HomeCrimeBREAKING: ದಾರಿ ತಪ್ಪಿದ ಪತ್ನಿ: ಮರ್ಯಾದೆಗೆ ಅಂಜಿ ಬರ್ಬರವಾಗಿ ಹತ್ಯೆಗೈದು ಠಾಣೆಗೆ ಶರಣಾದ ಪತಿ

BREAKING: ದಾರಿ ತಪ್ಪಿದ ಪತ್ನಿ: ಮರ್ಯಾದೆಗೆ ಅಂಜಿ ಬರ್ಬರವಾಗಿ ಹತ್ಯೆಗೈದು ಠಾಣೆಗೆ ಶರಣಾದ ಪತಿ

ಮೈಸೂರು: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ಬರ್ಬರವಾಗಿ ಹತ್ಯೆ ಮಾಡಿದ್ದ ಕಣಿಯನಹುಂಡಿ ಗ್ರಾಮದಲ್ಲಿ ನಡೆದಿದೆ.

ದೇವರಾಜು ಎಂಬಾತ ಪತ್ನಿ ತೇಜು(26) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದಲ್ಲಿ ಘಟನೆ ನಡೆದಿದೆ. 7 ವರ್ಷಗಳ ಹಿಂದೆ ಸಂಬಂಧಿ ತೇಜು ಅವರನ್ನು ದೇವರಾಜು ಮದುವೆಯಾಗಿದ್ದ. ತೇಜು -ದೇವರಾಜು ದಾಂಪತ್ಯಕ್ಕೆ ಸಾಕ್ಷಿಯಾಗಿ ಇಬ್ಬರು ಮಕ್ಕಳಿದ್ದಾರೆ.

ಮೈಸೂರು ತಾಲೂಕಿನ ಗೋಪಾಲಪುರದ ನಿವಾಸಿಯಾಗಿರುವ ತೇಜು, ಪತಿ ಮತ್ತು ಮಕ್ಕಳನ್ನು ಬಿಟ್ಟು ಪರಪುರುಷನೊಂದಿಗೆ ಓಡಿಹೋಗಿದ್ದಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾರದ ಹಿಂದೆ ಆಕೆಯನ್ನು ಕರೆತಂದು ಹಿರಿಯರು ನ್ಯಾಯ ಪಂಚಾಯಿತಿ ಮಾಡಿದ್ದರು. ನಂತರ ದೇವರಾಜು ಆಕೆಯನ್ನು ಮನೆಗೆ ಸೇರಿಸಿಕೊಂಡಿದ್ದ. ಮಧ್ಯಾಹ್ನ ಗಲಾಟೆ ನಡೆದು ಮಚ್ಚಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಪತ್ನಿ ವರ್ತನೆಯಿಂದ ಬೇಸತ್ತು ಮರ್ಯಾದೆಗೆ ಅಂಜಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಪತ್ನಿ ತೇಜು ಹತ್ಯೆಗೈದ ಆರೋಪಿ ದೇವರಾಜು ಠಾಣೆಗೆ ಶರಣಾಗಿದ್ದಾನೆ. ಕೇಸು ದಾಖಲಿಸಿಕೊಂಡು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಹೆಚ್.ಡಿ. ಕೋಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular