HomeLatest Newsಪುದುಚೇರಿ ಮುಖ್ಯಮಂತ್ರಿಗಳಿಂದ ಗೌರವ ಪಡೆದ ಕರ್ನಾಟಕದ ‘ಬಂಗಾರದ ಜಿಂಕೆ’ ಅಕ್ಷರ A.N.

ಪುದುಚೇರಿ ಮುಖ್ಯಮಂತ್ರಿಗಳಿಂದ ಗೌರವ ಪಡೆದ ಕರ್ನಾಟಕದ ‘ಬಂಗಾರದ ಜಿಂಕೆ’ ಅಕ್ಷರ A.N.

ಪುದುಚೇರಿ: ಪುದುಚೇರಿ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ‘ಅಂತರಾಷ್ಟ್ರೀಯ ಯೋಗ ಉತ್ಸವ-2026’ ರಲ್ಲಿ ಕರ್ನಾಟಕದ ಪ್ರತಿಭೆ ಕುಮಾರಿ ಅಕ್ಷತಾ ಎ.ಎನ್. ಅವರು ಚಿನ್ನದ ಪದಕ ಗೆಲ್ಲುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ಜನವರಿ 4 ರಿಂದ 7 ರವರೆಗೆ ನಡೆದ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ, 14 ವರ್ಷದ ಬಾಲಕಿಯರ ಕಿರಿಯ ವಿಭಾಗದಲ್ಲಿ ಅಕ್ಷತಾ ಪಾಲ್ಗೊಂಡಿದ್ದರು. ಜಗತ್ತಿನ ವಿವಿಧೆಡೆಯಿಂದ ಬಂದಿದ್ದ ಸ್ಪರ್ಧಿಗಳ ನಡುವೆ ಅಪ್ರತಿಮ ಯೋಗ ಕೌಶಲ್ಯ ಪ್ರದರ್ಶಿಸಿದ ಇವರು ಪ್ರಥಮ ಸ್ಥಾನ ಗಳಿಸಿ, ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

14 ವರ್ಷದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಅಕ್ಷರ ಅವರನ್ನು ಪತ್ರಿಕೋದ್ಯಮ ವಲಯದಲ್ಲಿ ಕರ್ನಾಟಕದ ಬಂಗಾರದ ಜಿಂಕೆ ಎಂದೇ ಬಣ್ಣಿಸಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪುದುಚೇರಿಯ ಮುಖ್ಯಮಂತ್ರಿಗಳಾದ ಎನ್. ರಂಗಸ್ವಾಮಿ ಹಾಗೂ ಪ್ರವಾಸೋದ್ಯಮ ಸಚಿವರಾದ ಕೆ. ಲಕ್ಷ್ಮೀನಾರಾಯಣನ್ ಅವರು ವಿಜೇತರಿಗೆ ಬಹುಮಾನ ವಿತರಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಅಕ್ಷತಾ ಅವರ ಸಾಧನೆಯನ್ನು ಗಣ್ಯರು ಮುಕ್ತಕಂಠದಿಂದ ಶ್ಲಾಘಿಸಿದರು.

ಸಾಧಕಿಯ ಹಿನ್ನೆಲೆ:

ಕುಮಾರಿ ಅಕ್ಷತಾ ಅವರು ಎ.ಟಿ. ನಾಗರಾಜ್ ಹಾಗೂ ವೀಣಾ ದಂಪತಿಗಳ ಪುತ್ರಿ. ಇವರು ‘ಅಷ್ಟಾಂಗ ವಿನ್ಯಾಸ ಅಂತರರಾಷ್ಟ್ರೀಯ ಯೋಗ ಅಕಾಡೆಮಿ’ಯ ವಿದ್ಯಾರ್ಥಿನಿಯಾಗಿದ್ದು, ಯೋಗಾಚಾರ್ಯ ವೈದ್ಯ ತೀರ್ಥರಾಜ್ ಹೋಲೂರ್ (ಅಧ್ಯಕ್ಷರು, ದಾವಣಗೆರೆ ಜಿಲ್ಲಾ ಗ್ಲೋಬಲ್ ಯೋಗ) ಹಾಗೂ ಯೋಗ ಶಿಕ್ಷಕಿ ಸುಮಾ ತೀರ್ಥರಾಜ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಅಕ್ಷತಾ ಅವರ ಈ ಐತಿಹಾಸಿಕ ಸಾಧನೆಗೆ ಅವರ ತರಬೇತುದಾರರಾದ ಅರುಣ್ ಎ. ಅಗಸನಗಟ್ಟೆ, ನಾಗೇಶ್ ಎಸ್.ಎನ್., ವೀರೇಂದ್ರಕಾರ್ ಜೆ. ಹಾಗೂ ಯೋಗ ಪರಿವಾರದ ಎಲ್ಲಾ ಸದಸ್ಯರು ಮತ್ತು ಅವಿಯಾ ಸಂಸ್ಥೆಯು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದೆ. ಮಗಳ ಸಾಧನೆಯಿಂದ ದಾವಣಗೆರೆ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯಕ್ಕೆ ಹೆಮ್ಮೆ ತಂದಿದೆ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular