HomeIndiaJOB ALERT : 'SSLC' ಪಾಸಾದವರಿಗೆ 'NABARD' ನಲ್ಲಿ ಉದ್ಯೋಗವಕಾಶ, ತಿಂಗಳಿಗೆ 35,000 ಸಂಬಳ

JOB ALERT : ‘SSLC’ ಪಾಸಾದವರಿಗೆ ‘NABARD’ ನಲ್ಲಿ ಉದ್ಯೋಗವಕಾಶ, ತಿಂಗಳಿಗೆ 35,000 ಸಂಬಳ

ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್ಮೆಂಟ್ (ನಬಾರ್ಡ್) ಮತ್ತೊಂದು ಉದ್ಯೋಗ ಪ್ರಕಟಣೆ ಹೊರಡಿಸಿದೆ. ಒಟ್ಟು 108 ಆಫೀಸ್ ಅಟೆಂಡೆಂಟ್ (ಗ್ರೂಪ್ ಸಿ) ಹುದ್ದೆಗಳನ್ನು ಈ ಅಧಿಸೂಚನೆಯ ಮೂಲಕ ಭರ್ತಿ ಮಾಡಲಾಗುತ್ತದೆ.

ನಬಾರ್ಡ್ ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅಕ್ಟೋಬರ್ 2ರಿಂದ ಆರಂಭವಾಗಲಿದೆ. ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 21 ಕೊನೆಯ ದಿನವಾಗಿದೆ.
ನಬಾರ್ಡ್ ನಿಂದ ಭರ್ತಿಯಾಗಲಿರುವ ಈ ಹುದ್ದೆಗಳಿಗೆ 10 ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ತಿಂಗಳಿಗೆ 35,000 ರೂ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 30 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಈ ಅಧಿಸೂಚನೆಯ ಸಂಪೂರ್ಣ ವಿವರಗಳಿಗಾಗಿ, ನೀವು https://www.nabard.org/ ವೆಬ್ಸೈಟ್ ಅನ್ನು ಪರಿಶೀಲಿಸಬಹುದು.
ವಿವರಗಳನ್ನು ನೋಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬ್ಯಾಂಕ್ ಹೆಸರು: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್)
ಹುದ್ದೆ ಹೆಸರು: ಆಫೀಸ್ ಅಟೆಂಡೆಂಟ್ (ಗ್ರೂಪ್ ಸಿ)

ಸಂಖ್ಯೆ: 108
ಉದ್ಯೋಗ ಸ್ಥಳ: ಮುಂಬೈ

ವೇತನ: ತಿಂಗಳಿಗೆ 10,000 ರೂ. 35,000

ಅರ್ಜಿ ಸಲ್ಲಿಸುವುದು ಹೇಗೆ?

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: ಅಕ್ಟೋಬರ್ 2, 2024

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಅಕ್ಟೋಬರ್ 21, 2024

ಅರ್ಜಿ ಪ್ರಕ್ರಿಯೆ ಈ ಕೆಳಗಿನಂತಿದೆ

– ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಅದಕ್ಕಾಗಿ ನೇರವಾಗಿ ಲಿಂಕ್ https://www.nabard.org/ ಕ್ಲಿಕ್ ಮಾಡಿ.
– ಅಧಿಕೃತ ಅಧಿಸೂಚನೆಯನ್ನು ಇಲ್ಲಿ ಡೌನ್ಲೋಡ್ ಮಾಡಿ. ಅದರಲ್ಲಿ ಉಲ್ಲೇಖಿಸಲಾದ ವಿವರಗಳನ್ನು ಪೂರ್ಣವಾಗಿ ಓದಿ. ನಂತರ ಅಧಿಸೂಚನೆಯಲ್ಲಿ ಉಲ್ಲೇಖಿಸಲಾದ ಸೂಚನೆಗಳ ಪ್ರಕಾರ ಸರಿಯಾದ ವಿವರಗಳೊಂದಿಗೆ ನಿಮ್ಮ ಅರ್ಜಿಯನ್ನು ಸಲ್ಲಿಸಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular