HomeLatest Newsಎರಡೇ ದಿನಗಳ ಅಂತರದಲ್ಲಿ ನಯನತಾರಾ ಎರಡು ಸಿನಿಮಾಗಳು ರಿಲೀಸ್: ವಿಭಿನ್ನ ಲುಕ್‌ನಲ್ಲಿ ಮಿಂಚಲು ಕಾದಿದ್ದಾರೆ ಲೇಡಿ...

ಎರಡೇ ದಿನಗಳ ಅಂತರದಲ್ಲಿ ನಯನತಾರಾ ಎರಡು ಸಿನಿಮಾಗಳು ರಿಲೀಸ್: ವಿಭಿನ್ನ ಲುಕ್‌ನಲ್ಲಿ ಮಿಂಚಲು ಕಾದಿದ್ದಾರೆ ಲೇಡಿ ಸೂಪರ್ ಸ್ಟಾರ್

ಸಿನಿಪ್ರಿಯರಿಗೆ ಹಾಗೂ ನಯನತಾರಾ ಅಭಿಮಾನಿಗಳಿಗೆ ಆಗಸ್ಟ್ ಕೊನೆಯ ವಾರ ಸಖತ್ ಸರ್‌ಪ್ರೈಸ್ ಕಾಯುತ್ತಿದೆ. ಕೇವಲ ಎರಡೇ ದಿನಗಳ ಅಂತರದಲ್ಲಿ ನಯನತಾರಾ ಅಭಿನಯದ ಎರಡು ವಿಭಿನ್ನ ಸಿನಿಮಾಗಳು ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಿದ್ಧವಾಗಿವೆ.

ಮೊದಲಿಗೆ ಗೀತು ಮೋಹನ್‌ದಾಸ್ ನಿರ್ದೇಶನದ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಿಗ್ ಬಜೆಟ್ ಆಕ್ಷನ್ ಡ್ರಾಮಾ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ನಯನತಾರಾ ಅವರು ಯಶ್ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಾಸ್ ಹಾಗೂ ತೀವ್ರತೆಯಿಂದ ಕೂಡಿದ ಆಕ್ಷನ್ ಅವತಾರದಲ್ಲಿ ನಟಿಸಿದ್ದಾರೆ. ಇದಾದ ಎರಡೇ ದಿನಕ್ಕೆ, ಅಂದರೆ ಆಗಸ್ಟ್ 28ರಂದು ನಟ ಕವಿನ್ ಜೊತೆಗಿನ ‘ಹಾಯ್’ ಎಂಬ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಈ ಸಿನಿಮಾ ಆಗಸ್ಟ್ 14ರಂದು ಬರಬೇಕಿತ್ತು, ಆದರೆ ಈಗ ಆಗಸ್ಟ್ 28ಕ್ಕೆ ಮುಂದೂಡಲ್ಪಟ್ಟಿದೆ.

ಒಂದೆಡೆ ಪ್ಯಾನ್ ಇಂಡಿಯಾ ಮಟ್ಟದ ಆಕ್ಷನ್ ಸಿನಿಮಾ, ಇನ್ನೊಂದೆಡೆ ಲೈಟ್‌ಹಾರ್ಟೆಡ್ ರೊಮ್ಯಾಂಟಿಕ್ ಕಥಾಹಂದರ. ಒಂದೇ ವಾರದಲ್ಲಿ ನಯನತಾರಾ ಅವರನ್ನು ಸಂಪೂರ್ಣ ವಿಭಿನ್ನ ಶೇಡ್‌ಗಳಲ್ಲಿ ನೋಡುವುದು ಅಭಿಮಾನಿಗಳಿಗೆ ನಿಜಕ್ಕೂ ಹಬ್ಬದಂತಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾಕ್ಸ್ ಆಫೀಸ್‌ನಲ್ಲಿ ‘ಟಾಕ್ಸಿಕ್’ ಸಿನಿಮಾ ಭಾರೀ ಓಪನಿಂಗ್ ಪಡೆಯುವುದು ಖಚಿತವಾಗಿದ್ದು, ಅದರ ಬೆನ್ನಲ್ಲೇ ಬರುವ ‘ಹಾಯ್’ ಚಿತ್ರಕ್ಕೆ ಪ್ರೇಕ್ಷಕರು ಹೇಗೆ ಸ್ಪಂದಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಇನ್ನು ಸಾಮಾನ್ಯವಾಗಿ ತಮ್ಮ ಸಿನಿಮಾಗಳ ಪ್ರಚಾರದಿಂದ ದೂರ ಉಳಿಯುವ ನಯನತಾರಾ, ಈ ಬಾರಿ ‘ಟಾಕ್ಸಿಕ್’ ಟ್ರೇಲರ್ ಲಾಂಚ್ ಹಾಗೂ ‘ಹಾಯ್’ ಚಿತ್ರದ ಪ್ರಚಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಅವರ ಫ್ಯಾನ್ಸ್‌ಗೆ ಖುಷಿ ನೀಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular