HomeIndiaಮುಂಬೈನಲ್ಲಿ ಮಂಗಳಮುಖಿಯರ ಮೊಟ್ಟ ಮೊದಲ ಸಲೂನ್ ಕಾರ್ಯಾರಂಭ

ಮುಂಬೈನಲ್ಲಿ ಮಂಗಳಮುಖಿಯರ ಮೊಟ್ಟ ಮೊದಲ ಸಲೂನ್ ಕಾರ್ಯಾರಂಭ

ಮಂಗಳಮುಖಿ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ನಡೆಯೊಂದರಲ್ಲಿ, ಮುಂಬೈನಲ್ಲಿ ಸಲೂನ್ ಒಂದನ್ನು ತೆರೆಯಲಾಗಿದ್ದು, ಇದನ್ನು ಮಂಗಳಮುಖಿಯರೇ ಆರಂಭಿಸಿ ಅವರೇ ನಡೆಸಿಕೊಂಡು ಹೋಗುತ್ತಿದ್ದಾರೆ.

ಸಮುದಾಯಕ್ಕೆ ಹಣಕಾಸಿನ ಸ್ವಾತಂತ್ರ‍್ಯದ ದಾರಿ ತೋರಿ, ಸಬಲೀಕರಣಗೊಳಿಸಲು ಈ ಹೆಜ್ಜೆಗೆ ಮುಂದಾಗಿದ್ದಾರೆ ಮಂಗಳಮುಖಿಯರು. ಈ ಸಮುದಾಯದ ಏಳು ಮಂದಿ ಸಲೂನ್‌ನ ನಿರ್ವಹಣೆ ಮಾಡಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜ಼ೈನಾಬ್ ಎಂಬ ಮಂಗಳಮುಖಿ ಈ ಸಲೂನ್‌ನ ಮಾಲೀಕರಾಗಿದ್ದಾರೆ. ತಮ್ಮ ಸಮುದಾಯದ ಮಂದಿಗೆ ಇನ್ನಷ್ಟು ಬಲ ತುಂಬುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎನ್ನುತ್ತಾರೆ ಜ಼ೈನಾಬ್. ತಮ್ಮ ಸಲೂನ್‌ನಲ್ಲಿ ಮಂಗಳಮುಖಿಯರಿಗೆ ಕೆಲಸದ ತರಬೇತಿ ಕೊಟ್ಟು ವೃತ್ತಿಯ ಅವಕಾಶಗಳನ್ನು ಸೃಷ್ಟಿಸಲಾಗುವುದು ಎಂದಿದ್ದಾರೆ ಜ಼ೈನಾಬ್. ಡಾಯಿಟ್ಶೆ ಬ್ಯಾಂಕ್ ಹಾಗೂ ಬಾಂಬೆ ರೋಟರಿ ಕ್ಲಬ್ ಸಹಯೋಗದಲ್ಲಿ ಈ ಸಲೂನ್ ಆರಂಭಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular