HomeLatest Newsಬೆನ್ನಿನ ಕೆಳಭಾಗದ ನೋವು ಸಮಸ್ಯೆಗೆ ಪರಿಹಾರ: ಕಾರಣಗಳು, ಲಕ್ಷಣಗಳು ಮತ್ತು ಮನೆಮದ್ದುಗಳು

ಬೆನ್ನಿನ ಕೆಳಭಾಗದ ನೋವು ಸಮಸ್ಯೆಗೆ ಪರಿಹಾರ: ಕಾರಣಗಳು, ಲಕ್ಷಣಗಳು ಮತ್ತು ಮನೆಮದ್ದುಗಳು

ಸಾಮಾನ್ಯವಾಗಿ ಮುಗ್ಗರಿಸಿ ಬಾಗುವುದು, ಭಾರ ಎತ್ತುವುದು, ದೇಹವನ್ನು ಪಕ್ಕಕ್ಕೆ ತಿರುಗಿಸುವುದು, ಗಂಟೆಗಟ್ಟಲೆ ಕುಳಿತುಕೊಳ್ಳುವುದು ಅಥವಾ ತಪ್ಪಾದ ಭಂಗಿಯಲ್ಲಿ ಚಲಿಸುವುದರಿಂದ ನಡುನೋವು (ಬೆನ್ನುನೋವು) ಕಾಣಿಸಿಕೊಳ್ಳುತ್ತದೆ. ಇದು ಸ್ನಾಯುಗಳ ಸೆಳೆತದಿಂದ ಉಂಟಾಗಬಹುದು. ಆದರೆ ನೋವು ತೀವ್ರವಾಗಿದ್ದರೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ.

ನಡುನೋವಿನ ಲಕ್ಷಣಗಳು

ನಡುಭಾಗದಲ್ಲಿ (ಬೆನ್ನಿನ ಕೆಳಭಾಗ) ದಿಢೀರನೆ ತೀವ್ರವಾದ ಅಥವಾ ಎಳೆಯುವಂತಹ ನೋವು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಂದೆ ಬಾಗಲು, ನೆಟ್ಟಗೆ ನಿಲ್ಲಲು ಅಥವಾ ಪಕ್ಕಕ್ಕೆ ತಿರುಗಲು ಕಷ್ಟವಾಗುವುದು.

ಬೆಳಗಿನ ಜಾಗದಲ್ಲಿ ಅಥವಾ ದೀರ್ಘಕಾಲ ಕುಳಿತ ನಂತರ ಬೆನ್ನು ಬಿಗಿಯಾದಂತೆ (Stiffness) ಅನಿಸುವುದು.

ದೇಹವನ್ನು ಚಲಿಸಿದಾಗ ನೋವು ಹೆಚ್ಚಾಗುವುದು.

ಸಾಮಾನ್ಯ ಕಾರಣಗಳು

ಸ್ನಾಯುಗಳು ಅಥವಾ ಲಿಗಮೆಂಟ್‌ಗಳ ಸೆಳೆತ.

ತಪ್ಪಾದ ಕುಳಿತುಕೊಳ್ಳುವ ಭಂಗಿ ಮತ್ತು ಸತತವಾಗಿ ಕುಳಿತು ಕೆಲಸ ಮಾಡುವುದು.

ದಿಢೀರನೆ ಬಾಗುವುದು, ತಿರುಗುವುದು ಅಥವಾ ಭಾರ ಎತ್ತುವುದು.

ಬೆನ್ನಿನ ಮತ್ತು ಹೊಟ್ಟೆಯ ಸ್ನಾಯುಗಳು ದುರ್ಬಲವಾಗಿರುವುದು.

ದೈಹಿಕ ಚಟುವಟಿಕೆ ಅಥವಾ ವ್ಯಾಯಾಮದ ಕೊರತೆ.

ಸ್ಲಿಪ್ ಡಿಸ್ಕ್ ಅಥವಾ ಬೆನ್ನುಮೂಳೆಯ ಇತರ ಸಮಸ್ಯೆಗಳು.

ಮನೆಮದ್ದು ಮತ್ತು ಉಪಶಮನದ ಸಲಹೆಗಳು

ಸ್ವಲ್ಪ ವಿಶ್ರಾಂತಿ ಪಡೆಯಿರಿ: ನೋವಿದ್ದಾಗ ಸ್ವಲ್ಪ ಸಮಯ ವಿಶ್ರಾಂತಿ ತಗೊಳ್ಳಿ, ಆದರೆ ಸತತವಾಗಿ ಮಲಗಿಕೊಂಡೇ ಇರಬೇಡಿ.

ಬಿಸಿ ಶಾಖ : ನೋವಿರುವ ಜಾಗಕ್ಕೆ ದಿನಕ್ಕೆ ೧೫-೨೦ ನಿಮಿಷಗಳ ಕಾಲ ಬಿಸಿ ಶಾಖ ಕೊಡುವುದರಿಂದ ನೋವು ಕಡಿಮೆಯಾಗುತ್ತದೆ.

ಭಾರ ಎತ್ತಬೇಡಿ: ನೋವು ಶಮನವಾಗುವವರೆಗೆ ತೂಕದ ವಸ್ತುಗಳನ್ನು ಎತ್ತುವುದು ಮತ್ತು ದಿಢೀರ್ ತಿರುಗುವುದನ್ನು ಸಂಪೂರ್ಣವಾಗಿ ತಡೆಯಿರಿ.

ಸರಳ ವಿಸ್ತರಣೆ & ಯೋಗ: ಸೂಕ್ತ ಮಾರ್ಗದರ್ಶನದಲ್ಲಿ ಹಗುರವಾದ ಸ್ಟ್ರೆಚಿಂಗ್ ಮತ್ತು ಯೋಗ ಮಾಡುವುದರಿಂದ ಸ್ನಾಯುಗಳ ಶಕ್ತಿ ಹೆಚ್ಚುತ್ತದೆ.

ಸರಿಯಾದ ಕುಳಿತುಕೊಳ್ಳುವ ಭಂಗಿ: ಕುಳಿತುಕೊಳ್ಳುವಾಗ ಬೆನ್ನು ನೆಟ್ಟಗಿರಲಿ. ಕೆಲಸದ ನಡುವೆ ಸಣ್ಣ ವಿರಾಮ ತೆಗೆದುಕೊಂಡು ನಡೆಯಿರಿ.

ಸುಜೋಕ್ ಥೆರಪಿ

ಸುಜೋಕ್ ಥೆರಪಿಯ ಪ್ರಕಾರ, ನಮ್ಮ ಹಸ್ತದ ಹಿಂಭಾಗದ ಮಧ್ಯಭಾಗವು ಬೆನ್ನುಮೂಳೆಯನ್ನು ಪ್ರತಿನಿಧಿಸುತ್ತದೆ.

ಮಸಾಜ್ ಮಾಡುವ ವಿಧಾನ: ಹಸ್ತದ ಹಿಂಭಾಗದಲ್ಲಿ ನಡುನೋವಿಗೆ ಸಂಬಂಧಿಸಿದ ಬಿಂದುವಿನ (ಚಿತ್ರದಲ್ಲಿ ಗುರುತಿಸಲಾದ ಭಾಗ) ಮೇಲೆ ದಿನಕ್ಕೆ ಎರಡಾರಾವೃತ್ತಿ ೫ ರಿಂದ ೧೦ ನಿಮಿಷಗಳ ಕಾಲ ಹಗುರವಾಗಿ ಮಸಾಜ್ ಮಾಡಿ.

ಖರ್ಜೂರದ ಬೀಜಗಳ ಬಳಕೆ: ಮಸಾಜ್ ಮಾಡಿದ ನಂತರ ಆ ಜಾಗದಲ್ಲಿ ಖರ್ಜೂರದ ಬೀಜಗಳನ್ನು (Date Seeds) ಇಟ್ಟು ಟೇಪ್ ಹಾಕಿ 3ರಿಂದ 4ಗಂಟೆಗಳ ಕಾಲ ಬಿಡಿ.

ಯಾವುದೇ ಕಿರಿಕಿರಿ ಅನಿಸಿದರೆ ತಕ್ಷಣ ಅದನ್ನು ತೆಗೆದುಹಾಕಿ. ನೋವು ಕಡಿಮೆಯಾಗುವವರೆಗೆ ಇದನ್ನು ಪುನರಾವರ್ತಿಸಿ. ಒಂದು ವೇಳೆ ನೋವು ಹೆಚ್ಚಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular