HomeAutoನಂದಿನಿ ಹಾಡಿಗೆ ನೀವೂ ರೀಲ್ಸ್ ಮಾಡಿ ಬಂಪರ್ ಬಹುಮಾನ ಗೆಲ್ಲಿ.....2 ಎಲೆಕ್ಟ್ರಿಕ್ ಬೈಕ್ ಘೋಷಿಸಿದ ವಿಕಿಪೀಡಿಯಾ...

ನಂದಿನಿ ಹಾಡಿಗೆ ನೀವೂ ರೀಲ್ಸ್ ಮಾಡಿ ಬಂಪರ್ ಬಹುಮಾನ ಗೆಲ್ಲಿ…..2 ಎಲೆಕ್ಟ್ರಿಕ್ ಬೈಕ್ ಘೋಷಿಸಿದ ವಿಕಿಪೀಡಿಯಾ ಟೀಂ

ಬೆಂಗಳೂರು: ನಾನು ನಂದಿನಿ…ಬೆಂಗ್ಳೂರಿಗ್ ಬಂದೀನಿ… ಕೆಲವೇ ವಾರಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದ ಹಾಡು. ವಿಕಿಪೀಡಿಯಾ ಖ್ಯಾತಿಯ ವಿಕಾಸ್ ಹಾಗೂ ತಂಡ ಈ ಹಾಡಿನ ಸೃಷ್ಟಿಕರ್ತರು. ಇದೀಗ ಈ ತಂಡ ಇದೇ ಹಾಡನ್ನು ರೀಲ್ಸ್ ಮಾಡುವವರಿಗೆ ಬಂಪರ್ ಗಿಫ್ಟ್ ಘೋಷಣೆ ಮಾಡಿದೆ. ಜನರಿಗೆ ಬಹುಮಾನ ಕೊಡುವುದಾಗಿ ವಿಕಾಸ್ ಹಾಗೂ ತಂಡ ಘೋಷಿಸಿದೆ.

ನಾನು ನಂದಿನಿ ಹಾಡು ಐಟಿ ಫೀಲ್ಡ್ ನ ಜನರನ್ನು ಉದ್ದೇಶಿಸಿ ಮಾಡಲಾದ ಹಾಡು. ಈ ಹಾಡು ಜನಪ್ರಿಯಗೊಂಡಿರುವ ಬೆನ್ನಲ್ಲೇ ಮತ್ತಷ್ಟು ಜನರನ್ನು ತಲುಪುವ ಉದ್ದೇಶದಿಂದ ಹಾಡಿಗೆ ರೀಲ್ಸ್ ಮಾಡುವ ಟಾಪ್ 2 ಜನರಿಗೆ ಬಹುಮಾನ ನೀಡುವುದಾಗಿ ವಿಕಾಸ್ ಹಾಗೂ ಟೀಂ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಮರ್ಷಿಯಲ್ ಜಾಹೀರಾತು ರೀತಿಯಲ್ಲಿ ಇದೀಗ ಇದೇ ಹಾಡಿಗೆ ರೀಲ್ಸ್ ಮಾಡಿದವರಿಗೆ ಒಂದು ಲಕ್ಷ ಮೌಲ್ಯದ ಬಹುಮಾನ ಸಿಗಲಿದೆ. ಎಲೆಕ್ಟ್ರಿಕ್ ನಂದಿನಿ ಹೆಸರಲ್ಲಿ ಎಲೆಕ್ರಿಕ್ ಬೈಕ್ ಗಳನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಕಂಪನಿಯೊಂದರ ಜಾಹೀರಾತು ಮಾಡಿರುವ ವಿಕಿಪೀಡಿಯಾ ಟೀಂ, ಹೊಸ ವರ್ಷನ್ ಹಾಡು ‘ನಾನು ನಂದಿನಿ ಶೋರೂಂಗೆ ಬಂದೀನಿ…ಬೌನ್ಸ್ ಸ್ಕೂಟರ್ ತಗೋತೀನಿ, ರೆಡ್ ಕಿಕ್ ಮಾಡ್ತೀನಿ’ ಹಾಡಿಗೆ ರೀಲ್ಸ್ ಮಾಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಜನರಿಗೆ ಆಹ್ವಾನ ನೀಡಿದೆ.

ಈ ಹಾಡಿಗೆ ಬೆಸ್ಟ್ ರೀಲ್ಸ್ ಮಾಡುವವರಿಗೆ ಬಂಪರ್ ಬಹುಮಾನ ನೀಡಲಾಗುವುದು. ಇಬ್ಬರು ವಿಜೇತರಿಗೆ 1 ಲಕ್ಷ ಮೌಲ್ಯದ ಎಲೆಕ್ಟ್ರಿಕ್ ಬೈಕ್ ಗಳನ್ನು ನಿಡುವುದಾಗಿ ತಂಡ ತಿಳಿಸಿದೆ. ಅಕ್ಟೋಬರ್ 3ರವರೆಗೆ ಹಾಡಿಗೆ ರೀಲ್ಸ್ ಮಾಡಲು ಅವಕಾಶವಿದೆ. ಅಂದೇ ಉತ್ತಮ ರೀಲ್ಸ್ ಮಾಡಿದ ಇಬ್ಬರಿಗೆ ಎಲೆಕ್ಟ್ರಿಕ್ ಬೈಕ್ ಗಳನ್ನು ಬಹುಮಾನವಾಗಿ ನೀಡುವುದಾಗಿ ವಿಕಿಪೀಡಿಯಾ ಟೀಂ ತಿಳಿಸಿದೆ.

ಈ ಹಾಡಿಗೆ ರೀಲ್ಸ್ ಮಾಡುವವರಿಗೆ ಯಾವುದೇ ವಿಶೇಷ ನಿಯಮಗಳು ಇಲ್ಲ. ನಿಮ್ಮಲ್ಲಿನ ಯಾವುದಾದರೂ ಬೈಕ್ ಜೊತೆ ಹೊಸ ವರ್ಷನ್ ನ ‘ನಾನು ನಂದಿನಿ ಶೋರೂಂಗೆ ಬಂದೀನಿ…ಬೌನ್ಸ್ ಸ್ಕೂಟರ್ ತಗೋತೀನಿ, ರೆಡ್ ಕಿಕ್ ಮಾಡ್ತೀನಿ’ ಹಾಡಿಗೆ ರೀಲ್ಸ್ ಮಾಡಬಹುದಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular