HomeKarnatakaBIG NEWS: ತಾಕತ್ತಿದ್ದರೆ ಒಂದು ಕಾರ್ಖಾನೆ, ಸಂಸ್ಥೆ ಕಟ್ಟು: ಸಚಿವ ಎಂ.ಬಿ. ಪಾಟೀಲ್ ಗೆ ಏಕವಚನದಲ್ಲೇ...

BIG NEWS: ತಾಕತ್ತಿದ್ದರೆ ಒಂದು ಕಾರ್ಖಾನೆ, ಸಂಸ್ಥೆ ಕಟ್ಟು: ಸಚಿವ ಎಂ.ಬಿ. ಪಾಟೀಲ್ ಗೆ ಏಕವಚನದಲ್ಲೇ ಹರಿಹಾಯ್ದು, ಸವಾಲು ಹಾಕಿದ ಮುರುಗೇಶ್ ನಿರಾಣಿ ಸವಾಲು

ಬೆಂಗಳೂರು: ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟಿಲ್ ವಿರುದ್ಧ ಮಾಜಿ ಸಚಿವ ಮುರುಗೇಶ್ ನಿರಾಣಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದು, ನೀನು ಒಂದೇ ಒಂದು ಭ್ರಷ್ಟಾಚಾರ ನಡೆಸಿಲ್ಲ ಎನ್ನುವುದಾದರೆ ಪ್ರಮಾಣ ಮಾಡು ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುರುಗೇಶ್ ನಿರಾಣಿ, ನೀನು ಭ್ರಷ್ಟಾಚಾರ ಮಾಡಿಲ್ಲ ಎನ್ನುವುದಾದರೆ ತಾಯಿ ಮೇಲೆ ಪ್ರಮಾಣ ಮಾಡು ಎಂದು ಸವಾಲು ಹಾಕಿದ್ದಾರೆ.

ನಮ್ಮನ್ನು ದನಕಾಯೋರು ಅಂತೀರಿ, ಹೌದು ನಾನು ದನ ಕಾಯೋನೇ. ಅದಕ್ಕೆ ಹಲವು ಕಾರ್ಖಾನೆ, ಸಂಸ್ಥೆಗಳನ್ನು ಕಟ್ಟಿ ನೂರಾರು ಜನರಿಗೆ ಉದ್ಯೋಗ ಕೊಟ್ಟಿದ್ದೇನೆ. ನೀನು ಯಾರೋ ಕಟ್ಟಿದ ಬಿಎಲ್ ಡಿ ಸಂಸ್ಥೆ ಹುತ್ತದಲ್ಲಿ ಹಾವಾಗಿದ್ದೀಯಾ. ಹಾವಾಗಿ ಬಂದು ಕೂತು ಅಧ್ಯಕ್ಷನಾಗಿ ಮಜಾ ಮಾಡುತ್ತಿದ್ದೀಯಾ. ನಿನಗೆ ತಾಕತ್ತಿದ್ದರೆ ಇಒಂದು ಕಾರ್ಖಾನೆ, ಸಂಸ್ಥೆ ಕಟ್ಟಿ ತೋರಿಸು. ಆಗ ನಿನ್ನ ಯೋಗ್ಯತೆ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular