಿತು.

ಶ್ರೀಲಂಕಾ, ಬಾಂಗ್ಲಾದೇಶದಲ್ಲಿ ನಡೆದ ಗಲಭೆ ಮಾದರಿಯಲ್ಲಿಯೇ ನೇಪಾಳದಲ್ಲಿಯೂ ದೊಡ್ಡ ಗಲಭೆ ನಡೆಯಿತು. ಆಡಳಿತ ನಡೆಸುತ್ತಿರುವ ಸರ್ಕಾರದ ವಿರುದ್ಧ ದುರಾಡಳಿತ, ಭ್ರಷ್ಟಾಚಾರ, ಸಜ್ಜನಪಕ್ಷಪಾತದ ಆರೋಪಗಳಿದ್ದವು. ಜೆನ್‌ ಝೀಗಳ ಹೋರಾಟ ಸರ್ಕಾರವೇ ಪತನಗೊಳ್ಳುವಂತೆ ಮಾಡಿತು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular