ಬೆಂಗಳೂರು: ನಂದಿನಿ ಹಾಲಿನ ಟ್ಯಾಂಕರ್ ವೊಂದು ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಅಪಘಾತಕ್ಕೀಡಾಗಿ ಪಲ್ಟಿಯಾಗಿ ಬಿದ್ದಿರುವ ಘಟನೆ ಬೆಂಗಳೂರಿನ ಹೆಬ್ಬಾಳದಲ್ಲಿ ನಡೆದಿದೆ. ಟ್ಯಾಂಕರ್ ನಲ್ಲಿದ್ದ ಹಾಲು ಹೊಳೆಯಂತೆ ರಸ್ತೆ ತುಂಬೆಲ್ಲ ಹರಿದು ಹೋಗಿದ್ದು ಸಾರ್ವಜನಿಕರು ಹಾಲು ಹಿಡಿದುಕೊಳ್ಳಲು ಮುಗಿ ಬಿದ್ದಿದ್ದಾರೆ.
ನಂದಿನಿ ಹಾಲಿನ ಟ್ಯಾಂಕರ್ ನಲ್ಲಿ 14,000 ಲೀಟರ್ ಹಾಲು ತುಂಬಿಕೊಂಡು ತೆರಳುತ್ತಿದ್ದಾಗ ಹೆಬ್ಬಾಳದ ಬಳಿ ಟ್ಯಾಂಕರ್ ಬ್ರೇಕ್ ಫೇಲ್ ಆಗಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪಕ್ಕದ ಸರ್ವಿಸ್ ರಸ್ತೆಗೆ ನುಗ್ಗಿ ಪಲ್ಟಿಯಾಗಿ ಬಿದ್ದಿದೆ. ಟ್ಯಾಂಕರ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಲಿನ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಟ್ಯಾಂಕರ್ ನಲ್ಲಿದ್ದ 14,000 ಲೀಟರ್ ಹಾಲು ರಸ್ತೆಪಾಲಾಗಿದೆ. ಟ್ಯಾಂಕರ್ ನಿಂದ ಹಾಲು ಹೊಳೆಯಂತೆ ಹರಿಯುತ್ತಿದ್ದಂತೆ ಸಾರ್ವಜನಿಕರು ಹಾಲು ಹಿಡಿದುಕೊಳ್ಳಲು ಮುಗಿ ಬಿದ್ದಿದ್ದಾರೆ.
ಇದೇ ವೇಳೆ ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಶಾಲಾ ಮಕ್ಕಳು ತಮ್ಮ ಕೈಲಿದ್ದ ನೀರಿನ ಬಾಟಲ್ ಗಳಲ್ಲಿ ಹಾಲು ಹಿಡಿದುಕೊಳ್ಳಲು ನಾ ಮುಂದು ತಾಮುಂದು ಎಂದು ಮುಗಿಬಿದ್ದಿದ್ದಾರೆ. ಹಾಲಿನ ಟ್ಯಾಂಕರ್ ಚಿಕ್ಕಬಳ್ಳಾಪುರದಿಂದ ಬಮೂಲ್ ಗೆ ತೆರಳುತ್ತಿತ್ತು. ಈ ವೇಳೆ ಬ್ರೇಕ್ ಫೇಲ್ ಆಗಿ ಅಪಘಾತ ಸಂಭವಿಸಿದೆ.
ಟ್ಯಾಂಕರ್ ಪಲ್ಟಿಯಾದ ಪರಿಣಾಮ ಈ ಮಾರ್ಗದಲ್ಲಿ ಸುಮಾರು ಮೂರು ಕಿ.ಮೀ ವರೆಗೆ ಟ್ರಾಫಿಕ್ ಜಾಮ್ ಸಂಭವಿಸಿಸಿ, ವಾಹನ ಸವಾರರು ಕೆಲ ಕಾಲ ಪರದಾಟ ನಡೆಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ವಾಹನ ಸಂಚಾರ ಸುಗಮಗೊಳಿಸಿದ್ದಾರೆ.
ಉದ್ಯಾನವನ ಸಂರಕ್ಷಣೆ ತಿದ್ದುಪಡಿ ಬಿಲ್ ವಾಪಸ್
ಬೆಂಗಳೂರು: ಕರ್ನಾಟಕ ಉದ್ಯಾನವನ ಸಂರಕ್ಷಣೆ ತಿದ್ದುಪಡಿ ವಿಧೇಯಕವನ್ನು ರಾಜ್ಯ ಸಚಿವ ಸಂಪುಟ ಸಭೆ ವಾಪಸ್ ಪಡೆಯಲು ತೀರ್ಮಾನ ಕೈಗೊಂಡಿದೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕ ಹಿಂಪಡೆಯಲು ತೀರ್ಮಾನಿಸಲಾಗಿದೆ. ಸಾರ್ವಜನಿಕರು ಮತ್ತು ವಿರೋಧ ಪಕ್ಷಗಳ ತೀವ್ರ ವಿರೋಧದ ಬಳಿಕ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಕಳೆದ ಅಧಿವೇಶನದಲ್ಲಿ ತರಾತುರಿಯಲ್ಲಿ ಅಂಗೀಕರಿಸಲಾಗಿದ್ದ ಈ ವಿಧೇಯಕಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಬೆಂಗಳೂರಿನ ಉದ್ಯಾನವನಗಳು ನಗರದ ಶ್ವಾಸಕೋಶ ಇದ್ದಂತೆ. ಅಂತಹ ಪ್ರಮುಖ ಉದ್ಯಾನವನಗಳ 5% ಜಾಗವನ್ನು ಖಾಸಗಿ ಉದ್ದೇಶಗಳಿಗೆ ಬಳಸಲು ಅವಕಾಶ ಕಲ್ಪಿಸುವುದರಿಂದ ಪಾರ್ಕ್‌ಗಳು ನಶಿಸಿ ಹೋಗುತ್ತವೆ ಎಂಬುದು ಸಾರ್ವಜನಿಕರ ಪ್ರಮುಖ ಆತಂಕವಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿಯುವ ಸರ್ಕಾರದ ನಡೆಯ ಬಗ್ಗೆಯೂ ಟೀಕೆ ವ್ಯಕ್ತವಾಗಿತ್ತು.
ಕರ್ನಾಟಕ ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕ ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಬಿಲ್ ಪಾಸ್ ಆಗಿತ್ತು. ಅಂಗೀಕೃತ ವಿಧೇಯಕವನ್ನು ರಾಜ್ಯಪಾಲರಿಗೂ ಕಳುಹಿಸಲಾಗಿತ್ತು. ಆದರೆ ಈ ವಿಧೇಯಕ ಜಾರಿಗೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಈ ವಿಧೇಯಕದ ಪ್ರಕಾರ ಉದ್ಯಾನವನಗಳ ಶೇ.೫ರಷ್ಟು ಜಾಗ ಮಾರಾಟ, ಲೀಸ್ (ಬಾಡಿಗೆ), ಉಡುಗೊರೆ, ವಿನಿಮಯ ಅಥವಾ ಅಡಮಾನದ ಮೂಲಕ ಸರ್ಕಾರಿ ಇಲಕಹೆಗಳು, ಶಾಸನಬದ್ಧ ಸಂಸ್ಥೆಗಳು ಅಥವಾ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸುವ ಅವಕಾಶ ನೀಡುವ ವಿಧೇಯಕ ಇದಾಗಿತ್ತು. ಇದೀಗ ಈ ವಿಧೇಯಕವನ್ನು ರಾಜ್ಯ ಸರ್ಕಾಅರ ವಾಪಸ್ ಪಡೆದುಕೊಂಡಿದೆ ಎಂ<ದು ತಿಳಿದುಬಂದಿದೆ.

