HomeKarnatakaರಾಜ್ಯದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾದ ಸಚಿವ ಎಂಟಿಬಿ ನಾಗರಾಜ್ ಆಸ್ತಿ ಎಷ್ಟಿದೆ ಗೊತ್ತಾ…?

ರಾಜ್ಯದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾದ ಸಚಿವ ಎಂಟಿಬಿ ನಾಗರಾಜ್ ಆಸ್ತಿ ಎಷ್ಟಿದೆ ಗೊತ್ತಾ…?

ಬೆಂಗಳೂರು: ರಾಜ್ಯದ ಶ್ರೀಮಂತರ ರಾಜಕಾರಣಿಗಳಲ್ಲಿ ಒಬ್ಬರಾದ ಸಚಿವ ಎಂಟಿಬಿ ನಾಗರಾಜ್ ಬರೋಬ್ಬರಿ 1,510 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಅವರು ತಮ್ಮ ಒಟ್ಟು ಆಸ್ತಿಯ ವಿವರ ಘೋಷಣೆ ಮಾಡಿದ್ದಾರೆ. 2019 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಎಂಟಿಬಿ ನಾಗರಾಜ್ ಸಚಿವ ಸ್ಥಾನ ಪಡೆದ ನಂತರ ಮೂರು ವರ್ಷದಲ್ಲಿ ಅವರ ಆಸ್ತಿ ಶೇಕಡ 23ರಷ್ಟು ಹೆಚ್ಚಳವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಂಟಿಬಿ ನಾಗರಾಜ್ ಹೆಸರಲ್ಲಿ 792 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 372 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ. ಎಂಟಿಬಿ ನಾಗರಾಜ್ ಅವರ ಪತ್ನಿ ಶಾಂತಮ್ಮ ನಾಗರಾಜ್ ಅವರ ಬಳಿ 274 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ, 163 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ.

ಎಂಟಿಬಿ ನಾಗರಾಜ್ 71 ಕೋಟಿ ರೂ., ಅವರ ಪತ್ನಿಯ ಹೆಸರಲ್ಲಿ 27 ಕೋಟಿ ಸಾಲ ಇದೆ. ಎಂಟಿಬಿ ಬಳಿ 1.72 ಕೋಟಿ ರೂ ಮೌಲ್ಯದ ಕಾರ್ ಗಳು, ಪತ್ನಿಯ ಬಳಿ 1.33 ಕೋಟಿ ರೂ. ಮೌಲ್ಯದ ಕಾರ್ ಗಳು ಇವೆ. ಎಂಟಿಬಿ ಬಳಿ 64 ಲಕ್ಷ ರೂ., ಅವರ ಪತ್ನಿಯ ಬಳಿ 34 ಲಕ್ಷ ರೂ. ನಗದು ಇದೆ. ಇದರೊಂದಿಗೆ 2.41 ಕೋಟಿ ರೂ ಮೌಲ್ಯದ ಚಿನ್ನಾಭರಣವನ್ನು ಎಂಟಿಬಿ ಹೊಂದಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular