HomeLatest Newsನೀಟ್ ಪ್ರತಿಭಟನೆಗೆ ಬಂದ್ರೆ ಡ್ರಗ್ ಕೇಸ್‌ ಹಾಕಿ ಜೈಲಿಗೆ ಕಳುಹಿಸ್ತೀನಿ: ವಿದ್ಯಾರ್ಥಿಗಳಿಗೆ ಪೊಲೀಸ್ ಬೆದರಿಕೆ; ವಿಡಿಯೊ...

ನೀಟ್ ಪ್ರತಿಭಟನೆಗೆ ಬಂದ್ರೆ ಡ್ರಗ್ ಕೇಸ್‌ ಹಾಕಿ ಜೈಲಿಗೆ ಕಳುಹಿಸ್ತೀನಿ: ವಿದ್ಯಾರ್ಥಿಗಳಿಗೆ ಪೊಲೀಸ್ ಬೆದರಿಕೆ; ವಿಡಿಯೊ ಸೆರೆಹಿಡಿದ ಜೆನ್‌ಝೀ!

ನೀಟ್ ಪ್ರಶ್ನೆಪತ್ರಿಕೆ ಅಕ್ರಮ ಹಾಗೂ ಸೋರಿಕೆ ಕುರಿತು ದೆಹಲಿಯ ಜಂತರ್‌ ಮಂತರ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ನಡೆಸುತ್ತಿದ್ದು, ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾಯಿಸಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.

ಈ ಪ್ರತಿಭಟನೆಯ ಬಿಸಿ ಕೇಂದ್ರ ಸರ್ಕಾರಕ್ಕೂ ಮುಟ್ಟಿದ್ದು, ಫಾಸ್ಟ್ ಟ್ರ್ಯಾಕ್ ಕೋರ್ಟ್ ರಚಿಸಿ ಆದೇಶವನ್ನು ಹೊರಡಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ವಿದ್ಯಾರ್ಥಿಗಳು ಶಿಕ್ಷನ ಸಚಿವರ ರಾಜೀನಾಮೆಗೆ ಪಟ್ಟುಹಿಡಿದಿದ್ದು, ಪ್ರತಿಭಟನೆಯನ್ನು ಇಷ್ಟಕ್ಕೇ ನಿಲ್ಲಿಸುವುದಿಲ್ಲ, ರಾಜೀನಾಮೆ ನೀಡಲೇಬೇಕು ಎನ್ನುತ್ತಿದ್ದಾರೆ.

ಕೇವಲ ದೆಹಲಿ ಮಾತ್ರವಲ್ಲದೇ ದೇಶದ ವಿವಿಧ ನಗರಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗೆಯೇ ಮುಂಬೈನಲ್ಲಿ ಸಹ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಅಲ್ಲಿನ ವಿದ್ಯಾರ್ಥಿಗಳು ಪ್ರತಿಭಟನೆಯ ಹಲವು ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು, ಈ ಪೈಕಿ ಪೊಲೀಸ್ ವಾಹನದಲ್ಲಿ ಕುಳಿತ ವಿದ್ಯಾರ್ಥಿಗಳು ತಮಗೆ ಪೊಲೀಸ್ ಒಬ್ಬರು ಬೆದರಿಕೆ ಹಾಕಿದ್ದನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೊದಲ್ಲಿ ಪೊಲೀಸ್ ಇನ್ನೊಮ್ಮೆ ನೀಟ್ ಪ್ರತಿಭಟನೆಗೆ ಬಂದರೆ ನಿಮಗೆ ಡ್ರಗ್ ಪೌಡರ್‌ಗಳನ್ನು ಕೊಟ್ಟು ಡ್ರಗ್ ಕೇಸ್‌ನಲ್ಲಿ ಜೈಲಿಗೆ ಹಾಕಿಬಿಡುತ್ತೇನೆ, ನನ್ನ ತಾಳ್ಮೆ ಪರೀಕ್ಷಿಸಬೇಡಿ ಎಂದು ಅವಾಜ್ ಹಾಕಿದ್ದಾರೆ. ವಿದ್ಯಾರ್ಥಿಗಳು ವಿಡಿಯೊ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಅರಿವಿಲ್ಲದೇ ಪೊಲೀಸ್ ಹೀಗೆಲ್ಲ ಮಾತನಾಡಿದ್ದು, ತಮಗಾಗುವ ತಪ್ಪನ್ನು ವಿದ್ಯಾರ್ಥಿಗಳು ಪ್ರಶ್ನಿಸಿದರೆ ಸುಳ್ಳು ಕೇಸ್ ಹಾಕಿ ಒಳಹಾಕುತ್ತೇವೆ ಎಂದು ಬೆದರಿಸುವುದು ಎಷ್ಟು ಸರಿ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

https://x.com/Nher_who/status/2080166750017179696?s=20

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular