HomeLatest Newsಕಾಶ್ಮೀರಿ ಯುವತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರಿಕೆಟರ್ ಸರ್ಫರಾಜ್

ಕಾಶ್ಮೀರಿ ಯುವತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರಿಕೆಟರ್ ಸರ್ಫರಾಜ್

ಶ್ರೀನಗರ: ದೇಶಿ ಕ್ರಿಕೆಟ್ ನ ಸ್ಟಾರ್ ಆಟಗಾರ ಸರ್ಫರಾಜ್ ಖಾನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಣಿವೆ ರಾಜ್ಯದ ಸುಂದರಿಯನ್ನು ವರಿಸಿದ್ದಾರೆ. ಮದುವೆಯ ಸಂಭ್ರಮದ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

ಮುಂಬೈ ಆಟಗಾರ ಸರ್ಫರಾಜ್, ಜಮ್ಮು-ಕಾಶ್ಮೀರದ ಯುವತಿಯೊಂದಿಗೆ ಕಾಶ್ಮೀರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗಾಗಿ ಆಡುವ ಸರ್ಫ್ ರಾಜ್ ಮದುವೆಯಲ್ಲಿ ಕಪ್ಪು ಶೆರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಮಾಜಿಕ ಜಾಲತಾಣಗಳಲ್ಲಿ ಸರ್ಫರಾಜ್ ವಿವಾಹ ಸಂದರ್ಭದ ಫೋಟೋಗಳು ಹರಿದಾಡುತ್ತಿವೆ. ಕ್ರಿಕೇಟರ್ಸ್ ಗಳಾದ ಸೂರ್ಯಕುಮಾರ್ ಯಾದವ್, ಉಮ್ರಾನ್ ಮಲಿಕ್, ರುತುರಾಜ್ ಗಾಯಕವಾಡ್, ಮಂದೀಪ್ ಸಿಂಗ್, ಕಲೀಲ್ ಅಹ್ಮದ್, ತಿಲಕ್ ವರ್ಮಾ, ಅಕ್ಷರ್ ಪಟೇಲ್ ಸರ್ಫರಾಜ್ ಗೆ ಶುಭ ಹಾರೈಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular