HomeInternationalನೇಪಾಳ ಪ್ರವಾಹದಲ್ಲೂ ವಿಕೃತಿ..! ಮೃತ ಮಹಿಳೆಯ ಚಿನ್ನದ ಕಿವಿಯೋಲೆ ಕದ್ದಿದ್ದ ಇಬ್ಬರು ಅರೋಪಿಗಳು ಅರೆಸ್ಟ್

ನೇಪಾಳ ಪ್ರವಾಹದಲ್ಲೂ ವಿಕೃತಿ..! ಮೃತ ಮಹಿಳೆಯ ಚಿನ್ನದ ಕಿವಿಯೋಲೆ ಕದ್ದಿದ್ದ ಇಬ್ಬರು ಅರೋಪಿಗಳು ಅರೆಸ್ಟ್

ನೇಪಾಳದಲ್ಲಿ ಭೀಕರ ಪ್ರವಾಹದ ನಡುವೆ ಮಾನವೀಯತೆಯನ್ನೇ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಪ್ರವಾಹದಲ್ಲಿ ಮೃತಪಟ್ಟ ಮಹಿಳೆಯ ಮೃತದೇಹವನ್ನು ಕೂದಲು ಹಿಡಿದು ಎಳೆದಾಡಿ, ಆಕೆಯ ಕಿವಿಗಳಲ್ಲಿದ್ದ ಚಿನ್ನದ ಕಿವಿಯೋಲೆಗಳನ್ನು ಕದ್ದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ನೇಪಾಳದಲ್ಲಿ ಪ್ರವಾಹ ಸಂತ್ರಸ್ತೆಯ ಮೃತದೇಹದಿಂದ ಚಿನ್ನದ ಕಿವಿಯೋಲೆಗಳನ್ನು ಕದ್ದ ಆರೋಪದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ವೈರಲ್‌ ಆಗಿರುವ ವಿಡಿಯೋದ ಆಧಾರದ ಮೇಲೆ ಆರೋಪಿಗಳನ್ನು 25 ವರ್ಷದ ಮದನ್ ಗುರುಂಗ್ ಮತ್ತು 38 ವರ್ಷದ ಉಮೇಶ್ ಚೌಧರಿ ಎಂದು ಗುರುತಿಸಲಾಗಿದೆ.

ನೇಪಾಳದ ನಾರಾಯಣಿ ನದಿಯಲ್ಲಿ ಉಂಟಾದ ಭೀಕರ ಪ್ರವಾಹದ ವೇಳೆ ಕೊಚ್ಚಿಕೊಂಡು ಹೋಗಿದ್ದ ಮಹಿಳೆಯ ಮೃತದೇಹದಿಂದ ಚಿನ್ನದ ಕಿವಿಯೋಲೆಗಳನ್ನು ಕದ್ದ ಆರೋಪದ ಮೇಲೆ ನೇಪಾಳ ಪೊಲೀಸರು ಗುರುವಾರ ಇಬ್ಬರನ್ನು ಬಂಧಿಸಿದ್ದಾರೆ.ಮಹಿಳೆಯ ಮೃತದೇಹದಿಂದ ಚಿನ್ನದ ಕಿವಿಯೋಲೆಗಳನ್ನು ತೆಗೆಯುತ್ತಿರುವ ದೃಶ್ಯಗಳಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಈ ಬಂಧನ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೈರಲ್ ವಿಡಿಯೋದಲ್ಲಿ ಏನಿದೆ?

ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಮರದ ಹಲಗೆಗಳ ಸಹಾಯದಿಂದ ನೀರಿನಿಂದ ಮಹಿಳೆಯ ಮೃತದೇಹವನ್ನು ಹೊರಗೆಳೆಯುತ್ತಿರುವುದು ಕಂಡುಬಂದಿದೆ.

ನಂತರ ಅವರು ಮಹಿಳೆಯ ಕೂದಲನ್ನು ಹಿಡಿದು ಮೃತದೇಹವನ್ನು ಎಳೆದಾಡಿದ್ದಾರೆ. ಬಳಿಕ ಆಕೆಯ ಎರಡೂ ಕಿವಿಗಳಲ್ಲಿದ್ದ ಕಿವಿಯೋಲೆಗಳನ್ನು ತೆಗೆದು ಪಕ್ಕಕ್ಕೆ ಇಟ್ಟಿದ್ದಾರೆ. ಈ ದೃಶ್ಯವನ್ನು ಸುತ್ತಮುತ್ತಲಿದ್ದ ಕೆಲವರು ವಿಡಿಯೋ ಮಾಡಿದ್ದಾರೆ.

ಸುಮಾರು 41 ಸೆಕೆಂಡ್‌ಗಳ ಈ ವಿಡಿಯೋವನ್ನು ನೇಪಾಳ ಪೊಲೀಸರು ಕೂಡ ಮರುಹಂಚಿಕೊಂಡಿದ್ದು, ಮೃತ ಮಹಿಳೆಯ ಕಿವಿಗಳಿಂದ ಕಿವಿಯೋಲೆಗಳನ್ನು ಕದ್ದ ಆರೋಪದ ಮೇಲೆ ಇಬ್ಬರನ್ನೂ ಬಂಧಿಸಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ.

ತನಿಖೆ ನಡೆಸಿದ ಚಿತ್ವಾನ್ ಪೊಲೀಸರು, ಭೀಕರ ಪ್ರವಾಹದ ಸಂದರ್ಭದಲ್ಲಿ ಈ ಮಹಿಳೆ ನಾರಾಯಣಿ ನದಿಗೆ ಕೊಚ್ಚಿಕೊಂಡು ಹೋಗಿದ್ದಳು ಎಂದು ತಿಳಿಸಿದ್ದಾರೆ.

ವಿಡಿಯೋ ಆಧಾರದ ಮೇಲೆ ಆರೋಪಿಗಳನ್ನು 25 ವರ್ಷದ ಮದನ್ ಗುರುಂಗ್ ಮತ್ತು 38 ವರ್ಷದ ಉಮೇಶ್ ಚೌಧರಿ ಎಂದು ಗುರುತಿಸಲಾಗಿದೆ.ನೇಪಾಳಿ ಮಾಧ್ಯಮ ವರದಿಗಳ ಪ್ರಕಾರ, ಗುರುವಾರ ಭರತ್‌ಪುರ ಮಹಾನಗರ ಪಾಲಿಕೆ-1ರ ಪೋಖರಾ ಬಸ್ ಪಾರ್ಕ್ ಸಮೀಪ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರವಾಹದಂತಹ ಸಂಕಷ್ಟದ ಸಮಯದಲ್ಲಿ ಸಂತ್ರಸ್ತರ ವಸ್ತುಗಳನ್ನು ದೋಚುವುದು ಅಥವಾ ಯಾವುದೇ ರೀತಿಯ ಅಮಾನವೀಯ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ನೇಪಾಳದಲ್ಲಿ ಭೀಕರ ಪ್ರವಾಹ

ನೇಪಾಳ-ಟಿಬೆಟ್ ಗಡಿಯ ಲ್ಹೆಂಡೆ ನದಿಯ ಸಮೀಪ ಹಿಮ-ಬಂಡೆ ಕುಸಿತ ಸಂಭವಿಸಿದ ಬಳಿಕ ಬುಧವಾರ ಭೀಕರ ಪ್ರವಾಹ ಉಂಟಾಯಿತು. ಅಪಾರ ಪ್ರಮಾಣದ ನೀರು, ಕೆಸರು ಮತ್ತು ಬಂಡೆಗಳು ಭೋಟೆ ಕೋಶಿ ಹಾಗೂ ತ್ರಿಶೂಲಿ ನದಿ ವ್ಯವಸ್ಥೆಗಳಿಗೆ ನುಗ್ಗಿದವು.

ಈ ದುರಂತದಲ್ಲಿ ನೇಪಾಳದಲ್ಲಿ ಕನಿಷ್ಠ 469 ಮಂದಿ ಮೃತಪಟ್ಟಿದ್ದು, ಚೀನಾದಲ್ಲೂ ಮೂವರು ಸಾವನ್ನಪ್ಪಿದ್ದಾರೆ. ಇನ್ನೂ ನೂರಾರು ಮಂದಿ ನಾಪತ್ತೆಯಾಗಿದ್ದಾರೆ.

ರಸುವಾ ಮತ್ತು ಧಾಡಿಂಗ್ ಜಿಲ್ಲೆಗಳು ಪ್ರವಾಹದಿಂದ ಹೆಚ್ಚು ಹಾನಿಗೊಳಗಾಗಿದ್ದು, ಬಳಿಕ ಪ್ರವಾಹದ ನೀರು ನುವಾಕೋಟ್, ಚಿತ್ವಾನ್, ಗೋರಖಾ, ತನಹುನ್ ಮತ್ತು ನವಲಪರಾಸಿ ಈಸ್ಟ್ ಪ್ರದೇಶಗಳಿಗೂ ಹರಡಿದೆ.

ರಸ್ತೆಗಳು ಮತ್ತು ಸೇತುವೆಗಳು ಕೊಚ್ಚಿಹೋಗಿದ್ದು, ಸಂಪರ್ಕ ಹಾಗೂ ವಿದ್ಯುತ್ ವ್ಯವಸ್ಥೆಗಳು ಅಸ್ತವ್ಯಸ್ತವಾಗಿರುವುದರಿಂದ ರಕ್ಷಣಾ ತಂಡಗಳಿಗೆ ಹಲವು ಪ್ರದೇಶಗಳನ್ನು ತಲುಪುವುದು ಕಷ್ಟವಾಗಿದೆ.

ಇನ್ನೂ ಅಪಾಯ ಸಂಪೂರ್ಣವಾಗಿ ದೂರವಾಗಿಲ್ಲ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ನದಿಗೆ ಅಡ್ಡಲಾಗಿ ಉಂಟಾದ ತಡೆ ಹಿಂದೆ ರೂಪುಗೊಂಡಿರುವ ಸರೋವರ ಇನ್ನೂ ಸಂಪೂರ್ಣವಾಗಿ ಖಾಲಿಯಾಗಿಲ್ಲ. ಹೀಗಾಗಿ ಭೋಟೆ ಕೋಶಿ ಮತ್ತು ತ್ರಿಶೂಲಿ ಪ್ರದೇಶಗಳಲ್ಲಿ ಮತ್ತಷ್ಟು ಪ್ರವಾಹದ ಅಪಾಯ ಮುಂದುವರಿದಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular