HomeLatest NewsBIG NEWS : 'NEET ಪೇಪರ್ ಲೀಕ್' ಪ್ರಕರಣ : 13 ಆರೋಪಿಗಳ ವಿರುದ್ಧ CBI...

BIG NEWS : ‘NEET ಪೇಪರ್ ಲೀಕ್’ ಪ್ರಕರಣ : 13 ಆರೋಪಿಗಳ ವಿರುದ್ಧ CBI ಚಾರ್ಜ್‌ಶೀಟ್ ಸ್ವೀಕರಿಸಿದ ಫಾಸ್ಟ್ ಟ್ರ್ಯಾಕ್ ಕೋರ್ಟ್

ಸಾರ್ವಜನಿಕ ಪರೀಕ್ಷೆಗಳಲ್ಲಿ ಪೇಪರ್ ಲೀಕ್ ಹಾಗೂ ಅಕ್ರಮ ಮಾರ್ಗಗಳ ಬಳಕೆಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ರಚಿಸಲಾಗಿರುವ ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್, NEET UG 2026 ಪೇಪರ್ ಲೀಕ್ ಪ್ರಕರಣದಲ್ಲಿ CBI ಸಲ್ಲಿಸಿರುವ ಚಾರ್ಜ್‌ಶೀಟ್ ಅನ್ನು ಬುಧವಾರ ಸ್ವೀಕರಿಸಿದೆ.

ವಿಶೇಷ ನ್ಯಾಯಾಧೀಶೆ ಅನು ಗ್ರೋವರ್ ಬಾಲಿಗಾ ಅವರು 13 ಆರೋಪಿಗಳ ವಿರುದ್ಧ CBI ಸಲ್ಲಿಸಿರುವ ಅಂತಿಮ ವರದಿಯನ್ನು ದಾಖಲಿಸಿಕೊಂಡಿದ್ದು, ಹೆಚ್ಚುವರಿ ದಾಖಲೆಗಳನ್ನು (ಅನೆಕ್ಸರ್‌ಗಳು) ಸಲ್ಲಿಸಲು ತನಿಖಾ ಸಂಸ್ಥೆಗೆ ಸಮಯ ನೀಡಿದ್ದಾರೆ.ಸುಮಾರು 20 ಸಾವಿರ ಪುಟಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಇನ್ನೂ ಮೂರು ದಿನಗಳ ಬಳಿಕ ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು CBI ತಿಳಿಸಿದೆ.

ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಆಗಸ್ಟ್ 3ಕ್ಕೆ ಮುಂದೂಡಿದೆ. ನ್ಯಾಯಾಲಯದ ಆದೇಶದ ಬಳಿಕ CBI ಪರವಾಗಿ ವಕೀಲರಾದ ವಿ.ಕೆ. ಪಾಠಕ್ ಮತ್ತು ಅರ್ಜುನ್ ಆನಂದ್ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

13 ಆರೋಪಿಗಳ ವಿರುದ್ಧ ಆರೋಪ ಪಟ್ಟಿ

ಮಂಗಳವಾರ CBI, NEET UG 2026 ಪೇಪರ್ ಲೀಕ್ ಪ್ರಕರಣದಲ್ಲಿ 13 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು. ಆರೋಪಿಗಳಲ್ಲಿ ಮೂವರು ಪೇಪರ್ ತಯಾರಿ ತಜ್ಞರು, ಎರಡು ಕೋಚಿಂಗ್ ಸೆಂಟರ್‌ಗಳೊಂದಿಗೆ ಸಂಪರ್ಕ ಹೊಂದಿರುವವರು, ಮಧ್ಯವರ್ತಿಗಳು ಹಾಗೂ ಲಾಭ ಪಡೆದ ಕೆಲ ಅಭ್ಯರ್ಥಿಗಳು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

CBI ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕ್ರಿಮಿನಲ್ ಸಂಚು, ವಂಚನೆ, ನಂಬಿಕೆ ದ್ರೋಹ, ಸಾಕ್ಷ್ಯ ನಾಶ ಸೇರಿದಂತೆ ಹಲವು ಆರೋಪಗಳನ್ನು ದಾಖಲಿಸಲಾಗಿದೆ.ಇದಲ್ಲದೆ ಭ್ರಷ್ಟಾಚಾರ ತಡೆ ಕಾಯ್ದೆ ಹಾಗೂ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ವಿಧಾನಗಳ ತಡೆ) ಕಾಯ್ದೆ, 2024 ಅಡಿಯಲ್ಲಿ ಕೂಡ ಆರೋಪಗಳನ್ನು ದಾಖಲಿಸಲಾಗಿದೆ.

NEET ಪ್ರಕರಣ ವಿಳಂಬದ ಬಗ್ಗೆ CJP ವ್ಯಂಗ್ಯ

ಇದೇ ವೇಳೆ, NEET ಪ್ರಕರಣದ ವಿಳಂಬದ ಕುರಿತು CJP (Cockroach Janta Party) ಮುಖಂಡ ಸೌರವ್ ದಾಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ವ್ಯಂಗ್ಯವಾಡಿದ್ದು, “ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳು ಎಲ್ಲಿವೆ?” ಎಂದು ಪ್ರಶ್ನಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular