HomeKarnataka'ಕಾಂಗ್ರೆಸ್' ಅಭ್ಯರ್ಥಿಯ ಗೆಲುವಿಗೆ ಬಿಜೆಪಿ ಕಟ್ಟಾ ಕಾರ್ಯಕರ್ತನಿಂದ 'ಹರಕೆ' ; ಅಭಿಮಾನಿಯ ಹರಕೆ ತೀರಿಸಿದ ಶಾಸಕ...

‘ಕಾಂಗ್ರೆಸ್’ ಅಭ್ಯರ್ಥಿಯ ಗೆಲುವಿಗೆ ಬಿಜೆಪಿ ಕಟ್ಟಾ ಕಾರ್ಯಕರ್ತನಿಂದ ‘ಹರಕೆ’ ; ಅಭಿಮಾನಿಯ ಹರಕೆ ತೀರಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ…!

ಶಿವಮೊಗ್ಗ: ಕಟ್ಟಾ ಬಿಜೆಪಿ ಕಾರ್ಯಕರ್ತರೊಬ್ಬರು ಕಾಂಗ್ರೆಸ್ ಶಾಸಕರೊಬ್ಬರ ಗೆಲುವಿಗಾಗಿ ದೇವರಿಗೆ ಹರಕೆ ಹೊತ್ತು, ಇಂದು ಹರಕೆ ತೀರಿಸಿರುವ ವಿಚಿತ್ರ ಪ್ರಸಂಗ ಬೆಳಕಿಗೆ ಬಂದಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಅವರ ಗೆಲುವಿಗಾಗಿ ಬಿಜೆಪಿ ಕಾರ್ಯಕರ್ತ ಹರೀಶ್ ಪ್ರಭು ಎಂಬುವವರು ನಗರದ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸಿದ್ಧಿವಿನಾಯಕನಿಗೆ ಬೆಣ್ಣೆ ಅಲಂಕಾರ ಸೇವೆ ಹರಕೆ ಹೊತ್ತಿದ್ದರು. ಅಭಿಮಾನಿಯ ಆಸೆಯಂತೆ ಚುನಾವಣೆಯಲ್ಲಿ ಬೇಳೂರು ಗೋಪಾಲಕೃಷ್ಣ ಅವರು ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಇಂದು ಅಭಿಮಾನಿ ಹರೀಶ್ ಪ್ರಭು ಜೊತೆ ದೇವಸ್ಥಾನಕ್ಕೆ ಆಗಮಿಸಿ ಹರಕೆ ತೀರಿಸಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹರೀಶ್ ಪ್ರಭು, ನಾನು ಕಳೆದ 30 ವರ್ಷಗಳಿಂದ ಸಂಘ, ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದೇನೆ. ನಾನು ಈಗಲೂ ಬಿಜೆಪಿ ಕಟ್ಟಾ ಕಾರ್ಯಕರ್ತ. ನನ್ನ ರಕ್ತದ ಕಣ ಕಣದಲ್ಲಿಯೂ ಬಿಜೆಪಿ ತತ್ವ ಸಿದ್ಧಾಂತಗಳೇ ಇದೆ. ಆದರೆ ಬೇಳೂರು ಗೋಪಾಲಕೃಷ್ಣ ಅವರ ಮಾನವೀಯ ಮೌಲ್ಯಗಳು, ಉಪಕಾರದ ಮನೋಭಾವ ನನ್ನನ್ನು ಪಕ್ಷದ ಚೌಕಟ್ಟನ್ನು ಮೀರಿ ಅವರ ಪರವಾಗಿ ನಿಲ್ಲುವಂತೆ ಮಾಡಿದೆ. ಹಿಂದಿನ ಚುನಾವಣೆಯಲ್ಲಿ ಗೋಪಾಲಕೃಷ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪುವಂತೆ ಕಾಣದ ಕೈಗಳು ಷಡ್ಯಂತ್ರ ಮಾಡಿದ್ದವು. ಹಾಗಾಗಿ ಹರಕೆ ಹೊತ್ತಿದ್ದೆ. ಈಗ ನನ್ನ ಅಭಿಲಾಷೆಯಂತೆ ಈ ಬಾರಿ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ಸಿಕ್ಕಿ ಪ್ರಚಂಡ ಬಹುಮತದಿಂದ ಗೆದ್ದಿದ್ದಾರೆ. ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ನನ್ನ ಹರಕೆ ಫಲಿಸಿದೆ. ಹಾಗಾಗಿ ಇಂದು ಶಾಸಕರ ಸಮ್ಮುಖದಲ್ಲಿಯೇ ಹರಕೆ ತೀರಿಸಿದ್ದೇನೆ. ಮುಂದಿನ ದಿನಗಳಲ್ಲಿ ಅವರು ಮಂತ್ರಿಯಾಗಲಿ ಎಂದು ಹಾರೈಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular