ಭಾರತದ ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 22ರಂದು ಮೀರತತ್‌ಗೆ ಭೇಟಿ ನೀಡಲಿದ್ದಾರೆ. ಸುಮಾರು 12,930 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ ಹಾಗೂ ಲೋಕಾರ್ಪಣೆ ಮಾಡಲಿದ್ದಾರೆ. ಇದರಲ್ಲಿ ಮೀರತ್ ಮೆಟ್ರೋ ಸಹ ಸೇರಿದೆ.
ಈ ಯೋಜನೆಗಳಲ್ಲಿ ಒಂದು ‘ಮೀರತ್ ಮೆಟ್ರೋ’. ಇದು ಭಾರತದ ಅತ್ಯಂತ ವೇಗದ ಮೆಟ್ರೋ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಮೀರತ್ ಮೆಟ್ರೋವನ್ನು ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ.
ಪ್ರಧಾನಮಂತ್ರಿಗಳ ಕಚೇರಿ ಮಾಹಿತಿಯಂತೆ ನರೇಂದ್ರ ಮೋದಿ ಫೆಬ್ರವರಿ 22ರಂದು ಉತ್ತರ ಪ್ರದೇಶದ ಮೀರತ್ ನಗರಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12:30ರ ಸುಮಾರಿಗೆ ಅವರು ಶತಾಬ್ದಿ ನಗರ ನಮೋ ಭಾರತ್ ನಿಲ್ದಾಣದಲ್ಲಿ ‘ಮೀರತ್ ಮೆಟ್ರೋ’ ಮತ್ತು ‘ನಮೋ ಭಾರತ್’ ರೈಲಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಅವರು ಮೀರತ್ ದಕ್ಷಿಣ ನಿಲ್ದಾಣದವರೆಗೆ ಮೆಟ್ರೋದಲ್ಲಿ ಪ್ರಯಾಣ ಕೈಗೊಳ್ಳಲಿದ್ದಾರೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ ನರೇಂದ್ರ ಮೋದಿ ಮೀರತ್‌ನಲ್ಲಿ ಸುಮಾರು 12,930 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಸಮಾವೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಮೀರತ್ ಮೆಟ್ರೋ ವಿಶೇಷತೆಗಳು
- ಮೊದಲ ಬಾರಿಗೆ ನಮೋ ಭಾರತ್ ನಂತೆಯೇ ಅದೇ ಮೂಲಸೌಕರ್ಯದಲ್ಲಿ ಕಾರ್ಯನಿರ್ವಹಿಸುವ ಮೀರತ್ ದಕ್ಷಿಣ ಮತ್ತು ಮೋದಿಪುರಂ ನಡುವಿನ ಮೀರತ್ ಮೆಟ್ರೋ ಸೇವೆಯನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.
- ಮೀರತ್ ಮೆಟ್ರೋ ಸುಮಾರು 120 ಕಿ.ಮೀ. ಗರಿಷ್ಠ ಕಾರ್ಯಾಚರಣೆಯ ವೇಗದೊಂದಿಗೆ ಭಾರತದ ಅತ್ಯಂತ ವೇಗದ ಮೆಟ್ರೋ ವ್ಯವಸ್ಥೆಯಾಗಲಿದೆ.
- ಮೆಟ್ರೋ ಕೇವಲ 30 ನಿಮಿಷಗಳಲ್ಲಿ ಇಡೀ ಪ್ರದೇಶವನ್ನು ಕ್ರಮಿಸುತ್ತದೆ. ಮಾರ್ಗದಲ್ಲಿ ಎಲ್ಲಾ ನಿಗದಿತ ನಿಲುಗಡೆಗಳನ್ನು ಹೊಂದಿರುತ್ತದೆ. ನಮೋ ಭಾರತ್ ಮತ್ತು ಮೀರತ್ ಮೆಟ್ರೋಗಳ ಈ ಸರಾಗವಾದ ಏಕೀಕರಣವು ಅತಿ ವೇಗದ ಅಂತರ-ನಗರ ಪ್ರಯಾಣ ಮತ್ತು ತ್ವರಿತ ನಗರದೊಳಗಿನ ಚಲನೆಯನ್ನು ಖಚಿತಪಡಿಸುತ್ತದೆ.
- ಇದು ಭಾರತದಲ್ಲಿ ಸಮಗ್ರ ನಗರ ಮತ್ತು ಪ್ರಾದೇಶಿಕ ಸಾರಿಗೆಗೆ ಮಾನದಂಡವನ್ನು ಸ್ಥಾಪಿಸುತ್ತದೆ. ಇದು ರಸ್ತೆ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಪರಿಣಾಮವಾಗಿ ವಾಹನ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗುತ್ತದೆ.
ಮೋದಿ ಉದ್ಘಾಟಿಸುವ ಇತರ ಯೋಜನೆಗಳು
- ಪ್ರಧಾನಿ ಮೋದಿ 82 ಕಿ.ಮೀ. ದೆಹಲಿ-ಮೀರತ್ ನಮೋ ಭಾರತ್ ಕಾರಿಡಾರ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಭಾರತದ ಮೊದಲ ನಮೋ ಭಾರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯ (ಆರ್.ಆರ್.ಟಿ.ಎಸ್.) ಉಳಿದ ವಿಭಾಗಗಳನ್ನು ಅವರು ಉದ್ಘಾಟಿಸಲಿದ್ದಾರೆ.
- ಇವುಗಳಲ್ಲಿ ದೆಹಲಿಯ ಸರಾಯ್ ಕಾಲೇ ಖಾನ್ ಮತ್ತು ನ್ಯೂ ಅಶೋಕ್ ನಗರ ನಡುವಿನ 5 ಕಿ.ಮೀ. ವಿಭಾಗ ಮತ್ತು ಮೀರತ್ ದಕ್ಷಿಣ ಮತ್ತು ಉತ್ತರ ಪ್ರದೇಶದ ಮೋದಿಪುರಂ ನಡುವಿನ 21 ಕಿ.ಮೀ. ವಿಭಾಗ ಸೇರಿವೆ.
- ನಮೋ ಭಾರತ್ ಭಾರತದ ಮೊದಲ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯಾಗಿದೆ. ಇದು ಸಾಹಿಬಾಬಾದ್, ಗಾಜಿಯಾಬಾದ್, ಮೋದಿನಗರ ಮತ್ತು ಮೀರತ್‌ನಂತಹ ಪ್ರಮುಖ ನಗರ ಕೇಂದ್ರಗಳನ್ನು ದೆಹಲಿಯೊಂದಿಗೆ ವೇಗವಾಗಿ ಸಂಪರ್ಕಿಸಲಿದೆ.
- ಕಾರಿಡಾರ್‌ನ ಮೂಲ ನಿಲ್ದಾಣವಾದ ಸರಾಯ್ ಕಾಲೇ ಖಾನ್, ಈ ಉದ್ಘಾಟನೆಯೊಂದಿಗೆ ಕಾರ್ಯಾರಂಭ ಮಾಡಲಿರುವ 4 ನಮೋ ಭಾರತ್ ನಿಲ್ದಾಣಗಳಲ್ಲಿ ಒಂದಾಗಿದೆ.
- ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣ, ದೆಹಲಿ ಮೆಟ್ರೋದ ಪಿಂಕ್ ಲೈನ್, ವೀರ್ ಹಕೀಕತ್ ರೈ ಐಎಸ್‌ಬಿಟಿ ಮತ್ತು ರಿಂಗ್ ರಸ್ತೆಯನ್ನು ಸರಾಗವಾಗಿ ಸಂಪರ್ಕಿಸುವ ಪ್ರಮುಖ ಬಹು-ಮಾದರಿ ಕೇಂದ್ರವಾಗಿದೆ.
- ಮೀರತ್ ನಲ್ಲಿ ಕಾರ್ಯಾರಂಭ ಮಾಡುತ್ತಿರುವ ಇತರ 3 ನಮೋ ಭಾರತ್ ನಿಲ್ದಾಣಗಳಾದ ಶತಾಬ್ದಿ ನಗರ, ಬೇಗಂಪುಲ್ ಮತ್ತು ಮೋದಿಪುರಂ.

