HomeLive Newsಇಂದು ಮಹಾರಾಜ ಟ್ರೋಫಿಯ 10ನೇ ಪಂದ್ಯದಲ್ಲಿ ಮೈಸೂರ್ ವಾರಿಯರ್ಸ್ ಮತ್ತು ಮಂಗಳೂರು ಡ್ರ್ಯಾಗನ್ಸ್ ಮುಖಾಮುಖಿ

ಇಂದು ಮಹಾರಾಜ ಟ್ರೋಫಿಯ 10ನೇ ಪಂದ್ಯದಲ್ಲಿ ಮೈಸೂರ್ ವಾರಿಯರ್ಸ್ ಮತ್ತು ಮಂಗಳೂರು ಡ್ರ್ಯಾಗನ್ಸ್ ಮುಖಾಮುಖಿ

ಇಂದು ಮಹಾರಾಜ ಟ್ರೋಪಿಯ 9ನೇ ಪಂದ್ಯದಲ್ಲಿ ಟೇಬಲ್ ಟಾಪರ್ಸ್ ಗಳಾದ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ಈಗಾಗಲೇ ಮುಖಾಮುಖಿಯಾಗಿದ್ದು, ಮತ್ತೊಂದು ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಹಾಗೂ ಮಂಗಳೂರು ಡ್ರ್ಯಾಗನ್ಸ್ ಕಾದಾಡಲಿವೆ.

ನಿನ್ನೆಯ ಪಂದ್ಯದಲ್ಲಿ ಮೈಸೂರ್ ತಂಡ 196 ರನ್ ಗಳ ಬೃಹತ್ ಮೊತ್ತ ದಾಖಲಿಸಿದ್ದರು, ಗುಲ್ಬರ್ಗ  ಮೈಸ್ಟಿಕ್ಸ್ ಎದುರು ಸೋಲು ಕಂಡಿದೆ. ಮೈಸೂರು ವಾರಿಯರ್ಸ್ ತಂಡದಲ್ಲಿರುವ ರಾಹುಲ್ ದ್ರಾವಿಡ್ ಪುತ್ರ ಸಮಿತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಭರವಸೆ ಮೂಡಿಸಿದ್ದಾರೆ. ಮತ್ತೊಂದೆಡೆ ಮಂಗಳೂರು ಡ್ರ್ಯಾಗನ್ಸ್ ನ ರೋಹನ್ ಪಾಟೀಲ್ ಕೂಡ ಭರ್ಜರಿ ಫಾರ್ಮಲ್ಲಿದ್ದಾರೆ. ಒಟ್ಟಾರೆ ಎರಡು ತಂಡಗಳು ಒಂದೊಂದು ಜಯ ಕಂಡಿದ್ದು, ಜಿದ್ದಾಜಿದ್ದಿ ಹೋರಾಟಕ್ಕೆ ಸಜ್ಜಾಗಿವೆ.

For Latest News Updates, Join Our Whatsapp Community🚩
RELATED ARTICLES

Most Popular