HomeCrimeಬೆಂಗಳೂರಲ್ಲಿ ಬೆಚ್ಚಿಬೀಳಿಸುವ ಘಟನೆ: ಮಗಳಿಗೆ ಕಿರುಕುಳ ಕೊಡಬೇಡ ಎಂದಿದ್ದಕ್ಕೆ ತಂದೆಯ ಹತ್ಯೆ

ಬೆಂಗಳೂರಲ್ಲಿ ಬೆಚ್ಚಿಬೀಳಿಸುವ ಘಟನೆ: ಮಗಳಿಗೆ ಕಿರುಕುಳ ಕೊಡಬೇಡ ಎಂದಿದ್ದಕ್ಕೆ ತಂದೆಯ ಹತ್ಯೆ

ಬೆಂಗಳೂರು: ಮಗಳಿಗೆ ಕಿರುಕುಳ ಕೊಡಬೇಡ ಎಂದಿದ್ದಕ್ಕೆ ಬಾಲಕಿ ತಂದೆಯನ್ನು ಹತ್ಯೆ ಮಾಡಲಾಗಿದೆ. ಚಾಕುವಿನಿಂದ ಇರಿದು ಅನ್ವರ್ ಹುಸೇನ್ ಎಂಬುವರನ್ನು ಝಹೀದ್ ಹತ್ಯೆ ಮಾಡಿದ್ದಾನೆ.

ಅಪ್ರಾಪ್ತೆಗೆ ಪ್ರೀತಿಸುವಂತೆ ಝಹೀದ್ ಕಿರುಕುಳ ನೀಡುತ್ತಿದ್ದ. ಈ ವಿಚಾರವನ್ನು ಬಾಲಕಿ ತನ್ನ ತಂದೆ ಅನ್ವರ್ ಹುಸೇನ್ ಗೆ ತಿಳಿಸಿದ್ದಳು. ಅವರು ಕಳೆದ ಮೂರು ತಿಂಗಳ ಹಿಂದೆ ಝಹೀದ್ ಗೆ ಬುದ್ಧಿವಾದ ಹೇಳಿದ್ದರು. ನಿನ್ನೆ ಮತ್ತೆ ಬಾಲಕಿಯನ್ನು ಹಿಂಬಾಲಿಸಿದ ಝಹೀದ್ ಪ್ರೀತಿಸುವಂತೆ ಪೀಡಿಸಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿನ್ನೆ ರಾತ್ರಿ ಆರೋಪಿಗೆ ಬುದ್ಧಿವಾದ ಹೇಳಲು ಅನ್ವರ್ ಹೋಗಿದ್ದಾರೆ. ಝಹೀದ್ ಕುಟುಂಬದವರಿಗೂ ವಿಚಾರ ತಿಳಿಸಿದ್ದಾರೆ. ಆರೋಪಿಯ ಸಹೋದರ ಬಿಲಾಲ್ ಗೆ ಮಾಹಿತಿ ನೀಡಿದ್ದು, ಇದೇ ವೇಳೆ ಅನ್ವರ್ ಕುತ್ತಿಗೆಗೆ ಝಹೀದ್ ಚಾಕುವಿನಿಂದ ಇರಿದಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅನ್ವರ್ ಸಾವು ಕಂಡಿದ್ದಾರೆ.

ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸಹೋದರ ಬಿಲಾಲ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಝಹೀದ್ ತಲೆಮರಿಸಿಕೊಂಡಿದ್ದು, ಹುಡುಕಾಟ ನಡೆಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular