ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಜೆ ರವಿಶಂಕರ್ ರೀಚ್-6ರ ಸುರಂಗ ಮೆಟ್ರೋ ಕಾರಿಡಾರ್ ಪರಿಶೀಲನೆ ಮಾಡಿದರು. ಇಂಜಿನಿಯರ್ಗಳು, ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸೂಚನೆಗಳನ್ನು ಕೊಟ್ಟರು.
ವ್ಯವಸ್ಥಾಪಕ ನಿರ್ದೇಶಕರು ಶುಕ್ರವಾರ ನಾಗವಾರ-ಡೈರಿ ಸರ್ಕಲ್ವರೆಗಿನ ರೀಚ್-6ರ ಭೂಗತ ಮೆಟ್ರೋ ಕಾರಿಡಾರ್ನಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
ನಿಲ್ದಾಣ ನಿರ್ಮಾಣ, ಸುರಂಗ ಸಂಬಂಧಿತ ಕಾಮಗಾರಿಗಳು, ಹಳಿ ಅಳವಡಿಕೆ, ವಿವಿಧ ವ್ಯವಸ್ಥೆಗಳ ಸ್ಥಾಪನೆ, ಪರೀಕ್ಷಾ ಗಡುವುಗಳು ಹಾಗೂ ಇತರೆ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿ, ಮಾಹಿತಿ ಪಡೆದರು.
ಈ ಮಾರ್ಗವು ಕಾರ್ಯಾರಂಭವಾದ ನಂತರ ಬೆಂಗಳೂರಿನ ಉತ್ತರ-ದಕ್ಷಿಣ ಸಂಪರ್ಕ ಬಲವಾಗುವ ಜೊತೆಗೆ ಪ್ರಮುಖ ಮುಖ್ಯ ರಸ್ತೆಗಳ ಮೇಲಿನ ಸಂಚಾರ ದಟ್ಟಣೆಯೂ ತಗ್ಗಲಿದೆ ಎಂದರು.
ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಈ ಕಾರಿಡಾರ್ ಮಹತ್ವದ ಪಾತ್ರ ವಹಿಸುವುದರಿಂದ, ಬಾಕಿ ಉಳಿದಿರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು.
ವಿವಿಧ ವಿಭಾಗಗಳ ನಡುವೆ ಸಮನ್ವಯವನ್ನುಹೆಚ್ಚಿ ಸುವಂತೆ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಹಾಗೂ ಸ್ಥಳೀಯ ಇಂಜಿನಿಯರ್ಗಳಿಗೆ ಡಾ. ಜೆ ರವಿಶಂಕರ್ ನಿರ್ದೇಶನ ನೀಡಿದರು.
ಈ ಪರಿಶೀಲನಾ ಸಂದರ್ಭದಲ್ಲಿ ನಿಗಮದ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

