HomeKarnatakaನಾಲ್ವರು ಮಾಜಿ ಸಿಎಂ; ಎಸಿಪಿ, ಇನ್ಸ್ ಪೆಕ್ಟರ್ ಗಳಿಗೂ ಮುನಿರತ್ನ ಹನಿಟ್ರ್ಯಾಪ್: ಬ್ಲಾಕ್ ಮೇಲ್ ಮಾಡಿ...

ನಾಲ್ವರು ಮಾಜಿ ಸಿಎಂ; ಎಸಿಪಿ, ಇನ್ಸ್ ಪೆಕ್ಟರ್ ಗಳಿಗೂ ಮುನಿರತ್ನ ಹನಿಟ್ರ್ಯಾಪ್: ಬ್ಲಾಕ್ ಮೇಲ್ ಮಾಡಿ ರಾಜಕೀಯ ಲಾಭ ಪಡೆದಿದ್ದಾರೆ: ಮತ್ತಷ್ಟು ಸ್ಫೋಟಕ ಹೇಳಿಕೆ ನೀಡಿದ ಸಂತ್ರಸ್ತೆ

ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಹಲವು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.

ರಾಜಭವನ ಬಳಿಯ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂತ್ರಸ್ತೆ, ಶಾಸಕ ಮುನಿರತ್ನ ನಾಲ್ವರು ಮಾಜಿ ಮುಖ್ಯಮಂತ್ರಿಗಳಿಗೆ ಹನಿಟ್ರ್ಯಾಪ್ ಮಾಡಿದ್ದಾರೆ. ನಾಲ್ವರ ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ರಾಜಕೀಯ ಲಾಭ ಪಡೆದುಕೊಂಡಿದ್ದಾರೆ. ಮಾಜಿ ಸಿಎಂ ಒಬ್ಬರ ಆಡಿಯೋ ತೋರಿಸಿಯೇ ಮುನಿರತ್ನ ಮಂತ್ರಿಗಿರಿಯನ್ನು ಪಡೆದಿದ್ದರು. ಅಷ್ಟೇ ಅಲ್ಲ ಎಸಿಪಿ ಹಾಗೂ ಇನ್ಸ್ ಪೆಕ್ಟರ್ ಗಳ ಖಾಸಗಿ ವಿಡಿಯೋ ಕೂಡ ಅವರ ಬಳಿ ಇದೆ ಎಂದು ಸಂತ್ರಸ್ತೆ ಹೇಳಿದ್ದಾರೆ.

ನಾಲ್ಕು ಜನರಿಗೆ ಏಡ್ಸ್ ಟ್ರ್ಯಾಪ್ ಮಾಡಿಸುವ ಪ್ಲಾನ್ ಇತ್ತು. ಮುನಿರತ್ನ ಜಾಮೀನು ಪಡೆದು ಬಿಡುಗಡೆಯಾದರೆ ನನಗೂ ಜೀವ ಭಯವಿದೆ. ಅವರು ಬಿಡುಗಡೆಯಾದ ಬಳಿಕ ಬ್ರೇನ್ ಮ್ಯಾಪಿಂಗ್ ಮಾಡಿಸಲಿ ಎಂದು ಸಂತ್ರಸ್ತೆ ಆಗ್ರಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುನಿರತ್ನ ಬಳಿ ಹಲವರ ಖಾಸಗಿ ವಿಡಿಯೋಗಳಿವೆ. ಅದನ್ನು ಇಟ್ಟುಕೊಂಡು ರಾಜಕೀಯ ಎದುರಾಳಿಗಳನ್ನು ಹಣಿಯುತ್ತಿದ್ದರು ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular