HomeLatest NewsBIG NEWS: ನಾಡಬಾಂಬ್ ಸ್ಫೋಟಗೊಂಡು ಹಸು ಸಾವು: ಮೂವರು ಆರೋಪಿಗಳು ಅರೆಸ್ಟ್

BIG NEWS: ನಾಡಬಾಂಬ್ ಸ್ಫೋಟಗೊಂಡು ಹಸು ಸಾವು: ಮೂವರು ಆರೋಪಿಗಳು ಅರೆಸ್ಟ್

ರಾಮನಗರ: ಕಾಡುಹಂದಿ ಬೇಟೆಗಾಗಿ ಇಟ್ಟಿದ್ದ ನಾಡಬಾಂಬ್ ಸ್ಫೋತಗೊಂಡು ಹಸುವಿನ ಬಾಯಿ ಛಿದ್ರಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ಕೃಷ್ಣಮೂರ್ತಿ, ಶಿವಕುಮಾರ್, ಶಿವನಪ್ಪ ಬಂಧಿತ ಆರೋಪಿಗಳು.ಈ ಮೂವರು ಕಾಡುಹಂದಿ ಬೇಟೆಗಾಗಿ ನಾಡಬಾಂಬ್ ಇಟ್ಟಿದ್ದರು. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಆಲನಾಥ ಗ್ರಾಮದ ಬಳಿ ಜನವರಿ ೩ರಂದು ರೈತ ಶಿವನಗೌಡ ಎಂಬುವವರು ತಮ್ಮ ಹಸುವನ್ನು ಮೇಯಿಸಲು ಬಿಟ್ಟಿದ್ದಾಗ ನಾಡಬಾಂಬ್ ಸ್ಫೊಟಗೊಂಡು ಹಸುವಿನ ಬಾಯಿ ಛಿದ್ರಗೊಂಡಿತ್ತು. ಕಿಡಿಗೇಡಿಗಳ ಕೃತ್ಯಕ್ಕೆ ಹಸು ಎರಡು ದಿನಗಳ ಕಾಲ ಜೀವನ್ಮರಣದ ನಡುವೆ ಹೋರಾಡಿ ಮೃತಪಟ್ಟಿತ್ತು.

ಈ ಬಗ್ಗೆ ರೈತ ಶಿವನಗೌಡ ಕೋಡಿಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular