ಬೆಂಗಳೂರು: ಜೀವನವಿಡೀ ಕಷ್ಟಪಟ್ಟು ದುಡಿದ ಹಣ ನಿವೃತ್ತಿಯ ನಂತರ ನಮ್ಮನ್ನು ರಾಜನಂತೆ ಸಾಕಿ ಸಲಹಬೇಕು ಅನ್ನೋದು ಎಲ್ಲರ ಆಸೆ. ಸಾಮಾನ್ಯವಾಗಿ ನಾವೆಲ್ಲಾ ನಿವೃತ್ತಿ ನಂತರ ದೊಡ್ಡ ಮೊತ್ತದ ಹಣವನ್ನು ಎಫ್‌ಡಿ (FD) ಮಾಡಿ ಇಡ್ತೀವಿ. ಆದ್ರೆ, ಮ್ಯೂಚುವಲ್ ಫಂಡ್ ಲೋಕದಲ್ಲಿ ಇದಕ್ಕಿಂತಲೂ ಸ್ಮಾರ್ಟ್ ಆದ ಒಂದು ದಾರಿಯಿದೆ, ಅದೇ ಸಿಸ್ಟಮ್ಯಾಟಿಕ್ ವಿತ್‌ಡ್ರಾವಲ್ ಪ್ಲಾನ್ (SWP).ಸರಳವಾಗಿ ಹೇಳಬೇಕೆಂದರೆ, ನಿಮ್ಮ ಹೂಡಿಕೆಯೇ ನಿಮಗೆ ಪ್ರತಿ ತಿಂಗಳು ಸಂಬಳ ನೀಡುವ ಅದ್ಭುತ ವ್ಯವಸ್ಥೆ ಇದು
ಏನಿದು SWP? ಬಾಡಿಗೆ ಬಂದಂತೆ ಹಣ ಬರುತ್ತೆ
ನೀವು ಒಂದು ಮನೆಯನ್ನು ಬಾಡಿಗೆಗೆ ಕೊಟ್ಟರೆ ಪ್ರತಿ ತಿಂಗಳು ಹೇಗೆ ಬಾಡಿಗೆ ಬರುತ್ತದೆಯೋ, ಹಾಗೆಯೇ ಮ್ಯೂಚುವಲ್ ಫಂಡ್‌ನಲ್ಲಿ ನೀವು ಹೂಡಿಕೆ ಮಾಡಿದ ದೊಡ್ಡ ಮೊತ್ತದಿಂದ ಪ್ರತಿ ತಿಂಗಳು ನಿಗದಿತ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಬರುವಂತೆ ಮಾಡುವುದೇ ಈ SWP. ನಿಮ್ಮ ಬಂಡವಾಳ ಅಲ್ಲೇ ಇರುತ್ತೆ, ಆದ್ರೆ ಅದರಿಂದ ಬರುವ ಲಾಭ ನಿಮ್ಮ ಜೇಬು ಸೇರುತ್ತೆ
ಇದು ಕೆಲಸ ಮಾಡೋದು ಹೇಗೆ?
ಒಮ್ಮೆಯ ಹೂಡಿಕೆ: ಮೊದಲು ಒಂದು ಮ್ಯೂಚುವಲ್ ಫಂಡ್ ಸ್ಕೀಮ್‌ನಲ್ಲಿ ದೊಡ್ಡ ಮೊತ್ತವನ್ನು (Lump sum) ಹೂಡಿಕೆ ಮಾಡಿ.
ನನಗಿಷ್ಟು ಹಣ ಬೇಕು ಅಂತ ಸೂಚಿಸಿ: ಹೂಡಿಕೆ ಮಾಡಿದ ನಂತರ, ನನಗೆ ಪ್ರತಿ ತಿಂಗಳು ಇಂತಿಷ್ಟು ತಾರೀಖಿಗೆ ಇಷ್ಟು ಮೊತ್ತದ ಹಣ ಬೇಕು ಎಂದು ಫಂಡ್ ಹೌಸ್‌ಗೆ ಕಮಾಂಡ್ ನೀಡಿ.
ಆಟೋಮ್ಯಾಟಿಕ್ ಪೇಮೆಂಟ್: ನೀವು ನಿಗದಿಪಡಿಸಿದ ದಿನಾಂಕದಂದು ಅಂದಿನ ಮಾರುಕಟ್ಟೆ ಮೌಲ್ಯಕ್ಕೆ (NAV) ತಕ್ಕಂತೆ ಕೆಲವು ಯುನಿಟ್‌ಗಳನ್ನು ಕಂಪನಿ ಮಾರಾಟ ಮಾಡುತ್ತೆ ಮತ್ತು ಆ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತೆ.
ಉಳಿದ ಹಣ ಅಲ್ಲೇ ಬೆಳೆಯುತ್ತೆ: ನೀವು ವಿತ್‌ಡ್ರಾ ಮಾಡಿದ ಹಣವನ್ನು ಹೊರತುಪಡಿಸಿ, ಉಳಿದ ಹಣ ಮಾರುಕಟ್ಟೆಯಲ್ಲೇ ಇರೋದ್ರಿಂದ ಅದರ ಮೇಲೆ ಇಂಟರೆಸ್ಟ್ ಬರುತ್ತಲೇ ಇರುತ್ತೆ.
SWP ಯಾಕೆ ಬೆಸ್ಟ್? :
ಫುಲ್ ಫ್ಲೆಕ್ಸಿಬಿಲಿಟಿ: ನಿಮಗೆ ತಿಂಗಳಿಗೊಮ್ಮೆ ಹಣ ಬೇಕಾ? ಅಥವಾ ಮೂರು ತಿಂಗಳಿಗೊಮ್ಮೆ ಬೇಕಾ? ನೀವೇ ನಿರ್ಧರಿಸಬಹುದು. ಅಷ್ಟೇ ಅಲ್ಲ, ಯಾವಾಗ ಬೇಕಾದರೂ ಪ್ಲಾನ್ ನಿಲ್ಲಿಸಬಹುದು.
ಟ್ಯಾಕ್ಸ್ ಉಳಿತಾಯ: ಎಫ್‌ಡಿಯ ಇಂಟರೆಸ್ಟ್‌ಗೆ ಹೋಲಿಸಿದರೆ SWP ಮೇಲೆ ಬೀಳುವ ತೆರಿಗೆಯ ಹೊರೆ ಕಡಿಮೆ. ಇದು ಹೂಡಿಕೆದಾರರಿಗೆ ಆರ್ಥಿಕವಾಗಿ ಹೆಚ್ಚು ಲಾಭ ತಂದುಕೊಡುತ್ತೆ.
ಹಣದ ಮೇಲೆ ಮಾರುಕಟ್ಟೆ ಲಾಭ: ನೀವು ಹಣ ಹಿಂಪಡೆಯುತ್ತಿದ್ದರೂ, ಉಳಿದ ಹಣ ಮಾರುಕಟ್ಟೆಯ ಏರಿಕೆಯ ಲಾಭವನ್ನು ಪಡೆಯುತ್ತಲೇ ಇರುತ್ತದೆ.
ಇದು ಯಾರಿಗೆ ಹೆಚ್ಚು ಉಪಯುಕ್ತ?
ನಿವೃತ್ತ ನೌಕರರು: ಆಫೀಸ್ ಸ್ಯಾಲರಿ ನಿಂತ ಮೇಲೂ ಪ್ರತಿ ತಿಂಗಳು ಕೈತುಂಬಾ ಹಣ ಬೇಕಾದವರಿಗೆ ಇದು ವರ.
ಫ್ರೀಲ್ಯಾನ್ಸರ್ಸ್ ಮತ್ತು ಉದ್ಯಮಿಗಳು: ಫಿಕ್ಸ್ಡ್ ಸ್ಯಾಲರಿ ಇಲ್ಲದವರು ಈ ಪ್ಲಾನ್ ಮೂಲಕ ತಮಗೆ ಬೇಕಾದಾಗ ಹಣ ಪಡೆಯಬಹುದು.
ಪೋಷಕರು: ಮಕ್ಕಳ ಸ್ಕೂಲ್ ಫೀಸ್ ಅಥವಾ ಕಾಲೇಜು ಫೀಸ್ ಕಟ್ಟಲು ಬೇಕಾದ ಪ್ಲಾನಿಂಗ್‌ಗೆ ಇದು ಬೆಸ್ಟ್.
ಕಡಿಮೆ ರಿಸ್ಕ್ ಬಯಸುವವರು: ಡೆಬ್ಟ್ ಫಂಡ್ (Debt Fund) ಮೂಲಕ SWP ಮಾಡಿದರೆ ನಿಮ್ಮ ಹಣ ಸುರಕ್ಷಿತವಾಗಿರುತ್ತೆ.

