ಮುಂಬೈ: ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆ ಮುಂಬೈ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ಬಿಜೆಪಿ ಮಿತ್ರಕೂಟ ಹಾಗೂ ಠಾಕ್ರೆ ಬ್ರದರ್ಸ್ ನಡುವೆ ಭಾರಿ ಜಿದ್ದಾಜಿದ್ದಿ ಏರ್ಪಟ್ಟಿದೆ.
ಬಿಎಂಸಿ ಮಹಾಯುದ್ಧದಲ್ಲಿ ಬಿಜೆಪಿ ಹಾಗೂ ಉದ್ಧವ್ ಠಾಕ್ರೆಯ ಯುಬಿಟಿ ನಡುವೆ ತೀವ್ರ ಪೈಪೋಟಿ ನಡೆದಿದೆ. ಬಿಜೆಪಿ 50 ಹೆಚ್ಚು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಠಾಕ್ರೆಯ ಶಿವಸೇನೆ ಯುಬಿಟಿ ಕೂಡ 50 ನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
20ಸ್ಥಾನಗಳಲ್ಲಿ ಶಿವಸೇನೆ (ಶಿಂಧೆ) ಪಡೆ ಮುನ್ನಡೆಯಲ್ಲಿದ್ದರೆ ಕೇವಲ 7 ವಾರ್ಡ್ ಗಳಲ್ಲಿ ಎಂಎನ್ ಎಸ್ ಮುನ್ನಡೆಯಲ್ಲಿದೆ.

