ಇತ್ತಿಚೆಗಷ್ಟೇ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡಿದ್ದರು. ಆಸ್ಟ್ರೇಲಿಯಾ ಪ್ರಧಾನಮಂತ್ರಿ ಆಂಥೋನಿ ಆಲ್ಬನೀಸ್ ಹಾಗೂ ಮೋದಿ ಅವರು ಪರಸ್ಪರ ಭೇಟಿಯಾಗಿ ಹಲವು ಯೋಜನೆಗಳ ಬಗ್ಗೆ ಚರ್ಚಿಸಿ, ಒಪ್ಪಂದ ಮಾಡಿಕೊಂಡರು.
ಇನ್ನು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಖುಷಿಯಿಂದ ಬರಮಾಡಿಕೊಂಡರು. ವಿವಿಧ ಕಾರ್ಯಕ್ರಮಗಳಲ್ಲಿ ಇಬ್ಬರೂ ಸಂತಸದಿಂದ, ಸ್ನೇಹಮಯವಾಗಿ ಕಾಣಿಸಿಕೊಂಡರು.
ಆದರೆ ಆಸ್ಟ್ರೇಲಿಯಾದ 10 ಎಂಬ ಸುದ್ದಿ ವಾಹಿನಿಯ ಇಬ್ಬರು ನಿರೂಪಕರು ಮಾತ್ರ ಮೋದಿ ಹಾಗೂ ಆಲ್ಬನೀಸ್ ಪರಸ್ಪರ ಕೈ ಕುಲುಕುವುದು ಹಾಗೂ ಪರಸ್ಪರ ಅಪ್ಪಿಕೊಳ್ಳುವುದನ್ನು ಚಿಕ್ಕ ಮಕ್ಕಳ ಹಾಗೆ ಇದೆ ಎಂದು ಗೇಲಿ ಮಾಡಿ ನಕ್ಕಿದ್ದಾರೆ. ಒಮ್ಮೆ ಕೈ ಕುಲುಕುವುದು ಪರವಾಗಿಲ್ಲ, ಆದರೆ ಮೋದಿ ಪದೇ ಪದೇ ಕೈ ಕುಲುಕುವುದು, ಅನಗತ್ಯವಾಗಿ ಅಪ್ಪಿಕೊಲ್ಳುತ್ತಾರೆ ಎಂದು ವಿಡಿಯೊವನ್ನು ಪ್ರಸಾರ ಮಾಡಿ ನಕ್ಕಿದ್ದಾರೆ.
ಇದನ್ನು ಕಂಡರೆ ಶಾಲೆಯ ಮಕ್ಕಳು ನಡೆದುಕೊಳ್ಳುವ ರೀತಿ ಎನಿಸುತ್ತದೆ ಎಂದು ನಿರೂಪಕ ಹೇಳಿದ್ದು, ಮತ್ತೊಮ್ಮೆ ಕೈ ಕುಲುಕೋಣ, ಇನ್ನೊಮ್ಮೆ ಅಪ್ಪಿಕೊಳ್ಳೋಣ, ಪದೇ ಪದೇ ಕೈ ಎತ್ತೋಣ ಎಂದು ಮೋದಿ ಎಷ್ಟು ಸರಿ ಇದನ್ನೇ ಮಾಡ್ತಾರೆ ಎಂದು ಹಂಗಿಸಿದ್ದಾರೆ.
ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೋದಿ ಅಭಿಮಾನಿಗಳು ನಿರೂಪಕರ ವಿರುದ್ಧ ಕಿಡಿಕಾರಿದ್ದಾರೆ. ನಿಮ್ಮ ದೇಶಕ್ಕೆ ಬರುವ ಅತಿಥಿಗಳಿಗೆ ಕೊಡುವ ಗೌರವ ಇದೇನಾ? ನಿಮ್ಮ ದೇಶದ ಪ್ರಧಾನಿ ಜತೆ ಸ್ನೇಹಪೂರ್ವಕವಾಗಿ ನಡೆದುಕೊಳ್ಳುವವರಿಗೆ ಕೊಡುವ ಬೆಲೆ ಇದೇನಾ? ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ.
https://x.com/SupriyaShrinate/status/2077310702583423036?s=20

