HomeIndiaನಾಗ್ಪುರದಲ್ಲಿ ಅಮಾನವೀಯ ಕೃತ್ಯ: ಮೈ ಮೇಲೆ ಬಣ್ಣ ಹಾಕಿದ್ದಕ್ಕೆ 4 ವರ್ಷದ ಮೊಮ್ಮಗನ ಮೇಲೆ ಕುದಿಯುವ...

ನಾಗ್ಪುರದಲ್ಲಿ ಅಮಾನವೀಯ ಕೃತ್ಯ: ಮೈ ಮೇಲೆ ಬಣ್ಣ ಹಾಕಿದ್ದಕ್ಕೆ 4 ವರ್ಷದ ಮೊಮ್ಮಗನ ಮೇಲೆ ಕುದಿಯುವ ನೀರು ಸುರಿದ ಅಜ್ಜಿ

ಮಹಾರಾಷ್ಟ್ರದ ನಾಗ್ಪುರದಲ್ಲಿ ಹೋಳಿ ಹಬ್ಬದ ಆಚರಣೆಯ ವೇಳೆ ಮನುಷ್ಯ ಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಬಣ್ಣದಾಟವಾಡುತ್ತಿದ್ದ ಪುಟ್ಟ ಮೊಮ್ಮಗನ ಮೇಲೆ ಆತನ ಸ್ವಂತ ಅಜ್ಜಿಯೇ ಕುದಿಯುವ ನೀರನ್ನು ಸುರಿದು ಕ್ರೌರ್ಯ ಮೆರೆದಿದ್ದಾಳೆ. ಈ ದಾರುಣ ಘಟನೆಯು ನಾಗ್ಪುರ ಜಿಲ್ಲೆಯ ಕೋರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವರದಿಗಳ ಪ್ರಕಾರ ನಾಲ್ಕು ವರ್ಷದ ಓಂ ಹರೀಶ್ ವಾಂಗೆ ಮನೆಯ ಮುಂದೆ ಬಣ್ಣದ ನೀರು ತುಂಬಿದ್ದ ಸ್ಪ್ರೇ ಬಾಟಲಿಯೊಂದಿಗೆ ಆಟವಾಡುತ್ತಿದ್ದನು. ಈ ಸಂದರ್ಭದಲ್ಲಿ ಹತ್ತಿರದಲ್ಲೇ ಬಿಸಿ ನೀರನ್ನು ಬಕೆಟ್ ಗೆ ತುಂಬಿಸಿಕೊಳ್ಳುತ್ತಿದ್ದ ಅಜ್ಜಿ ಸಿಂಧು ಠಾಕ್ರೆ ಅವರ ಮೇಲೆ ಅಕಸ್ಮಾತ್ ಆಗಿ ಬಣ್ಣದ ನೀರು ಬಿದ್ದಿದೆ. ಕೇವಲ ಆಟವಾಡುತ್ತಿದ್ದ ಮಗುವಿನ ಈ ಸಣ್ಣ ತಪ್ಪಿಗೆ ಕೋಪಗೊಂಡ ಮಹಿಳೆ ಒಲೆಯ ಮೇಲಿದ್ದ ಕುದಿಯುವ ನೀರನ್ನು ನೇರವಾಗಿ ಮಗುವಿನ ಮೇಲೆ ಸುರಿದಿದ್ದಾಳೆ.

ಬಿಸಿ ನೀರಿನಿಂದಾಗಿ ಮಗುವಿನ ಸೊಂಟದ ಕೆಳಭಾಗ ತೀವ್ರವಾಗಿ ಸುಟ್ಟಿದ್ದು ನೋವಿನಿಂದ ಮಗು ಕಿರುಚಾಡಿದೆ. ತಕ್ಷಣವೇ ಮಗುವನ್ನು ನಾಗ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಮಗುವಿನ ಶೇಕಡಾ 45 ರಷ್ಟು ಭಾಗ ಸುಟ್ಟು ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಮಗುವಿನ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಅಮಾನವೀಯ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಾರ್ವಜನಿಕರು ಮಹಿಳೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದಾರೆ. ಹಬ್ಬದ ದಿನದಂದೇ ನಡೆದ ಈ ಘಟನೆ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular