HomeLatest NewsBREAKING: ಮೈಸೂರಿನ ಅರಮನೆ ಬಳಿ ಹೀಲಿಯಂ ಸ್ಫೋಟ ಪ್ರಕರಣ: ತಂಗಿ ಸಾವಿನ ಸುದ್ದಿ ಕೇಳಿ ಅಣ್ಣನೂ...

BREAKING: ಮೈಸೂರಿನ ಅರಮನೆ ಬಳಿ ಹೀಲಿಯಂ ಸ್ಫೋಟ ಪ್ರಕರಣ: ತಂಗಿ ಸಾವಿನ ಸುದ್ದಿ ಕೇಳಿ ಅಣ್ಣನೂ ಸಾವು

ಮೈಸೂರು: ಮೈಸೂರಿನ ಅರಮನೆ ಬಳಿ ಹೀಲಿಯಂ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಮಂಜುಳಾ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ತಂಗಿಯ ಸಾವಿನ ಸುದ್ದಿ ಕೇಳಿ ಮಂಜುಳಾ ಸಹೋದರ ಕೂಡ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಹೀಲಿಯಂ ಸ್ಫೋಟದಲ್ಲಿ ತನ್ನ ಸಹೋದರಿ ಮಂಜುಳಾ ಸಾವನ್ನಪ್ಪಿರುವ ಸುದ್ದಿ ಕೇಳಿ ಅನಾರೋಗ್ಯಕ್ಕೀಡಾಗಿದ್ದ ಅಣ್ಣ ಪರಮೇಶ್ (60) ದುಃಖ ತಾಳಲಾರದೇ ಕೊನೆಯುಸಿರೆಳೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂಜನಗೂಡು ತಾಲೂಕಿನ ಚಾಮಲಾಪುರ ನಿವಾಸಿಯಾಗಿರುವ ಪರಮೇಶ್, ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರು ಕೂಡ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮೈಸೂರು ಅರಮನೆ ಬಳಿ ಬಲೂನು ಮಾರುತ್ತಿದ್ದ ವ್ಯಕ್ತಿಯ ಬಳಿ ಇದ್ದ ಹೀಲಿಯಂಸ್ಫೋಟಗೊಂಡು ಬಲೂನು ಮಾರಾಟಗಾರ ಸಲೀಂ ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಅವರಲ್ಲಿ ಚಿಕಿತ್ಸೆ ಫಲಿಸದೇ ಇಬ್ಬರು ಸಾವನ್ನಪ್ಪಿದ್ದಾರೆ. ಹೀಲಿಯಂ ಸ್ಫೋಟದ ಬಗ್ಗೆ ತನಿಖೆ ಚುರುಕುಗೊಂಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular