HomeKarnatakaBIG NEWS: ಸೋಮಣ್ಣ ಪರ ಮುನಿರತ್ನ ಬ್ಯಾಟಿಂಗ್; ಅನ್ಯಾಯವಾಗಿದ್ದು ನಿಜ ಎಂದ ಶಾಸಕ

BIG NEWS: ಸೋಮಣ್ಣ ಪರ ಮುನಿರತ್ನ ಬ್ಯಾಟಿಂಗ್; ಅನ್ಯಾಯವಾಗಿದ್ದು ನಿಜ ಎಂದ ಶಾಸಕ

ಬೆಂಗಳೂರು: ಸ್ವಪಕ್ಷದ ನಾಯಕರ ವಿರುದ್ಧವೇ ಅಸಮಾಧನ ಹೊರ ಹಾಕಿರುವ ಮಾಜಿ ಸಚಿವ ವಿ.ಸೋಮಣ್ಣ ಪರ ಶಾಸಕ ಮುನಿರತ್ನ ಬ್ಯಾಟಿಂಗ್ ಮಾಡಿದ್ದು, ಸೋಮಣ್ಣಗೆ ಅನ್ಯಾಯವಾಗಿದ್ದು ನಿಜ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ಸೋಮಣ್ಣ ಒಳ್ಳೆಯ ಹೆಸರು ಇರುವ ವ್ಯಕ್ತಿ ಅವರಿಗೆ ಎರಡು ಕ್ಷೇತ್ರದ ಬದಲು ಒಂದು ಕ್ಷೇತ್ರ ಕೊಡಬಹುದಿತ್ತು. ಸೋಮಣ್ಣಗೆ ಪಕ್ಷ ಸೂಕ್ತ ಸ್ಥಾನಮಾನ ನೀಡಲಿದೆ ಎಂಬ ನಿರೀಕ್ಷೆ ಇದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಶಾಸಕ ಎಸ್.ಟಿ.ಸೋಮಶೇಖರ್ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರನ್ನು ಅಂದು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗ ಯಾರೂ ಮಾತನಾಡಲಿಲ್ಲ. ಯಡಿಯೂರಪ್ಪ ಬದಲಾವಣೆ ಬಗ್ಗೆ ಕೇಳದವರು ಇಂದು ಮೈತ್ರಿ ಬಗ್ಗೆ ಯಾಕೆ ಕೇಳುತ್ತಾರೆ? ಎಂದು ಪ್ರಶ್ನಿಸಿದರು.

ಹೈಕಮಾಂಡ್ ನಮ್ಮನ್ನು ಒಂದು ಮಾತು ಕೇಳಬಹುದಿತ್ತು ಎಂದು ಯಾಕೆ ಹೇಳುತ್ತೀರಿ? ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರವನ್ನು ಹೈಕಮಾಂಡ್ ಮಾಡಿದೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular