HomeIndiaನಾಸಿಕ್ ವಂಚಕ ಸ್ವಾಮಿಯ ಭೀಕರ ಮುಖವಾಡ ಬಯಲು: 15 ಲಕ್ಷದ ಜೇನುತುಪ್ಪದ ಹೆಸರಲ್ಲಿ ಗಣ್ಯರಿಗೂ ವಂಚನೆ!

ನಾಸಿಕ್ ವಂಚಕ ಸ್ವಾಮಿಯ ಭೀಕರ ಮುಖವಾಡ ಬಯಲು: 15 ಲಕ್ಷದ ಜೇನುತುಪ್ಪದ ಹೆಸರಲ್ಲಿ ಗಣ್ಯರಿಗೂ ವಂಚನೆ!

ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ಆಧ್ಯಾತ್ಮ ಮತ್ತು ಜ್ಯೋತಿಷ್ಯದ ಹೆಸರಿನಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಅಶೋಕ್ ಖರಾತ್ ಎಂಬ ವ್ಯಕ್ತಿಯ ಬಂಧನದ ಬೆನ್ನಲ್ಲೇ ಆಘಾತಕಾರಿ ವಿಷಯಗಳು ಹೊರಬರುತ್ತಿವೆ. ತನ್ನನ್ನು ತಾನು ದೈವಪುರುಷ ಎಂದು ಕರೆದುಕೊಳ್ಳುತ್ತಿದ್ದ ಈತ, ಭಕ್ತರಿಗೆ ‘ಮ್ಯಾಜಿಕ್’ ಜೇನುತುಪ್ಪ ಮಾರಾಟ ಮಾಡುವ ಮೂಲಕ ಕೋಟ್ಯಂತರ ರೂಪಾಯಿ ವಂಚಿಸಿರುವುದು ಈಗ ಬೆಳಕಿಗೆ ಬಂದಿದೆ.

ಏನಿದು 15 ಲಕ್ಷದ ಜೇನುತುಪ್ಪ? ಟರ್ಕಿ ದೇಶದ ಆರ್ಟ್ವಿನ್ ನಗರದ ಸುಮಾರು 1,800 ಮೀಟರ್ ಆಳದ ಗುಹೆಯಲ್ಲಿ ವರ್ಷಕ್ಕೊಮ್ಮೆ ಮಾತ್ರ ಸಿಗುವ ‘ಎಲ್ವಿಶ್’ (Elvish) ಎಂಬ ಅಪರೂಪದ ಜೇನುತುಪ್ಪವನ್ನು ಈತ ತನ್ನ ಪ್ರಭಾವಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ. ಮಾರುಕಟ್ಟೆಯಲ್ಲಿ ಇದರ ಬೆಲೆ ಕೆಜಿಗೆ 9 ಲಕ್ಷ ರೂಪಾಯಿ ಇದ್ದರೆ, ಈತ ಮಂತ್ರದ ಶಕ್ತಿ ಮತ್ತು ಯೌವನ ನೀಡುವ ‘ಮ್ಯಾಜಿಕ್ ಜೇನು’ ಎಂದು ನಂಬಿಸಿ ಬರೋಬ್ಬರಿ 15 ಲಕ್ಷ ರೂಪಾಯಿಗೆ ಮಾರುತ್ತಿದ್ದ ಎನ್ನಲಾಗಿದೆ. ರಾಜಕಾರಣಿಗಳು ಮತ್ತು ಉದ್ಯಮಿಗಳು ಲೈಂಗಿಕ ಆರೋಗ್ಯ ವೃದ್ಧಿಗಾಗಿ ಈತನ ಬಳಿ ಈ ಜೇನುತುಪ್ಪ ಖರೀದಿಸುತ್ತಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ತಿಳಿದುಬಂದಿದೆ.

ಲೈಂಗಿಕ ದೌರ್ಜನ್ಯ ಮತ್ತು ನರಬಲಿಯ ಶಂಕೆ ಮರ್ಚೆಂಟ್ ನೇವಿಯ ನಿವೃತ್ತ ಅಧಿಕಾರಿಯಾಗಿದ್ದ ಅಶೋಕ್ ಖರಾತ್, ಧಾರ್ಮಿಕ ವಿಧಿವಿಧಾನಗಳ ಹೆಸರಿನಲ್ಲಿ ಹಲವು ಮಹಿಳೆಯರ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದಾನೆ. ಅಷ್ಟೇ ಅಲ್ಲದೆ, ಈತನ ಮನೆಯಲ್ಲಿ ರಿವಾಲ್ವರ್ ಮತ್ತು ಗುಂಡುಗಳು ಪತ್ತೆಯಾಗಿದ್ದು, ಧಾರ್ಮಿಕ ವಿಧಿಗಳ ಹೆಸರಿನಲ್ಲಿ ಈತ ‘ನರಬಲಿ’ ನೀಡಿರಬಹುದು ಎಂಬ ಗಂಭೀರ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಪತ್ತೆಯಾದ ಗುಂಡುಗಳನ್ನು ಪೂಜಾ ಕಾರ್ಯದಲ್ಲಿ ಬಳಸಲಾಗಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರಿ ಅಧಿಕಾರಿಯ ನಂಟು ಈ ವಂಚಕ ಸ್ವಾಮಿಯ ಜೊತೆ ಹಣಕಾಸಿನ ವ್ಯವಹಾರ ಹೊಂದಿದ್ದ ಸರ್ಕಾರಿ ಅಧಿಕಾರಿಯೊಬ್ಬರ ವಿರುದ್ಧವೂ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಅಭಿಜೀತ್ ಭಾಂಡೆ ಪಾಟೀಲ್ ಎಂಬ ಉಪ ಜಿಲ್ಲಾಧಿಕಾರಿಯ ಪತ್ನಿ ಈ ಅಶೋಕ್ ಖರಾತ್ ಜೊತೆ ಭೂ ವ್ಯವಹಾರ ನಡೆಸಿದ್ದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪಾಟೀಲ್ ಅವರನ್ನು ಸ್ಲಂ ರಿಹ್ಯಾಬಿಲಿಟೇಶನ್ ಅಥಾರಿಟಿಯಿಂದ ತಕ್ಷಣವೇ ವಜಾಗೊಳಿಸಿ ಕಂದಾಯ ಇಲಾಖೆಗೆ ವರದಿ ಮಾಡಿಕೊಳ್ಳುವಂತೆ ಆದೇಶಿಸಲಾಗಿದೆ.

ಮೂಢನಂಬಿಕೆ ಮತ್ತು ಭಯವನ್ನು ಬಂಡವಾಳವಾಗಿಸಿಕೊಂಡು ಸಾಮ್ರಾಜ್ಯ ಕಟ್ಟಿದ್ದ ಈ ‘ಕಪಟ ಸ್ವಾಮಿ’ ಈಗ ಪೊಲೀಸ್ ಕಸ್ಟಡಿಯಲ್ಲಿದ್ದು, ತನಿಖೆ ಮುಂದುವರಿದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular