HomeLatest Newsಮದುವೆ ಮನೆಯಲ್ಲಿ ಕುಸಿದು ಬಿದ್ದ ಅಡುಗೆ ಸಿಬ್ಬಂದಿ: ವೇದಿಕೆಯಿಂದ ಇಳಿದುಬಂದು ಪ್ರಥಮ ಚಿಕಿತ್ಸೆ ನೀಡಿದ ವಧು;...

ಮದುವೆ ಮನೆಯಲ್ಲಿ ಕುಸಿದು ಬಿದ್ದ ಅಡುಗೆ ಸಿಬ್ಬಂದಿ: ವೇದಿಕೆಯಿಂದ ಇಳಿದುಬಂದು ಪ್ರಥಮ ಚಿಕಿತ್ಸೆ ನೀಡಿದ ವಧು; ವಿಡಿಯೊ

ಕೇರಳದ ಕಣ್ಣೂರಿನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ವೈದ್ಯೆಯೊಬ್ಬರು ತಮ್ಮ ಮದುವೆಯ ಸಂಭ್ರಮದ ನಡುವೆಯೇ ಮಾನವೀಯತೆ ಮೆರೆದಿದ್ದಾರೆ. ಪನೂರ್ ಮೂಲದ ಡಾ. ಶಿರಿನ್ ಸುಬೈರ್ ಅವರು ತಮ್ಮ ವಿವಾಹ ಸಮಾರಂಭದಲ್ಲಿ ಅಸ್ವಸ್ಥರಾದ ಇಬ್ಬರು ಕ್ಯಾಟರಿಂಗ್ ಸಿಬ್ಬಂದಿಗೆ ಮದುವೆಯ ಉಡುಪಿನಲ್ಲೇ ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ಶಿರಿನ್ ಅವರು ಡಾ. ರಿಜಾಜ್ ಅವರನ್ನು ವಿವಾಹವಾಗುತ್ತಿದ್ದ ವೇಳೆ ಕ್ಯಾಟರಿಂಗ್ ತಂಡದ ಇಬ್ಬರು ಮಹಿಳೆಯರು ಅಸ್ವಸ್ಥರಾಗಿದ್ದರು. ಒಬ್ಬರಿಗೆ ಮೂಗಿನಿಂದ ರಕ್ತಸ್ರಾವವಾಗಿದ್ದರೆ, ಮತ್ತೊಬ್ಬರಿಗೆ ತಲೆಸುತ್ತು ಕಾಣಿಸಿಕೊಂಡು ಕುಸಿಯುವಂತಾಗಿತ್ತು. ಈ ಸಮಯದಲ್ಲಿ ಸ್ಥಳದಲ್ಲಿದ್ದವರು ವೈದ್ಯೆಯಾಗಿರುವ ಶಿರಿನ್ ಅವರ ನೆರವು ಕೋರಿದ್ದರು.

ತಕ್ಷಣ ಸ್ಪಂದಿಸಿದ ಶಿರಿನ್ ವೇದಿಕೆಯಿಂದ ಕೆಳಗಿಳಿದು ರಕ್ತಸ್ರಾವವಾಗುತ್ತಿದ್ದ ಮಹಿಳೆಗೆ ಮೂಗನ್ನು 10ರಿಂದ 15 ನಿಮಿಷಗಳ ಕಾಲ ಬಿಗಿಯಾಗಿ ಹಿಡಿದುಕೊಳ್ಳುವಂತೆ ಸೂಚಿಸಿದರು. ಮತ್ತೊಬ್ಬ ಮಹಿಳೆಯನ್ನು ಮಲಗಿಸಿ ಕಾಲುಗಳನ್ನು ಮೇಲಕ್ಕೆತ್ತಿ ಇರಿಸುವಂತೆ ಮಾಡಿ ಪ್ರಥಮ ಚಿಕಿತ್ಸೆ ನೀಡಿದರು. ಆಸ್ಪತ್ರೆಗೆ ಕರೆದೊಯ್ಯುವ ಮೊದಲು ನೀಡಬಹುದಾದ ಮೂಲಭೂತ ಪ್ರಥಮ ಚಿಕಿತ್ಸೆ ಇದು ಎಂದು ಶಿರಿನ್ ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಟ್ಟಪ್ಪಾಲಂನ ವಲ್ಲುವನಾಡ್ ಆಸ್ಪತ್ರೆಯಲ್ಲಿ ತುರ್ತು ವೈದ್ಯಕೀಯ ವಿಭಾಗದಲ್ಲಿ ಮೊದಲ ವರ್ಷದ MD ವ್ಯಾಸಂಗ ಮಾಡುತ್ತಿರುವ ಶಿರಿನ್ ತಾನು ಮಾಡಿದ್ದು ಅಸಾಧಾರಣ ಕೆಲಸವಲ್ಲ ಎಂದು ಹೇಳಿದರು. ತುರ್ತು ಸಂದರ್ಭದಲ್ಲಿ ಸಾಧ್ಯವಾದಷ್ಟು ಬೇಗ ಪ್ರಥಮ ಚಿಕಿತ್ಸೆ ನೀಡುವುದು ಮುಖ್ಯ ಎಂದು ಅವರು ತಿಳಿಸಿದರು.

ಮದುವೆ ಸಮಾರಂಭದಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮದುವೆಯ ಸಂಭ್ರಮದ ನಡುವೆಯೂ ಕರ್ತವ್ಯಕ್ಕೆ ಸ್ಪಂದಿಸಿದ ವೈದ್ಯೆಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular