HomeKarnatakaಕುಡಿದ ಮತ್ತಿನಲ್ಲಿ ನೇಲ್ ಕಟರ್ ನುಂಗಿದ ಭೂಪ... 8 ವರ್ಷಗಳ ಬಳಿಕ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ...

ಕುಡಿದ ಮತ್ತಿನಲ್ಲಿ ನೇಲ್ ಕಟರ್ ನುಂಗಿದ ಭೂಪ… 8 ವರ್ಷಗಳ ಬಳಿಕ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ಡಾಕ್ಟರ್!

ಬೆಂಗಳೂರು: ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ನೇಲ್ ಕಟರ್ ನ್ನೇ ನುಂಗಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರಿನ ಸರ್ಜಾಪುರ ಮೂಲದ ವ್ಯಕ್ತಿಯೊಬ್ಬ 8 ವರ್ಷಗಳ ಹಿಂದೆಯೇ ಕುಡಿದ ಮತ್ತಿನಲ್ಲಿ ನೇಲ್ ಕಟರ್ ನ್ನು ನುಂಗಿದ್ದನಂತೆ. 8 ವರ್ಷದ ಬಳಿಕ ಆಪರೇಷನ್ ನಡೆಸಿ ಮಣಿಪಾಲ್ ಆಸ್ಪತ್ರೆಯ ವೈದ್ಯರು ವ್ಯಕ್ತಿ ಹೊಟ್ಟೆಯಲ್ಲಿದ್ದ ನೇಲ್ ಕಟರ್ ಹೊರತೆಗೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವ್ಯಕ್ತಿ ಆಗಾಗ ಹೊಟೆನೋವೆಂದು ಆಸ್ಪತ್ರೆಗೆ ಹೋಗುತ್ತಿದ್ದನಂತೆ. ಪದೇ ಪದೇ ಹೊಟ್ಟೆನೋವು ಬರಲು ಕರಣವೇನಿರಬಹುದು ಎಂದು ನೋಡಲು ವೈದ್ಯರು ಸ್ಕ್ಯಾನಿಂಗ್ ಮಾಡಿಸುವಂತೆ ಸೂಚಿಸಿದ್ದರು. ಸ್ಕ್ಯಾನಿಂಗ್ ವೇಳೆ ಹೊಟ್ಟೆಯಲ್ಲಿ ನೇಲ್ ಕಟರ್ ಇರುವುದು ಪತ್ತೆಯಾಗಿದೆ.

ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ವ್ಯಕ್ತಿ ದಾಖಲಾಗಿದ್ದ. ಈ ವೇಳೆ ವೈದ್ಯರು ಲ್ಯಾಪ್ರೋಸ್ಕೊಪಿಕ್ ಶಸ್ತ್ರಚಿಕಿತ್ಸೆ ಮೂಲಕ ವ್ಯಕ್ತಿಯ ಹೊಟ್ಟೆಯಲ್ಲಿದ್ದ ನೇಲ್ ಕಟರ್ ನ್ನು ಹೊರತೆಗೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular